ಚಿತ್ತಾಪುರ ಯುವ ಕಾಂಗ್ರೆಸ್ ಅಧ್ಯಕ್ಷ ದೇವಿಂದ್ರ ಯಾಬಾಳ ಅವರಿಗೆ ಕೋಲಿ ಸಮಾಜದಿಂದ ಹೃದಯಸ್ಪರ್ಶಿ ಸನ್ಮಾನ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ಯುವ ಕಾಂಗ್ರೆಸ್ ನೂತನ ಅಧ್ಯಕ್ಷ ದೇವಿಂದ್ರ ಯಾಬಾಳ ಅವರಿಗೆ ಕೋಲಿ ಸಮಾಜದ ತಾಲೂಕು ಅಧ್ಯಕ್ಷ ಶಿವುಕುಮಾರ ಯಾಗಾಪೂರ ಹಾಗೂ ಯುವ ಅಧ್ಯಕ್ಷ ಮಲ್ಲಿಕಾರ್ಜುನ ಅಲ್ಲೂರಕರ್ ಅವರ ನೇತೃತ್ವದಲ್ಲಿ ಪಟ್ಟಣದ ಶ್ರೀ ನಿಜಶರಣ ಅಂಬಿಗರ ಚೌಡಯ್ಯ ವೃತ್ತದಲ್ಲಿ ಮುಖಂಡರು ಹೃದಯಸ್ಪರ್ಶಿ ಸನ್ಮಾನ ಮಾಡಿ ಶುಭಾಶಯಗಳು ಕೋರಿದರು.
ತಾಲೂಕು ಅಧ್ಯಕ್ಷ ಶಿವುಕುಮಾರ ಯಾಗಾಪೂರ ಮಾತನಾಡಿ, ಚಿಕ್ಕ ವಯಸ್ಸಿನಲ್ಲೇ ಯುವ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಕೋಲಿ ಸಮಾಜದ ಯುವ ಮುಖಂಡ ದೇವಿಂದ್ರ ಯಾಬಾಳ ದಿಗ್ಗಾಂವ ಆಯ್ಕೆಯಾಗಿರುವುದು ತುಂಬಾ ಸಂತೋಷ ಹಾಗೂ ಹೆಮ್ಮೆಯ ವಿಷಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಮುಂದಿನ ಅವರ ರಾಜಕೀಯ ಜೀವನ ಉಜ್ವಲವಾಗಲಿ ಎಂದು ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಹಿರಿಯರಾದ ಕೋಲಿ ಸಮಾಜದ ಗೌರವಾಧ್ಯಕ್ಷ ಭೀಮಣ್ಣ ಸೀಬಾ, ಯುವ ಗೌರವಾಧ್ಯಕ್ಷ ಗುಂಡು ಐನಾಪುರ, ಮುಖಂಡರಾದ ಸಾಬ್ಬಣ್ಣ ಡಿಗ್ಗಿ, ಅಂಬು ಹೋಳಿಕಟ್ಟಿ, ಸಂತೋಷ ನಾಟೀಕಾರ, ತಿಪ್ಪಣ್ಣ ಇವಣಿ, ರಾಜಶೇಖರ ಮೂಲಿಮನಿ ಹೊಸ್ಸುರ್, ಕಾಶಿನಾಥ ಟೆಂಗಳಿ, ಮಹಾದೇವ ಅಲ್ಲೂರ.ಬಿ, ಶರಣು ಭಾಗೋಡಿ, ಗಂಗಾಧರ ಡಿಗ್ಗಿ, ರವಿಕುಮಾರ ದೊಡ್ಡಮನಿ, ಸಂಗು ನಾಟೀಕಾರ, ರಾಜು ಪುಟಪಾಕ್, ಆನಂದ ಯರಗಲ್, ಸಾಬ್ಬಣ್ಣ ಹೋಳಿಕಟ್ಟಿ, ಶೇಖರ ಆಲೂರ, ರಮೇಶ ವಾಡಿ, ಸೂರ್ಯಕಾಂತ ಕೊಂಕನಳ್ಳಿ, ಕಿಶನ್ ಮುಕೆ ಸೇರಿದಂತೆ ಸಮಾಜದ ಮುಖಂಡರು ಇದ್ದರು.