Oplus_131072

ದಂಡೋತಿ ಗದಿಗಯ್ಯ ಪೂಜ್ಯರ 17 ಪುಣ್ಯಾರಾಧನೆ, ವೆಬ್ ಸೈಟ್ ಉದ್ಘಾಟನೆ, ಧರ್ಮಕಿಂತ ದೇಶ ರಕ್ಷಣೆ ದೊಡ್ಡದು: ಜಾಹೀರ ಫನಾ

ನಾಗಾವಿ ಎಕ್ಸಪ್ರೆಸ್ 

ಚಿತ್ತಾಪುರ : ಇಂದಿನ‌ ದಿನಮಾನಗಳಲ್ಲಿ ದೇಶ ಮತ್ತು ಧರ್ಮಗಳ ಪ್ರಶ್ನೆ ಬಂದಾಗ ನಮ್ಮ ಮೊದಲನೇ ಅದ್ಯತೆ ದೇಶ ರಕ್ಷಣೆಯೇ ಆಗಬೇಕು ಹೊರತು ಧರ್ಮ ಅಲ್ಲ, ಧರ್ಮಕ್ಕಿಂತ ದೇಶ ದೊಡ್ಡದು, ಧರ್ಮಗಳ ಆಚರಣೆ ನಮ್ಮ ನಮ್ಮ ಮನೆಗಳಲ್ಲಿ ಇರಲಿ ಮೊದಲು ದೇಶ ಎನ್ನಬೇಕು ಎಂದು ಹಿರಿಯ (ಉರ್ದು)ಮುಷಾಯರಿ ಕವಿ ಸೈಯದ್ ಜಾಹೀರ ಫನಾ ಹೇಳಿದರು.

ಅವರು ದಂಡೋತಿ ಗ್ರಾಮದಲ್ಲಿ ನಡೆದ ಪೂಜ್ಯ ಗದಿಗಯ್ಯ ಸ್ವಾಮಿಗಳ ಹದಿನೇಳನೇ ಪುಣ್ಯಾರಾಧನೆಯ ಅಂಗವಾಗಿ ನಡೆದ ಭೃಂಗಿಮಠ ವೆಬ್ ಸೈಟನ್ನು ಜ್ಯೋತಿ ಬೆಳಗಿಸುವುದರ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ಇಂದಿನ ದಿನಮಾನಗಳಲ್ಲಿ ವಿಶ್ವದ ನಾನಾ ಕಡೆ ನಡೆಯುತ್ತಿರುವ ಆತಂಕವಾದವನ್ನು ಬೇರುಸಹಿತ ಕಿತ್ತು ಹಾಕಬೇಕು ದೇಶದ ರಕ್ಷಣೆ ಪ್ರತಿಯೊಬ್ಬರ ಕರ್ತವ್ಯ ಎಂದರು.

ಮೊದಲು ನಮ್ಮ ದೇಶದ ರಕ್ಷಣೆಗೆ ಟೊಂಕ ಕಟ್ಟಿ ನಿಲ್ಲಬೇಕು, ನಾವು ನಮ್ಮ‌ ಮನೆಗಳಲ್ಲಿ ನಮ್ಮ ನಮ್ಮ ಧಾರ್ಮಿಕ ಸ್ವಾತಂತ್ರ್ಯದಡಿ ಬದುಕಬಹುದು ಆದರೆ ದೇಶದ ರಕ್ಷಣೆಗೆ ನಮ್ಮ ಪ್ರಾಣ ಹೋದರೂ ಚಿಂತೆಯಿಲ್ಲ ಧರ್ಮ ಜಾತಿ ಲೆಕ್ಕಿಸದೇ ನಾವು ನಮ್ಮ ಭಾರತ ಮಾತಾಕಿ ಜೈ ಎನ್ನಬೇಕು ನಮ್ಮ ದೇಶದ ಪರ ಟೊಂಕ ಕಟ್ಟಿ ನಿಲ್ಲಬೇಕು ಎಂದು ಫನಾ ಹೇಳಿದರು.

ಗದಿಗಯ್ಯ ಸ್ವಾಮಿಗಳು ದಂಡೋತಿ ಅವರು ಸರ್ವಜನಾಂಗವನ್ನು‌ ಪ್ರೀತಿಯಿಂದ ಕಾಣುತ್ತಿದ್ದರು‌ ಮತ್ತು ಅವರು ತಮ್ಮ ಮಾನವ ಧರ್ಮಕ್ಕೆ ಜಯವಾಗಲಿ ಎಂಬ ವೀರಶೈವ ಲಿಂಗಾಯತ ಧರ್ಮವನ್ನು ಪಾಲಿಸಿ ಸರ್ವರಿಗೂ ತಮ್ಮ‌ ಉತ್ತಮ ಕಾಯಕದ ಮೂಲಕ ಜನರನ್ಮು ಗೌರವಿಸುತ್ತಲೇ ಮಹಾತ್ಮ ಮುತ್ಯಾ ಎನಿಸಿಕೊಂಡರು ಎಂದು‌ ತಿಳಿಸಿದ ಅವರು, ಭೃಂಗಿಮಠ ಪೂಜ್ಯರ ಶಕ್ತಿ ಅಪಾರವಾಗಿದೆ ಅವರ ಆತ್ಮ ಭಾವೈಕ್ಯ ಶಕ್ತಿಯೇ ನನಗೆ ಇಲ್ಲಿಗೆ ಬರುವಂತೆ ಮಾಡಿದೆ ಎಂದು ತಮ್ಮ ಅನುಭವ ಹಂಚಿಕೊಂಡರು.

ಪೂಜ್ಯ ಮಹಾತಪಸ್ವಿ ಜಯಶ್ರೀ ಮಾತಾಜೀ ಬಲಭೀಮೇಶ್ವರ ಆಶ್ರಮ ಅವರು ಮಾತಮಾಡಿ, ಇಂದಿನ ದಿನಮಾನಗಳಲ್ಲಿ ನಡೆಯುತ್ತಿರುವ ಮಹಿಳಾ ಕೌಶಲ್ಯ ತರಬೇತಿಗಳನ್ನು ಪೂಜ್ಯ ಗದಿಗಯ್ಯ ಸ್ವಾಮಿಜಿಯವರು 1970-19975 ರ‌ ಮುಂಚೆಯೇ ತಮ್ಮ ಮಠದಲ್ಲಿ ಬಡ ಮಕ್ಕಳಿಗೆ ಟೇಲರಿಂಗ್, ಶಾವಿಗೆ, ಇತ್ಯಾದಿಗಳ ತರಬೇತಿ ಉಚಿತವಾಗಿ ಸರಕಾರದ ಯಾವುದೇ ಸಹಾಯ ಇಲ್ಲದೇ ಮಾಡಿಸಿ ಸಾವಿರಾರು ಮಹಿಳೆಯರು ಆರ್ಥಿಕ ಸಬಲರಾಗಲು ಶ್ರಮಿಸಿದ ಅನ್ನ ಮತ್ತು ಜ್ಞಾನ ದಾಸೋಹ ಮೂರ್ತಿ ಭೃಂಗಿಮಠದ ಗದಿಗಯ್ಯ ಮಹಾಸ್ವಾಮಿಗಳು ಆಗಿದ್ದರು ಎಂದು ಆಶೀರ್ವಚನ ನೀಡಿದರು.

ಕೇಂದ್ರ ವಿಶ್ವವಿದ್ಯಾಲಯದ ವಾಣಿಜ್ಯ ವಿಭಾಗದ ಡಾ. ಚನ್ನವೀರಯ್ಯ ಮಹಾಂತಯ್ಯ ಮಠಪತಿ ಅವರು ರೆಗ್ಯುಲರ್ ಡಾಕ್ಟರೇಟ್ ಪಡೆದದ್ದಕ್ಕಾಗಿ ಭೃಂಗಿಮಠದಿಂದ ಸನ್ಮಾನ ಸ್ವೀಕರಿಸಿ ಮಾತನಾಡುತ್ತಾ ಪೂಜ್ಯ ಗದಿಗಯ್ಯ ಮಹಾ ಸ್ವಾಮಿಗಳು ಶಿಕ್ಷಣಕ್ಕೆ ಒತ್ತು ಕೊಟ್ಟು ಎಲ್ಲರು ಶಿಕ್ಷಿತರಾಗಲು ಶ್ರಮಿಸಿದ್ದರು ಎಂದರು.

ಉಪನ್ಯಾಸಕಿ ಅಂಬಿಕಾ ಜಾಂಗಟೆ ಮಾತನಾಡಿ, ಶಿಕ್ಷಣ ಕಲಿತರೆ ದರಿದ್ರ್ಯ ನಾಶವಾಗುತ್ತದೆ ಎಂದು ಪೂಜ್ಯರು ಮೇಲಿಂದ ಮೇಲೆ ಹೇಳುತ್ತಿದ್ದರು, ಪೂಜ್ಯರು ಹೆಣ್ಣು ಗಂಡು‌ ಎಂದೂ ಲಿಂಗ ಭೇಧ ಮಾಡುತ್ತಿರಲಿಲ್ಲ ಅವರು‌ ಲಿಂಗ ಸಮಾನತೆಗೆ ಶ್ರಮಿಸಿ ನುಡಿದಂತೆ ನಡೆದವರಾಗಿದ್ದರು ಎಂದು ತಿಳಿಸಿದರು.

ಹಿರಿಯ ನ್ಯಾಯವಾದಿ ಮಲ್ಲಿಕಾರ್ಜುನ ಭೃಂಗಿಮಠ,  ಬಸ್ಸಯ್ಯ ಸ್ವಾಮಿ ನರನಾಳ, ಲಲಿತ ಸಿದ್ದಯ್ಯ ಸೋಲಾಪುರ, ಜಗದೇವಿ ಮಹಾಂತಯ್ಯ ಹಿರೇಮಠ, ರೇವಣಸಿದ್ದಪ್ಪ ಕೊಂಚೂರ, ರವಿಕುಮಾರ ಕಾಳಗಿ, ಕಾಳಲಿಂಗೇಶ್ವರ ಸವಕಾರ ವಾರದ, ನಾರಾಯಣ ಹಡಪದ, ಅಣವೀರಯ್ಯ ಸ್ವಾಮಿ, ಸಾವಿರ ಪದಗಳ ಸರದಾರತಿ ಮಹಾದೇವಿ ಸಾವಳಗಿ, ಅಕ್ಕಮಹಾದೇವಿ ಅಣವೀರಯ್ಯಾ, ಶಿವಕಾಂತಮ್ಮ ಮಠಪತಿ, ಜಗದೇವಿ ಎಂ ಹಿರೇಮಠ ಬಬಲಾದಿ, ಲಲಿತ ಸ್ವಾಮಿ ಸೋಲಾಪುರ ಪವಿತ್ರ ಮಠ ಹಾಗೂ ಇತರರು ಉಪಸ್ಥಿತರಿದ್ದರು. ರೇವಣಸಿದ್ಧಯ್ಯ ಮಠ ಪ್ರಾಸ್ತಾವಿಕ ಮಾತನಾಡಿದರು, ಸಂಗೀತಾ ಸ್ಬಾಗತಿಸಿದರು, ರಾಜು ಹಿರೇಮಠ ನಿರೂಪಿಸಿದರು, ಆರ್ ಜಿ.ಭೃಂಗಿಮಠ ವಂದಿಸಿದರು.

ಬೆಳಿಗ್ಗೆ ಪೂಜೆ, ರುದ್ರಾಭಿಶೇಕ, ಅನ್ನದಾಸೋಹ ನಡೆದರೆ ಇಡೀ ರಾತ್ರಿ ಬಟಗೇರ, ದಂಡೋತಿ, ಕೊಡಂಪಳ್ಳಿ, ನರನಾಳ ಇತರ ಹಳ್ಳಿಗಳ ಭಜನೆ ವೃಂದದವರಿಂದ ಧಾರ್ಮಿಕ ಭಜನೆ ಕಾರ್ಯಕ್ರಮ ಜರುಗಿದವು ನೂರಾರು ಜನ ಸಾಧಕರಿಗೆ ಸನ್ಮಾನಿಸಲಾಯಿತು.

Spread the love

Leave a Reply

Your email address will not be published. Required fields are marked *

error: Content is protected !!