Oplus_0

ದೇವಪ್ಪ ನಂದೂರಕರ್ ವಯೋನಿವೃತ್ತಿಯ ಬೀಳ್ಕೊಡುವ ಸಮಾರಂಭ 

ದೇವಪ್ಪ ನಂದೂರಕರ್ ಸೇವೆ ಅಮೋಘ: ಪಾಟೀಲ 

ನಾಗಾವಿ ಎಕ್ಸಪ್ರೆಸ್

ಚಿತ್ತಾಪುರ; ಸೇವಾ ವಯೋನಿವೃತ್ತಿಯ ಬೀಳ್ಕೊಡುವ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ಸೇವಾವಧಿಯಲ್ಲಿ ಸಲ್ಲಿಸಿದ ಸೇವೆ ಕೊನೆಗೆ ಬೀಳ್ಕೊಡುವ ಸಮಾರಂಭದಲ್ಲಿ ಭಾಗವಹಿಸಿದ ಜನಸಂಖ್ಯೆ ಮೇಲೆ ಅವರ ವ್ಯಕ್ತಿತ್ವ ಎಂತಹದು ಎಂಬುದು ಗೊತ್ತಾಗಲಿದೆ ಈಗ ನಂದೂರಕರ್ ಬೀಳ್ಕೊಡುವ ಸಮಾರಂಭದಲ್ಲಿ ಭಾಗವಹಿಸಿದ ಜನಸಂಖ್ಯೆ ನೋಡಿದರೆ ಅವರ ಸೇವೆ ಅಮೋಘ ಎಂದು ಕೆಪಿಸಿಸಿ ಸದಸ್ಯ ನಾಗರೆಡ್ಡಿ ಪಾಟೀಲ್ ಕರದಾಳ ಹೇಳಿದರು.

ಪಟ್ಟಣದ ಬಸವ ನಗರದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಮುಖ್ಯಗುರು ದೇವಪ್ಪ ನಂದೂರಕ‌ರ್ ಅವರ ಸೇವಾ ವಯೋನಿವೃತ್ತಿಯ ಬೀಳ್ಕೊಡುವ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ಶಿಕ್ಷಕರಲ್ಲಿ ಆಸಕ್ತಿ ಜೊತೆ ಇಚ್ಛಾಶಕ್ತಿ ಇದ್ದಾಗ ಅಭಿವೃದ್ಧಿ ಸಾಧ್ಯ ಇದಕ್ಕೆ ಶಿಕ್ಷಕ ದೇವಪ್ಪ ನಂದೂರಕರ್ ಅವರೇ ಸಾಕ್ಷಿ ಕಾರಣ ಅವರಲ್ಲಿ ಮಕ್ಕಳ ಬಗ್ಗೆ ಶಾಲೆಯ ಬಗ್ಗೆ ಆಸಕ್ತಿ ಇದೆ ಹೀಗಾಗಿಯೇ ಒಂದೇ ಕಡೆ 18 ವರ್ಷ ಸೇವೆ ಸಲ್ಲಿಸಲು ಸಾಧ್ಯವಾಗಿದೆ ಎಂದರು.

ಮನೆಗಳಲ್ಲಿ ತಂದೆ ತಾಯಂದಿರು ತಮ್ಮ ಮಕ್ಕಳನ್ನು ಯಾವ ರೀತಿ ಪ್ರೀತಿಸುತ್ತಾರೆ ಅದೇ ರೀತಿ ದೇವಪ್ಪ ನಂದೂರಕರ್ ಅವರು ಒಡಹುಟ್ಟಿದ ಮಕ್ಕಳಂತೆ ಕಂಡು ಶಿಕ್ಷಣ ನೀಡಿದ್ದರಿಂದ ಹಳೆಯ ವಿದ್ಯಾರ್ಥಿಗಳು ಹಾಗೂ ಇಂದಿನ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದೇ ಸಾಕ್ಷಿ ಎಂದರು.

ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಮಲ್ಲಯ್ಯ ಗುತ್ತೇದಾರ ಮಾತನಾಡಿ, ದೇವಪ್ಪ ನಂದೂರಕ‌ರ್ ಅವರು ಶಿಕ್ಷಕರಾಗಿ 29 ವರ್ಷಗಳ ಸುಧೀರ್ಘವಾದ ಸೇವೆ ಸಲ್ಲಿಸಿ ನಿವೃತ್ತರಾಗುತ್ತಿದ್ದಾರೆ. ಇಂತಹ ಶಿಕ್ಷಕರ ಸೇವೆ ಸಮಾಜಕ್ಕೆ ಹಾಗೂ ವಿದ್ಯಾರ್ಥಿ ಲೋಕಕ್ಕೆ ಅತಿ ಅವಶ್ಯಕ. ನಂದೂರಕರ್ ಸರ್ ಎಲ್ಲರೊಂದಿಗೆ ಬೆರೆಯುವ, ಸದಾ ಸಕಲರ ಒಳಿತನ್ನೇ ಬಯಸಿದ್ದು ಅವರ ವ್ಯಕ್ತಿತ್ವಕ್ಕೆ ಹಿಡಿದ ಕನ್ನಡಿ ಮತ್ತು ಇಲ್ಲಿ ಸೇರಿದ ಜನಸ್ತೋಮವೇ ಸಾಕ್ಷಿ ಎಂದರು.

ಕ್ಷೇತ್ರ ಶಿಕ್ಷಣಾಧಿಕಾರಿ ಶಶಿಧರ ಬಿರಾದಾರ ಅವರು ಭೂ ದಾನಿಗಳ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿ, ಶಿಕ್ಷಕ ದೇವಪ್ಪ ನಂದೂರಕರ್ ಅವರಂತಹ ಶಿಕ್ಷಕ ಸಿಗುವುದು ನಿಜಕ್ಕೂ ವಿರಳ, ಅವರ ನಿವೃತ್ತಿ ಜೀವನ ಸುಖಕರವಾಗಿರಲಿ ಹಾಗೂ ಅವರ ಮಾರ್ಗದರ್ಶನ ಇಲಾಖೆಗೆ ಸದಾ ಇರಲಿ ಎಂದರು.

ಕ್ಷೇತ್ರ ಸಮನ್ವಯಾಧಿಕಾರಿ ಮಲ್ಲಿಕಾರ್ಜುನ ಸೇಡಂ, ಪುರಸಭೆ ಮಾಜಿ ಅಧ್ಯಕ್ಷ ಮಲ್ಲಿಕಾರ್ಜುನ ಕಾಳಗಿ, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಬಸವರಾಜ ಬಳೂಂಡಗಿ ಮಾತನಾಡಿದರು. ಎಸ್ಡಿಎಂಸಿ ಅಧ್ಯಕ್ಷೆ ಮಂಜುಳಾ ಎಮ್. ಅಚಿಕೇರಿ ಅಧ್ಯಕ್ಷತೆ ವಹಿಸಿದ್ದರು.

ಇದೇ ವೇಳೆ ಕಲಿಸಿದ ಮೊದಲ ಗುರು ರಾಮಣ್ಣ ತಗಡಿಗರ್ ಅವರಿಗೆ ದೇವಪ್ಪ ನಂದೂರಕ‌ರ್ ಅವರು ಹಣ್ಣು ಹಂಪಲುಗಳ ಮೂಲಕ ತುಲಾಭಾರ ಮಾಡಿದರು.

ಪತ್ನಿ ಶಂಕುತಲಾ ನಂದೂರಕರ್, ನ್ಯಾಯವಾದಿ ಶ್ರೀನಿವಾಸ ಜೋಶಿ, ಕ್ರೈಂ ಪಿಎಸ್‌ಐ ಚಂದ್ರಾಮಪ್ಪ, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಪ್ರಕಾಶ ನಾಯ್ಕೋಡಿ, ನಿವೃತ್ತ ಮುಖ್ಯಗುರುಗಳಾದ ಶಂಕರ್‌ ಮೊದಲೆ, ಸರಸ್ವತಿ ಪಾಟೀಲ್‌, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ಶಿವಾನಂದ ನಾಲವಾರ, ಕಾಳಗಿ ಅಧ್ಯಕ್ಷ ಮಹಾಂತೇಶ ಪಂಚಾಳ, ಶಹಾಬಾದ ಅಧ್ಯಕ್ಷ ಶಿವಪುತ್ರ ಕರಣಿಕ, ಖಾಸಾಗಿ ಅನುದಾನಿತ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಗೌರವಾಧ್ಯಕ್ಷ ಶರಣಬಸಪ್ಪ ಬಮ್ಮನಳ್ಳಿ, ಪ್ರೌಢ ಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷ ರಾಜೇಂದ್ರ ಪ್ರಸಾದ್, ಪಶ್ಚಿಮ ವಲಯ ಸಿ.ಆರ್.ಸಿ ಕವಿತಾ ದೊಡ್ಡಮನಿ, ಅನೀಲ ಸುಂಠಾಣ, ಮಲ್ಲಿಕಾರ್ಜುನ ಯಂಕಂಚಿ, ಗಂಗಾಧರ ಸಾವಳಗಿ, ವೀರಭದ್ರಪ್ಪ ಪಾಟೀಲ, ಸುರೇಶ್ ಸರಾಫ್, ದೇವಿಂದ್ರಪ್ಪ ಶಹಾಬಾದಕರ್, ಹಾಜಿ ಸಾಬ್, ಆದಪ್ಪ ಬಗಲಿ, ಜಗನ್ನಾಥ ಮಂಗಲಗಿ, ಕಾಶಿರಾಯ ಕುಲಾಲ್, ವಿರೇಶ್ ಕರದಾಳ, ಶ್ರೀದೇವಿ ಕೋಬಾಳಕರ್, ವಿಜಯಕುಮಾರ್ ಭಂಕಲಗಿ, ಸುನೀಲ್ ಧರಣಿ, ರಾಜಣ್ಣ ಕರದಾಳ, ಸಿದ್ದು ಬಾಳಿ, ನರಸಪ್ಪ ಚಿನ್ನಾಕಟ್ಟಿ ಸೇರಿದಂತೆ ಅನೇಕ ಮುಖಂಡರು, ಶಿಕ್ಷಕರು, ಅಭಿಮಾನಿಗಳು ಹಾಗೂ ವಿದ್ಯಾರ್ಥಿಗಳು ಇದ್ದರು. ಶಿಕ್ಷಕಿ ಲಲಿತಾದೇವಿ ಸಜ್ಜನಶೆಟ್ಟಿ ದೇವಪ್ಪ ನಂದೂರಕರ್ ಕುರಿತು ಪರಿಚಯಿಸಿದರು, ಮಲ್ಲಮ್ಮ ಪ್ರಾರ್ಥಿಸಿದರು, ವೀರಸಂಗಪ್ಪ ಸುಲೇಗಾಂವ ಸ್ವಾಗತಿಸಿದರು, ವಿಷ್ಣುವರ್ಧನ್ ರೆಡ್ಡಿ ನಿರೂಪಿಸಿದರು, ಸುರೇಶ ಸರಾಫ್ ವಂದಿಸಿದರು.

Spread the love

Leave a Reply

Your email address will not be published. Required fields are marked *

You missed

error: Content is protected !!