ದಿಗ್ಗಾಂವ ವೀರತಪಸ್ವಿ ಸದ್ಗುರು ಶ್ರೀ ಸಿದ್ದವೀರೇಶ್ವರರ 99 ನೇ ಪುಣ್ಯಾರಾಧನೇಯ ಪ್ರಯುಕ್ತ ನಾಳೆಯಿಂದ ಶ್ರೀ ದೇವಿಪುರಾಣ: ಶರಣು ಉಡುಗಿ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ತಾಲೂಕಿನ ದಿಗ್ಗಾಂವ ಗ್ರಾಮದ ವೀರತಪಸ್ವಿ ಸದ್ಗುರು ಶ್ರೀ ಸಿದ್ದವೀರೇಶ್ವರರ 99 ನೇ ಪುಣ್ಯಾರಾಧನೇಯ ಪ್ರಯುಕ್ತ ಶ್ರೀ ದೇವಿಪುರಾಣ ಹಾಗೂ ವಿವಿದ ಕಾರ್ಯಕ್ರಮಗಳು ಪಂಚಗೃಹ ಹಿರೇಮಠದ ಶ್ರೀ ಸಿದ್ಧವೀರ ಶಿವಾಚಾರ್ಯರ ನೆತೃತ್ವದಲ್ಲಿ ಮಾ.24 ರಿಂದ ಏಪ್ರಿಲ್ 2 ವರೆಗೆ ಪ್ರತಿದಿನ ರಾತ್ರಿ 7.30 ಕ್ಕೆ ಪುರಾಣ ಪ್ರವಚನ ಹಾಗೂ ಹಲವಾರು ಕಾರ್ಯಕ್ರಮಗಳು ಹಮ್ಮಿಕೊಳಲಾಗಿದೆ ಎಂದು ಮಠದ ವಕ್ತಾರ ಶರಣು ಉಡುಗಿ ತಿಳಿಸಿದ್ದಾರೆ.
ಮಾ.24 ರಂದು ಸೇಡಂ ಶಿವಶಂಕರ ಮಠದ ಶ್ರೀ ಶಿವಶಂಕರ ಶಿವಾಚಾರ್ಯ ಸ್ವಾಮಿಗಳು, ಮಾ. 25 ರಂದು ಬೆನಕನಹಳ್ಳಿ ವೀರಕ್ತಮಠದ ಶ್ರೀ ಕೇದಾರನಾಥ ಸ್ವಾಮಿಗಳು,ಮಾ.26 ರಂದು ಗುಂಡಗುರ್ತಿ ಹಿರೇಮಠದ ಶ್ರೀ ಮೌನಯೋಗಿ ಸದ್ಯೋಜಾತ ಶಿವಾಚಾರ್ಯ ಸಾಮಿಗಳು, ಮಳಖೇಡ ದರ್ಗಾದ ಹಜರತ್ ಸೈಯದ್ ಶಾಹ್ ಮುಸ್ತಫಾ ಖಾದ್ರಿ, ಮಾ. 27 ರಂದು ಗುಂಡೆಪಲ್ಲಿ ಸೋಮೇಶ್ವರ ಮಠದ ಶ್ರೀ ಶಿವಸಿದ್ದಸೋಮೇಶ್ವರ ಶಿವಚಾರ್ಯ ಸ್ವಾಮಿಗಳು, ಮಾ.28 ರಂದು ಅಳ್ಳೋಳ್ಳಿ ಸಾವಿರ ದೇವರ ಮಠದ ಶ್ರೀ ಸಂಗಮನಾಥ ಸ್ವಾಮಿಗಳು, ಮಾ. 29 ರಂದು ದಂಡಗುಂಡ ಶ್ರೀ ಸಂಗನಬಸವ ಶಿವಾಚಾರ್ಯ ಸ್ವಾಮಿಗಳು, ಮಾ.30 ರಂದು ಬೆಳಗುಂಪಾ ಶ್ರೀ ಪರವತೇಶ್ವರ ಶಿವಾಚಾರ್ಯ ಸ್ವಾಮಿಗಳು, ಮಾ. 31 ರಂದು ಜಾಕನಳ್ಳಿ ಶ್ರೀ ಅಭಿನವ ಗವಿಸಿದ್ದಲಿಂಗ ಶಿವಾಚಾರ್ಯ ಸ್ವಾಮಿಗಳು, ಮಳಖೇಡ ಶ್ರೀ ಅಭಿನವ ಕಾರ್ತೀಕೇಶ್ವರ ಶಿವಾಚಾರ್ಯ ಸ್ವಾಮಿಗಳು, ಏ.1 ರಂದು ತೊಟ್ನಳ್ಳಿ ಶ್ರೀ ಡಾ. ಶ್ರೀ ಶ್ರೀಮೂರ್ತಿ ಶಿವಾಚಾರ್ಯ ಸ್ವಾಮಿಗಳು, ಹಲಕಟ್ಟಿ ಶ್ರೀ ಅಭಿನವ ಮುನೀಂದ್ರ ಶಿವಾಚಾರ್ಯ ಸ್ವಾಮಿಗಳು ಆಗಮಿಸಲಿದ್ದಾರೆ ಎಂದು ತಿಳಿಸಿದ್ದಾರೆ.
ಏ.2 ರಂದು ಲಿಂಗೈಕ್ಯ ಸದ್ಗುರು ಶ್ರೀ ಸಿದ್ದವೀರೇಶ್ವರರ ಪುಣ್ಯಾರಾಧನೆ ಬೆಳಗ್ಗೆ ರುದ್ರಾಭಿಷೇಕ ಪೂಜೆ, ಜಿಲ್ವಾರ್ಚನಾ ಮಹಾಮಂಗಲ ನಂತರ ಶಿವಗಣಾರಾಧನೆ ತದನಂತರ ಸರ್ವರಿಗೂ ಪ್ರಸಾದ ವಿತರಣೆ ನಡೆಯಲಿದೆ. ವೆ.ಮೂ. ಶ್ರೀ ವೀರಭದ್ರಯ್ಯ ಸ್ವಾಮಿ ಬೋಮ್ಮನಹಳ್ಳಿ ಶ್ರೀ ಮಲ್ಲಿಕಾರ್ಜುನ ದೇವಸ್ಥಾನದ ಅರ್ಚಕರು ವಾಡಿ ಇವರಿಂದ ಶ್ರೀ ಸಿದ್ಧವೀರ ಶಿವಾಚಾರ್ಯ ಸ್ವಾಮಿಗಳ 207ನೇ ನಾಣ್ಯಗಳಿಂದ ತುಲಾಭಾರ ನಡೆಯಲಿದೆ ಎಂದು ಮಾಹಿತಿ ನೀಡಿದ್ದಾರೆ.
ಜೀವನ ಜ್ಯೋತಿ ವೈವಿಧ್ಯಮಯ ಕಲಾತಂಡ ಕೊತಬಾಳ ಗದಗ ಇವರ ವತಿಯಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ಪುರಾಣಿಕರಾಗಿ ಶ್ರೀ ವೇ.ಪಂ. ಜಗದೀಶ ಶಾಸ್ತ್ರೀಗಳು, ಸಂಸ್ಥಾನ ಹಿರೇಮಠ, ಸನ್ನತ್ತಿ, ವೇ. ಸಂಗಯ್ಯಸ್ವಾಮಿ ಸ್ಥಾವರ ಮಠ ಹೊನ್ನಗುಂಟಿ ಸಂಗೀತ ಸೇವೆ ಹಾಗೂ ವೇ. ಶರಣಯ್ಯಸ್ವಾಮಿ ಮಠಪತಿ ಕಲಕಂಭ ತಬಲಾ ಸಾಥ್ ನೀಡಲಿದ್ದಾರೆ. ಈ ಕ್ರಾರ್ಯಕ್ರಮಕ್ಕೆ ಧಾರ್ಮಿಕ ಸಾಮಾಜಿಕ, ಶೈಕ್ಷಣಿಕ, ರಾಜಕೀಯ ಗಣ್ಯಮಾನ್ಯರು ಭಾಗವಹಿಸುವರು ಎಂದು ಮಾಹಿತಿ ನೀಡಿದ್ದಾರೆ.