ದಿ.10 ರಿಂದ ಮೋತಕಪಲ್ಲಿ ಶ್ರೀ ಬಲಭೀಮಸೇನ ಜಾತ್ರಾ ಮಹೋತ್ಸವ ಪ್ರಾರಂಭ
ನಾಗಾವಿ ಎಕ್ಸಪ್ರೆಸ್
ಸೇಡಂ: ತಾಲೂಕಿನ ತಿರುಪತಿಯ ಪೂರ್ವ ಮಹಾದ್ವಾರವೆಂದು ಪ್ರಖ್ಯಾತವಾಗಿರುವ ಶ್ರೀ ಬಲಭೀಮಸೇನ ದೇವಸ್ಥಾನ ಶ್ರೀ ಕ್ಷೇತ್ರ ಮೋತಕಪಲ್ಲಿ ಜಾತ್ರಾ ಮಹೋತ್ಸವ ಡಿಸೆಂಬರ್ 10 ರಿಂದ 20 ರವರೆಗೆ ಅದ್ದೂರಿಯಾಗಿ ನಡೆಯಲಿದೆ ಎಂದು ಮೋತಕಪಲ್ಲಿ ಶ್ರೀ ಬಲಭೀಮಸೇನ ದೇವಸ್ಥಾನದ ಸಮಿತಿಯವರು ತಿಳಿಸಿದ್ದಾರೆ.
ದಿ.10 ರಂದು ದಶಮಿ ಧ್ವಜಾರೋಹಣ ಕಾರ್ಯಕ್ರಮ, ದಿ. 11 ರಂದು ಏಕಾದಶಿ (ಉಪವಾಸ) ಮತ್ತು ಶ್ರೀಗೀತಾ ಜಯಂತಿ, ದಿ.12 ರಂದು ದ್ವಾದಶಿ ಪಾರಣಿ ಕಾರ್ಯಕ್ರಮ, ಪಲಕ್ಕಿ ಉತ್ಸವ ದಿ.13 ರಂದು ತ್ರಯೋದಶಿ ಶ್ರೀ ಹನುಮದ್ಮತ ಕಾರ್ಯಕ್ರಮ, ದಿ.14 ರಂದು ಚತುರ್ದಶಿ ವಿಶೇಷ ಮಹಾರುದ್ರಾಭಿಷೇಕ, ದಿ.15 ರಂದು ಪೌರ್ಣಿಮಾ ಮಹಾರಥೋತ್ಸವ, ದಿ.16 ರಂದು ಪ್ರತಿಪತ್ ಹೂವಿನ ಗಜವಾಹನೋತ್ಸವ ಮತ್ತು ಸ್ವಾಮಿ ಪುಸ್ಕರಣಿಯಲ್ಲಿ ಅವಕೃತ ಸ್ನಾನ, ದಿ.17 ರಿಂದ 19 ರ ವರೆಗೆ ವಿಶೇಷ ಪೂಜಾ ಸೇವೆಗಳು ನಡೆಯುತ್ತದೆ, ದಿ.20 ರಂದು ಧ್ವಜಾಅವರೋಹಣ ಕಾರ್ಯಕ್ರಮಗಳು ನಡೆದವು ಎಂದು ಮಾಹಿತಿ ನೀಡಿದ್ದಾರೆ.
ಪ್ರತಿನಿತ್ಯ ವಿಶೇಷ ಫಲಪಂಚಾಮೃತ ಅಭಿಷೇಕ, ವಿಶೇಷ ಅಲಂಕಾರ ಮತ್ತು ವಾಹನೋತ್ಸವ ನಡೆಯುತ್ತವೆ. ಈ ಬಾರಿ ಎಲ್ಲಾ ಜಾತ್ರಾ ಕಾರ್ಯಕ್ರಮವನ್ನು ನಮ್ಮ “FACEBOOK, INSTAGRAM, + YOUTUBE” ಚಾನೆಲ್ ಗಳಲ್ಲಿ ವೀಕ್ಷಿಸಬಹುದು. “@Motakapalli Balabhimasena” Admin: Venkatesh Pujar, Archakaru.
ಸಮಸ್ತ ಶ್ರೀ ಬಲಭೀಮಸೇನ ದೇವರ ಭಕ್ತರು ಲಕ್ಷಾಂತರ ಸಂಖ್ಯೆಯಲ್ಲಿ ಭಾಗವಹಿಸಿ ದೇವರ ಕೃಪೆಗೆ ಪಾತ್ರರಾಗಬೇಕೆಂದು ಮೋತಕಪಲ್ಲಿ ಶ್ರೀ ಬಲಭೀಮಸೇನ ದೇವಸ್ಥಾನದ ಅರ್ಚಕರ ಪರಿವಾರ ಮತ್ತು ಗ್ರಾಮಸ್ಥರು ಕೋರಿದ್ದಾರೆ.