ವಿಶ್ವಗುರು ಶ್ರೀ ಬಸವಣ್ಣನವರ ಜಯಂತ್ಯೋತ್ಸವ ನಿಮಿತ್ತ ಚಿತ್ತಾಪುರದಲ್ಲಿ ಅದ್ದೂರಿ ಮೆರವಣಿಗೆ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ತಾಲೂಕು ಆಡಳಿತ ಹಾಗೂ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಚಿತ್ತಾಪುರ ತಾಲೂಕು ಘಟಕದ ಸಹಯೋಗದಲ್ಲಿ ಬುಧವಾರ ಹಮ್ಮಿಕೊಂಡಿದ್ದ ವಿಶ್ವಗುರು ಶ್ರೀ ಬಸವಣ್ಣನವರ 892 ನೇ ಜಯಂತ್ಯೋತ್ಸವದ ಅದ್ದೂರಿ ಮೆರವಣಿಗೆಗೆ ತಹಸೀಲ್ದಾರ್ ನಾಗಯ್ಯ ಹಿರೇಮಠ ಚಾಲನೆ ನೀಡಿದರು.
ತಹಸೀಲ್ ಕಚೇರಿಯಿಂದ ಪ್ರಾರಂಭವಾದ ಬಸವಣ್ಣನವರ ಭಾವಚಿತ್ರದ ಭವ್ಯ ಮೆರವಣಿಗೆ, ಸ್ಟೇಷನ್ ರಸ್ತೆ, ನಾಗಾವಿ ವೃತ್ತ, ಜನತಾ ವೃತ್ತ, ಕಪ್ಪಡಾ ಬಜಾರ್, ಚಿತ್ತಾವಲಿ ವೃತ್ತ, ಹೋಳಿಕಟ್ಟಾ, ಭುವನೇಶ್ವರಿ ವೃತ್ತ, ಅಂಬೇಡ್ಕರ್ ವೃತ್ತ, ಬಸ್ ನಿಲ್ದಾಣ ರಸ್ತೆ, ಬಸವೇಶ್ವರ ವೃತ್ತದ ಮುಖಾಂತರ ಪುನಃ ತಹಸೀಲ್ ಕಚೇರಿಯ ಆವರಣದಲ್ಲಿ ಸಮಾವೇಶಗೊಂಡಿತ್ತು. ಮೆರವಣಿಗೆಯಲ್ಲಿ ಡೊಳ್ಳು ಕುಣಿತ, ಅದರಲ್ಲೂ ಸಿಂಗಾರಗೊಂಡ 101 ಜೋಡಿ ಎತ್ತುಗಳು ಎಲ್ಲರಿಗೂ ಆಕರ್ಷಿಸಿತು. ವಿಶೇಷವಾಗಿ ರಕ್ತದಾನ ಶಿಬಿರ ನಡೆಯಿತು.
ಕಂಬಳೇಶ್ವರ ಶ್ರೀ ಸೋಮಶೇಖರ ಶಿವಾಚಾರ್ಯರು, ಪುರಸಭೆ ಅಧ್ಯಕ್ಷೆ ಅನ್ನಪೂರ್ಣ ನಾಗಪ್ಪ ಕಲ್ಲಕ್, ಕೆಪಿಸಿಸಿ ಸದಸ್ಯ ನಾಗರೆಡ್ಡಿ ಪಾಟೀಲ ಕರದಾಳ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಭೀಮಣ್ಣ ಸಾಲಿ, ಮುಖಂಡರಾದ ಸೋಮಶೇಖರ ಪಾಟೀಲ ಬೆಳಗುಂಪಾ, ರವೀಂದ್ರ ಸಜ್ಜನಶೆಟ್ಟಿ, ಡಾ.ಚಂದ್ರಶೇಖರ ಕಾಂತಾ, ಚಂದ್ರಶೇಖರ ಸಾತನೂರು, ರಮೇಶ್ ಬೊಮ್ಮನಳ್ಳಿ, ಆನಂದ ಪಾಟೀಲ ನರಿಬೋಳ, ಚಂದ್ರಶೇಖರ ಅವಂಟಿ, ಚಂದ್ರಶೇಖರ ಉಟಗೂರ, ಅನೀಲ್ ವಡ್ಡಡಗಿ, ಶಾಂತಣ್ಣ ಚಾಳೀಕಾರ, ನಾಗರಾಜ ರೇಷ್ಮೆ, ಎಸ್.ಎನ್.ಪಾಟೀಲ, ಬಸವರಾಜ ಪಾಟೀಲ ಬೆಳಗುಂಪಾ, ಮಲ್ಲಿಕಾರ್ಜುನ ಕಾಳಗಿ, ಪಾಶಾಮಿಯ್ಯಾ ಖುರೇಷಿ, ರಾಚಣ್ಣ ಬೊಮ್ಮನಳ್ಳಿ, ಶ್ರೀಕಾಂತ್ ಸುಲೇಗಾಂವ, ನಾಗರೆಡ್ಡಿ ಗೋಪಸೇನ್, ನಾಗರಾಜ ಕಡಬೂರ, ದೇವು ಯಾಬಾಳ, ಮಹೇಶ್ ಬೆಟಗೇರಿ, ನಿಂಗಣ್ಣ ಹೆಗಲೇರಿ, ರವಿ ಗೊಬ್ಬರ, ರೇವಣಸಿದ್ದಪ್ಪ ರೋಣದ್, ಭೀಮು ಹೊತಿನಮಡಿ, ರಾಜಣ್ಣ ಕರದಾಳ, ರಮೇಶ್ ಕಾಳನೂರು, ಗ್ರೇಡ್ 2 ತಹಸೀಲ್ದಾರ್ ರಾಜಕುಮಾರ್ ಮರತೂರಕರ್, ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಮೊಹಮ್ಮದ್ ಅಕ್ರಂ ಪಾಷಾ, ಪುರಸಭೆ ಮುಖ್ಯಾಧಿಕಾರಿ ಮನೋಜಕುಮಾರ ಗುರಿಕಾರ, ಪಿಎಸ್ಐ ಚಂದ್ರಾಮಪ್ಪ, ತಾಲೂಕು ಅಧಿಕಾರಿಗಳಾದ ಸಂಜೀವಕುಮಾರ ಮಾನಕರ್, ಶಶಿಧರ ಬಿರಾದಾರ, ಮಹ್ಮದ್ ಸಲೀಮ್, ಶಂಕರಗೌಡ ಸೇರಿದಂತೆ ಇತರರು ಉಪಸ್ಥಿತರಿದ್ದರು.