Oplus_0

ದಿಗ್ಗಾಂವ ಶ್ರೀ ಕಾಳಿಕಾ ದೇವಿ ಚರಿತ್ರೆ ಪ್ರವಚನ ಮಹಾಮಂಗಳ ಕಾರ್ಯಕ್ರಮ | ಕಾಡಿಸುವವರಿಗೆ ಕಾಪಾಡುವ ಶಕ್ತಿ ಕಾಳಿಕಾ ದೇವಿಗಿದೆ: ಕಂಬಳೇಶ್ವರ ಶ್ರೀ 

ನಾಗಾವಿ ಎಕ್ಸಪ್ರೆಸ್

ಚಿತ್ತಾಪುರ: ಭಕ್ತಿಯಿಂದ ಯಾರೂ ಆರಾಧಿಸುತ್ತಾರೆ ಅವರನ್ನು ಹರಿಸುವ ಹಾಗೂ ಕಾಡಿಸುವವರಿಗೆ ಕಾಪಾಡುವ ಶಕ್ತಿ ಕಾಳಿಕಾ ದೇವಿಗಿದೆ ಎಂದು ಕಂಬಳೇಶ್ವರ ಶ್ರೀ ಸೋಮಶೇಖರ ಶಿವಾಚಾರ್ಯರು ಹೇಳಿದರು.

ತಾಲೂಕಿನ ದಿಗ್ಗಾಂವ ಸುಕ್ಷೇತ್ರ ಕಂಚಗಾರ ಹಳ್ಳದ ಶ್ರೀ ಪಾರ್ವತಿ ಪರಮೇಶ್ವರ ಕಲ್ಯಾಣ ಧಾಮದಲ್ಲಿ ಮಂಗಳವಾರ ನಡೆದ ಲಿಂ. ಶ್ರೀ ಗುರುಲಿಂಗೇಶ್ವರ ಶಿವಯೋಗಿಗಳ 22ನೇ ವರ್ಷದ ಪುಣ್ಯಸ್ಮರಣೆ ಹಾಗೂ ಶ್ರೀ ಕಾಳಿಕಾ ದೇವಿ ಚರಿತ್ರೆ ಪ್ರವಚನ ಮಹಾಮಂಗಳ ಹಾಗೂ ಧಾರ್ಮಿಕ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಈ ಭಾಗದಲ್ಲಿ ಕಾಳಿಕಾ ದೇವಿಯ ಪುರಾಣ ಪ್ರವಚನ ಆಯೋಜಿಸಿದ್ದ ಮಲ್ಲಯ್ಯ ಸ್ವಾಮಿಗಳ ಕಾರ್ಯ ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಚಟಗಳಲ್ಲಿ ತೊಡಗುವ ಯುವಕರಲ್ಲ ಚಟುವಟಿಕೆಗಳಲ್ಲಿ ತೊಡಗುವವರು ನಿಜವಾದ ಯುವಕರು. ಈ ನಿಟ್ಟಿನಲ್ಲಿ ದಿಗ್ಗಾಂವ ಗ್ರಾಮದ ಯುವಕರು ಐದು ದಿನಗಳ ಕಾಲ ಕಾಳಿಕಾ ದೇವಿಯ ಪ್ರವಚನ ಕಾರ್ಯಕ್ರಮ ಯಶಸ್ವಿಗೆ ಶ್ರಮವಹಿಸಿದ ಯುವಕರ ಸೇವೆ ಅಪಾರವಾಗಿದೆ ಎಂದು ಹೇಳಿದರು.

ಮಳಖೇಡ ದರ್ಗಾದ ಸೈಯದ್ ಮುಸ್ತಫಾ ಖಾದ್ರಿ ಮಾತನಾಡಿ, ಹುಟ್ಟು ಆಕಸ್ಮಿಕ, ಬದುಕು ಅನಿಶ್ಚಿತ, ಸಾವು ಶಾಶ್ವತ ಇಲ್ಲಿ ಹುಟ್ಟು ಸಾವಿನ ನಡುವಿನ ಪವಿತ್ರವಾದ ಬದುಕನ್ನು ಮನುಷ್ಯ ಹಾಳು ಮಾಡಿಕೊಳ್ಳುತ್ತಿದ್ದಾನೆ. ಜಾತ್ರೆ, ಪುರಾಣ ಪ್ರವಚನಗಳಲ್ಲಿ ಭಾಗವಹಿಸುವುದರಿಂದ ಸುಂದರ ಬದುಕು ನಿರ್ಮಾಣವಾಗಲು ಸಾಧ್ಯ ಎಂದರು. ಸಂಸ್ಕಾರ ಇಲ್ಲದಿರುವುದರಿಂದ ಬದುಕು ಹಾಳಾಗುತ್ತದೆ ಹಾಗಾಗಿ ತಂದೆತಾಯಿಗಳು ಮಕ್ಕಳಿಗೆ ಮೊಬೈಲ್ ದಿಂದ ದೂರವಿಟ್ಟು ಉತ್ತಮ ಸಂಸ್ಕಾರ, ವಿದ್ಯಾ ಬುದ್ಧಿ ನೀಡುವ ಕಡೆ ಗಮನ ಹರಿಸಬೇಕು ಎಂದು ಕಿವಿಮಾತು ಹೇಳಿದರು.

ಪಿಎಲ್’ಡಿ ಬ್ಯಾಂಕ್ ಅಧ್ಯಕ್ಷ ಭೀಮಣ್ಣ ಸಾಲಿ ಮಾತನಾಡಿ, ಮಲ್ಲಯ್ಯ ಸ್ವಾಮಿಗಳ ಸೇವೆ ನಿಸ್ವಾರ್ಥ ಸೇವೆಯಾಗಿದ್ದು, ಈ ಭಾಗದ ಜನರ ನೋವು ನಲಿವುಗಳಿಗೆ ಸ್ಪಂದಿಸುವ ಜನಸಾಮಾನ್ಯರ ಸ್ವಾಮಿಗಳಾಗಿದ್ದಾರೆ ಹೀಗಾಗಿ ಶ್ರೀಕ್ಷೇತ್ರದ ಶಕ್ತಿ ಅಪಾರವಾಗಿದೆ ಎಂದರು.

ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಮೇಶ್ ಮರಗೋಳ ಮಾತನಾಡಿ, ಇರಾನ್ ಇಸ್ರೆಲ್ ದೇಶಗಳ ನಡುವೆ ಯುದ್ದ ನಡೆದಿದೆ ಕಾರಣ ಅಲ್ಲಿ ಗುರುಗಳು ಇಲ್ಲ, ನಮ್ಮ ದೇಶದಲ್ಲಿ ಗುರುಗಳು, ಮಠಾಧೀಶರು ಇದ್ದಾರೆ ಹೀಗಾಗಿ ನಮ್ಮಲ್ಲಿ  ಶಾಂತಿ ನೆಮ್ಮದಿ ಇದೆ ಎಂದು ಹೇಳಿದರು. ಹಿಂದೂ ಧರ್ಮ ವಿಶ್ವದಲ್ಲೇ ಶ್ರೇಷ್ಠ ಧರ್ಮ ಆಗಿದೆ, ಭಕ್ತಿಯಿದ್ದಾಗ ಶಾಂತಿ, ನೆಮ್ಮದಿ ನೆಲೆಸಲಿದೆ. ತಂದೆತಾಯಿಗಳ ಬಗ್ಗೆ ಗೌರವ ಹಾಗೂ ಗುರುಗಳ ಬಗ್ಗೆ ಶ್ರದ್ಧೆ ಮತ್ತು ಭಕ್ತಿ ಇದ್ದಾಗ ಮಾತ್ರ ಸಮಾಜದಲ್ಲಿ ಸ್ವಾಸ್ಥ್ಯ ನೆಲೆಸಲು ಸಾಧ್ಯ ಎಂದು ಹೇಳಿದರು.

ಪಾಳಾ ಶ್ರೀ ಡಾ.ಗುರುಮೂರ್ತಿ ಶಿವಾಚಾರ್ಯರು ಶ್ರೀ ಕಾಳಿಕಾ ದೇವಿ ಚರಿತ್ರೆ ಕುರಿತು ಪ್ರವಚನ ನೀಡಿದರು, ಶ್ರೀನಿವಾಸ ಸರಡಗಿ ಶ್ರೀ ಅಪ್ಪಾರಾವದೇವಿ ಮುತ್ಯಾ, ಮಳಖೇಡ ಗ್ರಾಪಂ ಮಾಜಿ ಅಧ್ಯಕ್ಷ ರಾಜಶೇಖರ್ ಪುರಾಣಿಕ ಅವರು ಮಾತನಾಡಿದರು. ಶ್ರೀ ಪಾರ್ವತಿ ಪರಮೇಶ್ವರ ಕಲ್ಯಾಣ ಧಾಮದ ಮಲ್ಲಯ್ಯಸ್ವಾಮಿ ಸ್ಥಾವರಮಠ ನೇತೃತ್ವ ವಹಿಸಿದ್ದರು

ತೆಂಗಳಿ ಶ್ರೀ ಡಾ.ಶಾಂತಸೋಮನಾಥ ಶಿವಾಚಾರ್ಯರು, ತೊಟ್ನಳ್ಳಿ ಶ್ರೀ ಡಾ.ತ್ರೀಮೂರ್ತಿ ಶಿವಾಚಾರ್ಯರು ವೇದಿಕೆಯಲ್ಲಿದ್ದರು. ಈ ಸಂದರ್ಭದಲ್ಲಿ ದೇವಿಂದ್ರ ಹಳಿಜೋಳ, ವಿನೋದ ಕೊತ್ತಂಬರಿ, ಸಿದ್ದಣ್ಣಗೌಡ ದಳಪತಿ, ಮಲ್ಲಿನಾಥ ಅವಂಟಿ, ಮಲ್ಲಿನಾಥ ಭಾಗೋಡಿ, ತಿಪ್ಪಣ್ಣ ಸಂಗಾವಿ, ಶೇಖರ್ ಅಣಿಕೇರಿ, ಸಂಜುಕುಮಾರ್ ಮೇಡಿಕಲ್, ಬಸವರಾಜ ಬುಳ್ಳಾ, ಮುರುಘೇಂದ್ರ ಸ್ಥಾವರಮಠ, ನಾಗೇಂದ್ರ ಮರಗೋಳ, ಅನೀಲಕುಮಾರ ಎಂದೆ, ಅಂಬರೀಷ್ ಮರಗೋಳ, ಸುನೀಲ್ ಚವ್ಹಾಣ, ಸುಭಾಷ್ ಪಸಾರ್, ಶಂಕರಗೌಡ ಗೌನಳ್ಳಿ, ಮಹಾದೇವ ಕಣ್ಣಿ, ಭೀಮರಾಯ ಹೊತಿನಮಡಿ, ನಾಗೇಂದ್ರ ಚಪಟ್ಲಾ, ಶಿವಲಿಂಗಪ್ಪ ಪೂಜಾರಿ, ವಿನೋದ ಬುಳ್ಳಾ ಸೇರಿದಂತೆ ಇತರರು ಇದ್ದರು.

ಅಭೀಶ್ರೀ ವಿಜಯಕುಮಾರ್, ಶಿವನಂದಿ ಸ್ಥಾವರಮಠ ಅವರಿಂದ ಭರತನಾಟ್ಯ ನಡೆಯಿತು, ವಿನೋದಕುಮಾರ ದಸ್ತಾಪೂರ ಸಂಗೀತ ಸೇವೆ ಹಾಗೂ ಷಣ್ಮುಖಯ್ಯ ಸ್ವಾಮಿ ಮಠಪತಿ ತಬಲಾ ಸೇವೆ ಸಲ್ಲಿಸಿದರು. ಶರಣಯ್ಯ ಸ್ವಾಮಿ ಸ್ಥಾವರಮಠ ಸ್ವಾಗತಿಸಿದರು, ಶಂಭುಲಿಂಗ ಸಂಗಾವಿ ನಿರೂಪಿಸಿದರು. ಇದಕ್ಕೂ ಮುನ್ನ ಮಂಗಳವಾರ ಬ್ರಾಹ್ಮಿ ಮುಹೂರ್ತದಲ್ಲಿ ಶ್ರೀ ಕತೃ ಗದ್ದುಗೆಗೆ ಮಹಾರುದ್ರಾಭಿಷೇಕ ಪೂಜಾ ನೆರವೇರಿದ್ದು, ಸಂಜೆ ಪುರವಂತರ ಆಟದೊಂದಿಗೆ ಸಕಲ ಮಂಗಲ ವಾದ್ಯಗಳೊಂದಿಗೆ ಪಲ್ಲಕ್ಕಿ ಉತ್ಸವ ನಡೆಯಿತು.

Spread the love

Leave a Reply

Your email address will not be published. Required fields are marked *

error: Content is protected !!