ಚಿತ್ತಾಪುರದಲ್ಲಿ ರಾಕಿಂಗ್ ಸ್ಟಾರ್ ಯಶ್ ಜನ್ಮದಿನಾಚರಣೆ, ಅಸಂಖ್ಯಾತ ಅಭಿಮಾನಿಗಳು ಹೊಂದಿದ ಯಶ್ ಅದ್ಬುತ ನಟ: ಗುತ್ತೇದಾರ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ಚಿಕ್ಕ ವಯಸ್ಸಿನಲ್ಲೇ ಹಾಗೂ ಕಡಿಮೆ ಸಮಯದಲ್ಲಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ರಾಕಿಂಗ್ ಸ್ಟಾರ್ ಯಶ್, ರಾಕೀ ಭಾಯಿ ಅವರು ಅಸಂಖ್ಯಾತ ಅಭಿಮಾನಿಗಳು ಹೊಂದಿದ ಅದ್ಭುತ ಚಿತ್ರನಟ ಎಂದು ನಾಗಾವಿ ಸಾಹಿತ್ಯ ಸಾಂಸ್ಕೃತಿಕ ಪರಿಷತ್ ಅಧ್ಯಕ್ಷ ಕಾಶಿನಾಥ ಗುತ್ತೇದಾರ ಹೇಳಿದರು.
ಪಟ್ಟಣದ ಜ್ಯೋತಿ ಸೇವಾ ಕೇಂದ್ರದ ಏರಿಯಾದಲ್ಲಿ ಯಶ್ ಅಭಿಮಾನಿಗಳು ಹಮ್ಮಿಕೊಂಡಿದ್ದ ಚಿತ್ರನಟ ಯಶ್ ಅವರ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಕೇಕ್ ಕತ್ತರಿಸಿ ಮಾತನಾಡಿದ ಅವರು, ಚಿತ್ರರಂಗದ ಜೊತೆಗೆ ಸಾಮಾಜಿಕ ಸೇವೆಯಲ್ಲಿ ತೊಡಗಿರುವ ಯಶ್ ಯುವ ಜನಾಂಗದ ನೆಚ್ಚಿನ ನಟರಾಗಿ ಹೊರಹೊಮ್ಮಿದ್ದಾರೆ ಎಂದರು.
ಇಂದು ಎಲ್ಲರ ಮನ ಮತ್ತು ಮನೆಗಳಲ್ಲಿ ಅಜರಾಮರವಾಗಿ ಉಳಿದ ದಿ.ಪುನೀತ್ ರಾಜಕುಮಾರ್ ಅವರ ಸೇವೆ ಅಪಾರವಾಗಿದೆ, ಅವರು ಮಾಡಿದ ಸಾಧನೆ ಮತ್ತು ಸೇವೆ ಜೀವಂತವಾಗಿ ಇದ್ದಾಗ ಯಾರಿಗೂ ತಿಳಿದಿರಲಿಲ್ಲ ಅವರು ನಿಧನರಾದ ನಂತರ ಅವರ ಸಾಧನೆಗಳು ಬಯಲಿಗೆ ಬಂದವು ಎಂದು ಸ್ಮರಿಸಿದರು. ಹೀಗಾಗಿ ಯಾರೇ ಆಗಲಿ ಜೀವಂತವಾಗಿರುವಾಗ ಮಾಡಿದ ಸಾಧನೆಗಳನ್ನು ಗುರುತಿಸಿ ಪ್ರೋತ್ಸಾಹಿಸುವ ಕೆಲಸ ಎಲ್ಲರೂ ಮಾಡಬೇಕಿದೆ, ಯಾರ ಮೇಲೆಯೂ ಜಿಗುಪ್ಸೆ ಪಡಬೇಡಿ ಎಂದು ಕಿವಿಮಾತು ಹೇಳಿದರು.
ಯಶ್ ಅಭಿಮಾನಿಗಳು ರಾಕಿಂಗ್ ಸ್ಟಾರ್ ಯಶ್ ಅವರ ಜನ್ಮ ದಿನಾಚರಣೆ ಮಾಡುತ್ತಿರುವ ಕಾರ್ಯ ಶ್ಲಾಘನೀಯ ಇದರಿಂದ ಅವರಲ್ಲಿನ ಅಭಿಮಾನ ಎತ್ತಿ ತೋರಿಸುತ್ತದೆ ಎಂದು ಹೇಳಿದರು.
ಮೊಗಲಾ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಕಿಶನ್ ಚವ್ಹಾಣ ಕೇಕ್ ಕತ್ತರಿಸಿದರು. ಮುಖಂಡರಾದ ಸಾಬಣ್ಣ ಮಳಖೇಡ, ಯಲ್ಲಯ್ಯ ಕಲಾಲ್, ಯಶ್ ಅಭಿಮಾನಿಗಳಾದ ಆಕಾಶ ಬಿರಾದಾರ, ವಿಶ್ವನಾಥ ಬಿರಾದಾರ, ಮಲ್ಲಿಕಾರ್ಜುನ ತಳ್ಳಿ, ನಾಗರಾಜ ತಳ್ಳಿ, ಮಂಜುನಾಥ ಸ್ವಾಮಿ, ಯೋಗೇಶ್ ಕಲಾಲ್, ಅಭಿಷೇಕ್ ಮುಕ್ತೇದಾರ, ಜಗದೇವ ಗುತ್ತೇದಾರ, ನಿತೀಶ್ ಕಲಾಲ್, ಸಿದ್ದಣ್ಣಗೌಡ, ಪ್ರೀತಮ್ ಮಡಿವಾಳ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.