ಚಿತ್ತಾಪುರದಲ್ಲಿ ಒಳ ಮೀಸಲಾತಿ ಜಾರಿಗೆ ಸಾಧಕ ಬಾಧಕಗಳ ಕುರಿತು ಸಮಾಲೋಚನೆ ಸಭೆ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ಪಟ್ಟಣದ ಕಾಶಿ ಗಲ್ಲಿಯ ಭೋವಿ ವಡ್ಡರ ಸಮುದಾಯ ಭವನದಲ್ಲಿ ಅಖಿಲ ಕರ್ನಾಟಕ ಬಂಜಾರ ಭೋವಿ, ಕೊರಮ ಮತ್ತು ಕೊರಚ ಸಮಾಜಗಳ ಕ್ಷೇಮಾಭಿವೃದ್ಧಿ ಸಂಘ ಕಲಬುರಗಿ ವತಿಯಿಂದ ಒಳ ಮೀಸಲಾತಿ ಜಾರಿಗೆ ಸಾಧಕ ಬಾಧಕಗಳ ಕುರಿತು ಸಮಾಲೋಚನೆ ಸಭೆ ನಡೆಯಿತು.
ಇದೇ ನ.20 ರಂದು ಬೆಂಗಳೂರಿನಲ್ಲಿ ಎ.ಜೆ ಸದಾಶಿವ ಆಯೋಗದ ವಿರುದ್ಧ ಉಗ್ರವಾದ ಹೋರಾಟವನ್ನು ಹಮ್ಮಿಕೊಳ್ಳಲಾಗಿದೆ, ಹೀಗಾಗಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವ ನಿರ್ಧಾರ ಕೈಗೊಳ್ಳಲಾಯಿತು.
ನಮ್ಮ ಜಾತಿ ಜನಾಂಗದ ಶಿಕ್ಷಣ ಉದ್ಯೋಗ, ಅರ್ಥಿಕ ಸ್ಥಿತಿಗತಿಗಳ ಜನಸಂಖ್ಯೆ ದತ್ತಾಂಶ ಸಮೀಕ್ಷೆ ಮಾಡುವ ಕುರಿತು ಜನರಲ್ಲಿ ಜಾಗೃತಿ ಮುಡಿಸುವುದು ನಮ್ಮ ಉದ್ದೇಶವಾಗಿದೆ ಎಂದು ಜಿಲ್ಲಾಧ್ಯಕ್ಷ ಶಾಮರಾವ್ ಪವಾರ್ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಪ್ರಧಾನ ಕಾರ್ಯದರ್ಶಿಗಳಾದ ತಿಪ್ಪಯ್ಯ ಒಡೆಯರಾಜ, ಭೀಮಸಿಂಗ್ ಚವ್ಹಾಣ ಜಿಲ್ಲಾ ಸದಸ್ಯರಾದ ಚಂದು ಜಾಧವ, ಬಿ.ಜಿ ಸಿಂಗ್, ಜಗದೀಶ ಚವ್ಹಾಣ, ರಾಜೇಶ್ ಕಾಶಿ, ಗೋಪಾಲ್ ರಾಠೋಡ್, ಪ್ರಭು ಕಾಶಿ, ರಮೇಶ್ ಕಾಶಿ, ವಿಠ್ಠಲ ಕಟ್ಟಿಮನಿ, ಸುಭಾಷ್ ಕಾಶಿ, ಚಂದ್ರು ಪವಾರ್, ವಿಜಯಕುಮಾರ್, ಮಹೇಶ್ ಎನ್. ಕಾಶಿ, ಶಿವರಾಮ್ ಚವ್ಹಾಣ, ಚಂದರ್ ಚವ್ಹಾಣ, ರವಿ ವಿಟ್ಕರ್, ಮನೋಜಕುಮಾರ್ ಸೇರಿದಂತೆ ಸಮಾಜ ಬಂಧುಗಳು ಉಪಸ್ಥಿತರಿದ್ದರು.