Oplus_0

ರೈತರಿಗೆ ಮಾನಸಿಕ ಹಿಂಸೆ ನೀಡುತ್ತಿದ್ದ ಡಿಸಿಸಿ ಬ್ಯಾಂಕ್ ವಿರುದ್ಧ ಕ್ರಮ ಕೈಗೊಳ್ಳಲು ರೈತ ಸಂಘ ಆಗ್ರಹ 

ನಾಗಾವಿ ಎಕ್ಸಪ್ರೆಸ್

ಚಿತ್ತಾಪುರ: ಕಲಬುರಗಿ ಮತ್ತು ಯಾದಗಿರಿ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಚಿತ್ತಾಪುರ ಶಾಖೆಯವರು ರೈತರಿಗೆ ಕೋರ್ಟನಿಂದ ನೋಟಿಸ್ ಕಳುಹಿಸಿ ಮಾನಸಿಕ ಹಿಂಸೆ ಕೊಡುತ್ತಿದ್ದಾರೆ ಹೀಗಾಗಿ ಕೂಡಲೇ ಈ ಬ್ಯಾಂಕ್ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಕರ್ನಾಟಕ ರಾಜ್ಯ ರೈತರ ಸಂಘ ಹಾಗೂ ಹಸಿರು ಸೇನೆ ರಾಜ್ಯ ಪ್ರಧಾನ ಕಾರ್ಯದರ್ಶಿ ಮಲ್ಲಣ್ಣಗೌಡ ಬಿ.ಪಾಟೀಲ ಕೆಲ್ಲೂರ ಆಗ್ರಹಿಸಿದ್ದಾರೆ.

ಈ ಕುರಿತು ಜಿಲ್ಲಾಧಿಕಾರಿಗೆ ದೂರ ಸಲ್ಲಿಸಿದ ಅವರು, ಕಲಬುರಗಿ ಮತ್ತು ಯಾದಗಿರಿ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ನಿಮಿಯತ ಕಲಬುರಗಿ ಇದ್ದು, ಚಿತ್ತಾಪುರ ಶಾಖೆಯಲ್ಲಿ ಖಾತೆ ಹೊಂದಿದ ರೈತರುಗಳಾದ ಚಂದ್ರಕಾಂತ ಸಾಯಬಣ್ಣ ಕೊಡದೂರ, ಅಶೋಕ ಮಸ್ತಾನಪ್ಪ ನಾಕಮಾನ ಬೆಡಸೂರ, ದೊಂಡಿಬಾ  ರಾಣೋಜಿರಾವ ಶಿಂಧೆ, ಜಗದೇವಿ ಜಗನ್ನಾಥ ಅಲಬಾ ಹೆಬ್ಬಾಳ ಸೇರಿದಂತೆ ಇನ್ನೂ ಹಲವಾರು ರೈತರುಗಳು ಸಮಸ್ಯೆಗಳು ಎದರುಸುತ್ತಿದ್ದು. ಸುಮಾರು ಕೆಲವು ವರ್ಷಗಳಿಂದ ಮಳೆ ಆಗದ ಕಾರಣ ರೈತರುಗಳಿಗೆ ತೊಂದರೆ ಆಗಿದ್ದು, ಸರಕಾರದಿಂದ ಬರಗಾಲ ಘೋಷಣೆ ಆದಕಾರಣ ಸಾಲ ಮರುಪಾತಿ ಮಾಡಲಾಗಿರುವುದಿಲ್ಲ. ಆದ್ದರಿಂದ ರೈತರ ಗಮನಕ್ಕೆ ತರದೆ ಸದರಿ ರೈತರಿಗೆ ಕೋರ್ಟನಿಂದ ನೋಟಿಸ್ ಕಳುಹಿಸಿರುತ್ತಾರೆ. ಚಿತ್ತಾಪುರ ಶಾಖೆಯ ವ್ಯವಸ್ಥಾಪಕ ನಿರ್ದೇಶಕರು ಸದರಿ ರೈತರಿಗೆ ನಿಮ್ಮ ಆಸ್ತಿಯನ್ನು ಹರಾಜು ಮಾಡುತ್ತೇವೆಂದು ಹೆದರಿಕೆ ಒಡ್ಡುತ್ತಿದ್ದಾರೆ ಎಂದು ತಿಳಿಸಿದ್ದಾರೆ.

ರೈತರಿಗೆ ನೋಟಿಸ್ ನೀಡಿ ಕಿರುಕುಳ ನೀಡುತ್ತಿದ್ದ ಬ್ಯಾಂಕ್ ವ್ಯವಸ್ಥಾಪಕ ನಿರ್ದೇಶಕರ ಮೇಲೆ ಕಾನೂನು ಕ್ರಮ ಜರುಗಿಸಿ ಅವರಿಗೆ ಶಿಕ್ಷೆ ವಿಧಿಸಬೇಕು, ಒಂದು ವೇಳೆ ಇದರ ಬಗ್ಗೆ ನಿಷ್ಕಾಳಜಿ ತೋರಿದ್ದೆ ಆದರೆ ತಮ್ಮ ಇಲಾಖೆ ಮುಂದೆ ವಿಷ ಕೊಡಿ ಅಥವಾ ನ್ಯಾಯ ಕೊಡಿ ಎಂಬ ಹೋರಾಟವನ್ನು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ನೇತೃತ್ವದಲ್ಲಿ  ಮಾಡಬೇಕಾಗುತ್ತದೆ ಎಂದು ರೈತ ಮುಖಂಡ ಜಗದೀಶ್ ಸಾಗರ ಎಚ್ಚರಿಸಿದ್ದಾರೆ.

Spread the love

Leave a Reply

Your email address will not be published. Required fields are marked *

error: Content is protected !!