ಚಿತ್ತಾಪುರದಲ್ಲಿ ಶ್ರೀ ರಾಘವೇಂದ್ರ ಸ್ವಾಮಿಗಳ 11ನೇಯ ವರ್ಧಂತಿ ಮಹೋತ್ಸವ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ಪಟ್ಟಣದ ಬ್ರಾಹ್ಮಣ ಗಲ್ಲಿಯ ಶ್ರೀ ರಾಘವೇಂದ್ರ ಸ್ವಾಮಿ ವೃಂದಾವನ ಉತ್ತಾರಾಧಿಮಠದಲ್ಲಿ ಕಲಿಯುಗದ ಕಾಮಧೇನು, ಕಲ್ಪವೃಕ್ಷರೆಂದು ಪ್ರಸಿದ್ದರಾದ ಶ್ರೀ ಗುರು ರಾಘವೇಂದ್ರ ಸ್ವಾಮಿಗಳ 11ನೇಯ ವರ್ಧಂತಿ ಮಹೋತ್ಸವ ಜರುಗಿತ್ತು.
ಶ್ರೀ ಸತ್ಯಾತ್ಮತೀರ್ಥ ಶ್ರೀ ಪಾದಂಗಳವರಿಂದ ಪುನರ್ ಪ್ರತಿಷ್ಠಾಪಿಸಲ್ಪಟ್ಟಿದ್ದು 11ನೇಯ ವರ್ಧಂತಿ ಮಹೋತ್ಸವ ಅದ್ದೂರಿಯಾಗಿ ನಡೆಯಿತು. ಅಷ್ಟೋತ್ತರ, ಅಭಿಷೇಕ ಆಲಂಕಾರ ಹಸ್ತೋದಕ, ನೈವಿಧ್ಯ ಸಾಂಗವಾಗಿ ನಡೆಯಿತು. ಬೆಳಿಗ್ಗೆ ಗಣ ವಾಹನ ಸೇವೆ ಮತ್ತು ರಥೋತ್ಸವ ಸೇವೆ ನಡೆಯಿತು. ಸದ್ಭಕ್ತರು ತನು ಮನ ಧನದಿಂದ ಸೇವೆ ಸಲ್ಲಿಸಿ ತೀರ್ಥ ಪ್ರಸಾದವನ್ನು ಸ್ವೀಕರಿಸಿ ಶ್ರೀ ಗುರು ರಾಯರ ಕೃಪೆಗೆ ಪಾತ್ರರಾದರು.
ಬ್ರಾಹ್ಮಣ ಸಮಾಜದ ತಾಲೂಕು ಅಧ್ಯಕ್ಷ ಗಿರೀಶ್ ಜಾನಿಬ್, ವಾಮನರಾವ್ ಪಾಟೀಲ ಪುತ್ರ ಸುಧೀಂದ್ರ ಪಾಟೀಲ್ ಮತ್ತು ದಿ. ಜಯತೀರ್ಥ ಪಾಟೀಲ್ ಅವರ ಪತ್ನಿ ಸ್ವಪ್ನಾ ಪಾಟೀಲ ಅವರ ನೇತೃತ್ವದಲ್ಲಿ ಅನ್ನದಾನ ನಡೆಯಿತು. ಮಳಖೇಡದ ಸುಧಾ ಪಂಡಿತರಾದ ಶ್ರೀ ವೆಂಕಣಚಾರ್ಯರು ಮತ್ತು ಅರ್ಚಕರು ಪೂಜೆ ಕಾರ್ಯ ಜರುಗಿಸಿದರು. ಪ್ರತೀಕ್ಷಾ ವಾದಿರಾಜ ಉಪಾಧ್ಯಾಯ ಬಿಜಾಪುರ್ ಇವರಿಂದ ಭರತನಾಟ್ಯ ನಡೆಯಿತು ಭರತನಾಟ್ಯ ನಡೆಯಿತು.
ಈ ಸಂದರ್ಭದಲ್ಲಿ ಹಣಮಂತ್ರಾವ್ ಕೊಡದೂರ್, ಪವನ್ ಜೋಶಿ, ಸಂಜೀವ್ ಕುಲಕರ್ಣಿ ಕೊಡದೂರ, ಗೋಪಾಲರಾವ್ ಅಫಜಲಪುರ, ಅಪ್ಪಾಸಾಹೇಬ್ ಬೊಮ್ಮನಹಳ್ಳಿ, ಆನಂದ ಕುಲಕರ್ಣಿ, ರಾಜು ದೇಶಪಾಂಡೆ, ನರಹರಿ ಕುಲಕರ್ಣಿ, ಸರಿತಾ ಪಾಟೀಲ, ಸುಂದರ ಕುಲಕರ್ಣಿ, ಶೃತಿ ಜಾನಿಬ್, ಅನ್ನಪೂರ್ಣ ಪಾಟೀಲ, ರಾಧಾಬಾಯಿ ಬೊಮ್ಮನಳ್ಳಿಕರ್ ಸೇರಿದಂತೆ ಅನೇಕರು ಇದ್ದರು.