Oplus_131072

ಚಿತ್ತಾಪುರದಲ್ಲಿ ಏಪ್ರಿಲ್ 6 ರಿಂದ 16 ರವರೆಗೆ ಶರಣಬಸವೇಶ್ವರ ಜೀವನ ದರ್ಶನ ಪ್ರವಚನ, 17 ರಂದು ಭವ್ಯ ರಥೋತ್ಸವ: ನಾಗರಾಜ ಭಂಕಲಗಿ

ನಾಗಾವಿ ಎಕ್ಸಪ್ರೆಸ್

ಚಿತ್ತಾಪುರ: ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆ ಚಿತ್ತಾಪುರ ಹಾಗೂ ಶ್ರೀ ಶರಣಬಸವೇಶ್ವರ ದೇವಸ್ಥಾನ ಜೀರ್ಣೋದ್ದಾರ ಹಾಗೂ ಸೇವಾ ಟ್ರಸ್ಟ್ ಇವರ ಸಹಯೋಗದೊಂದಿಗೆ ಶ್ರೀ ಶರಣಬಸವೇಶ್ವರ ಜಾತ್ರಾ ಮಹೋತ್ಸವ ಹಾಗೂ ದೇವಸ್ಥಾನ ಅಭಿವೃದ್ಧಿಯ ಪ್ರಯುಕ್ತ ಪಟ್ಟಣದ ವರುಣ ನಗರದ ದೇವಸ್ಥಾನದ ಆವರಣದಲ್ಲಿ  ಪರಮ ಪೂಜ್ಯರ ಸಾನಿಧ್ಯದಲ್ಲಿ ಏಪ್ರಿಲ್ 6 ರಿಂದ 16 ರವರೆಗೆ ಪ್ರತಿದಿನ ಸಂಜೆ 7.30ಕ್ಕೆ ಮಹಾದಾಸೋಹಿ ಶ್ರೀ ಶರಣಬಸವೇಶ್ವರ ಜೀವನ ದರ್ಶನ ಪ್ರವಚನ ಹಮ್ಮಿಕೊಳ್ಳಲಾಗಿದೆ ಎಂದು ವೀರಶೈವ ಲಿಂಗಾಯತ ಮಹಾಸಭಾ ತಾಲೂಕು ಅಧ್ಯಕ್ಷ ನಾಗರಾಜ ಭಂಕಲಗಿ ಹೇಳಿದರು.

ಪಟ್ಟಣದ ವರುಣ ನಗರದ ಶರಣಬಸವೇಶ್ವರ ದೇವಸ್ಥಾನದಲ್ಲಿ ಭಾನುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಏ.16 ರಂದು ಸಂಜೆ 07.30ಕ್ಕೆ ಮುತ್ತೈದೆಯರಿಗೆ ಉಡಿ ತುಂಬುವ ಕಾರ್ಯಕ್ರಮ ಏ. 17 ರಂದು ಸಂಜೆ 6.30ಕ್ಕೆ ಭವ್ಯ ರಥೋತ್ಸವ ನಂತರ ಮಹಾಪ್ರಸಾದ ನಡೆಯಲಿದೆ ಎಂದು ಹೇಳಿದರು.

ಇದೆ ವೇಳೆ ನಾಡಿನ ಪರಮಪೂಜ್ಯರಿಗೆ, ವಿವಿಧ ಕ್ಷೇತ್ರದ ಗಣ್ಯರಿಗೆ ಹಾಗೂ ದಾನಿಗಳಿಗೆ ಮತ್ತು ಶ್ರಮದಾನಿಗಳಿಗೆ ಗೌರವ ಸತ್ಕಾರ ಸಮಾರಂಭ ಹಾಗೂ ಚನ್ನವೀರ ಬೆಳಗುಂಪಾ ಕಲಾ ತಂಡದಿಂದ ಹಾಸ್ಯ ರಸಮಂಜರಿ ಕಾರ್ಯಕ್ರಮ ನಡೆಯಲಿದೆ. ಪ್ರತಿದಿನ ಪ್ರವಚನದ ನಂತರ ಮಹಿಳೆಯರಿಗೆ ಮನೆಗೆ ತೆರಳಲು ಬಸ್ಸಿನ ವ್ಯವಸ್ಥೆ ಮಾಡಲಾಗಿದೆ ಹೀಗಾಗಿ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಕೋರಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಕಂಬಳೇಶ್ವರ ಶ್ರೀ ಸೋಮಶೇಖರ ಶಿವಾಚಾರ್ಯರು, ಟ್ರಸ್ಟ್ ಅಧ್ಯಕ್ಷ ವಿಜಯಕುಮಾರ ಎಮ್. ದೇಶಮುಖ, ಪ್ರಮುಖರಾದ ಆನಂದ ಪಾಟೀಲ ನರಿಬೋಳ, ಬಸವರಾಜ ಕಾಳಗಿ, ಮಲ್ಲಿಕಾರ್ಜುನ ರೆಡ್ಡಿ ಇಜಾರ್, ಕೋಟೇಶ್ವರ ರೇಷ್ಮಿ, ಶಿವರೆಡ್ಡಿ ಪಾಲಪ್, ಅಂಬರೀಷ್ ಸುಲೇಗಾಂವ, ಮಹಾದೇವ ಅಂಗಡಿ, ಶಿವುಕುಮಾರ ಪೂಜಾರಿ ಸೇರಿದಂತೆ ಇತರರು ಇದ್ದರು.

Spread the love

Leave a Reply

Your email address will not be published. Required fields are marked *

error: Content is protected !!