ದಿಗ್ಗಾಂವ ಗ್ರಾಮದ 120 ಮನೆಗಳಿಗೆ ನುಗ್ಗಿದ ಮಳೆ ನೀರು, ಅಪಾರ ಹಾನಿ ತಹಸೀಲ್ದಾರ್ ಭೇಟಿ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ತಾಲೂಕಿನಲ್ಲಿ ಮಂಗಳವಾರ ರಾತ್ರಿ ಸುರಿದ ಭಾರಿ ಮಳೆಯಿಂದ ದಿಗ್ಗಾoವ ಗ್ರಾಮದ ಹಳ್ಳದ ನೀರು ಮನೆಯೊಳಗೆ ನುಗ್ಗಿ ಅಪಾರ ಪ್ರಮಾಣದ ಆಹಾರ ಸಾಮಗ್ರಿಗಳು ಹಾಳಾಗಿರುತ್ತವೆ, ಎಲ್ಲರಿಗೂ ಪರಿಹಾರ ನೀಡುವ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ತಹಸೀಲ್ದಾರ್ ನಾಗಯ್ಯ ಹಿರೇಮಠ ತಿಳಿಸಿದ್ದಾರೆ.
ಗ್ರಾಮದ ಅಂದಾಜು 110 ರಿಂದ 120 ಮನೆಗಳಿಗೆ ಮಳೆ ನೀರು ನುಗ್ಗಿದೆ ಈಗಾಗಲೇ ಬುಧವಾರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದೇನೆ ಹಾನಿಯಾದವರಿಗೆ ಸರ್ಕಾರದ ವತಿಯಿಂದ ಸಿಗಬೇಕಾದ ಪರಿಹಾರ ಒದಗಿಸಿ ಕೊಡುವುದಾಗಿ ಹೇಳಿದ್ದಾರೆ. ದಿಗ್ಗಾಂವ ಗ್ರಾಮದಲ್ಲಿ ರಾತ್ರಿ ಸುರಿದ ಮಳೆ ರೀಕಾರ್ಡ್ ಮಾಡಿದೆ ಎಂದರು. ಈ ಸಂದರ್ಭದಲ್ಲಿ ಗ್ರಾಪಂ ಅಧ್ಯಕ್ಷ ಹರಳಯ್ಯ ಬಡಿಗೇರ್, ಸಿದ್ದಣ್ಣಗೌಡ ಆರ್.ಡಿ, ಶ್ರೀಮಂತ ಗುತ್ತೇದಾರ, ಶರಣು ಸೇರಿದಂತೆ ಇತರರು ಇದ್ದರು. ಅದೇ ರೀತಿ ಮೊಗಲಾ ಗ್ರಾಮದ ಐದಾರು ಮನೆಗಳಿಗೆ ಮಳೆ ನೀರು ನುಗ್ಗಿ ಹಾನಿಯಾದ ಮಾಹಿತಿ ತಿಳಿದುಬಂದಿದೆ.
ಚಿತ್ತಾಪುರ ವ್ಯಾಪ್ತಿಯಲ್ಲಿ 53.6ಎಂಎಂ, ನಾಲವಾರ ವ್ಯಾಪ್ತಿಯಲ್ಲಿ 20.2ಎಂಎಂ, ಅಳ್ಳೋಳ್ಳಿ ವ್ಯಾಪ್ತಿಯಲ್ಲಿ 20.2ಎಂಎಂ ಮಳೆಯಾಗಿದೆ ಎಂದು ತಹಸೀಲ್ದಾರ್ ಮಾಹಿತಿ ನೀಡಿದ್ದಾರೆ.