Oplus_131072

ದಿಗ್ಗಾಂವ ಪುರಾಣ ಕಾರ್ಯಕ್ರಮ, ಸುಖ ಮತ್ತು ದುಃಖ ಎರಡನ್ನು ಸಮಾನವಾಗಿ ಸ್ವೀಕರಿಸಿ: ಸುಂಟನೂರ್ ಸಿದ್ದೇಶ್ವರ ಶಾಸ್ತ್ರಿಗಳು

ನಾಗಾವಿ ಎಕ್ಸಪ್ರೆಸ್

ಚಿತ್ತಾಪುರ: ಪ್ರತಿಯೊಬ್ಬರ ಜೀವನದಲ್ಲೂ ಒಳಿತು ಕೆಡುಕು ಒಂದರ ನಂತರ ಮತ್ತೊಂದು ಸಂಭವಿಸುವುದು ಸಾಮಾನ್ಯ. ಈ ಹಿನ್ನೆಲೆಯಲ್ಲಿ ಸುಖ ಮತ್ತು ದುಃಖ ಎರಡನ್ನು ಸಮಾನವಾಗಿ ಸ್ವೀಕರಿಸಬೇಕು ಎಂದು ಸುಂಟನೂ‌ರ್ ಹಿರೇಮಠದ ಪುರಾಣಿಕ ಪಂಡಿತ್ ಶ್ರೀ ಸಿದ್ದೇಶ್ವರ ಶಾಸ್ತ್ರಿಗಳು ಹೇಳಿದರು.

ತಾಲೂಕಿನ ಪುರಾತನ ಪ್ರಸಿದ್ಧ ಚಿಕ್ಕ ಶ್ರೀಶೈಲ ಎಂದು ಖ್ಯಾತಿಯಾದ ಸುಕ್ಷೇತ್ರ ದಿಗ್ಗಾಂವ ಗ್ರಾಮದ ಶ್ರೀ ಶಂಭುಲಿಂಗೇಶ್ವರ ಜಾತ್ರಾ ಮಹೋತ್ಸವ ನಿಮಿತ್ತ ಕಲಬುರಗಿ ಮಹಾದಾಸೋಹಿ ಶ್ರೀ ಶರಣಬಸವೇಶ್ವರರ ಮಹಾಪುರಾಣ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದ ಅವರು, ಸುಖ ನೀಡಿದ ಅನುಭವಕ್ಕಿಂತ ದುಃಖ ನೀಡುವ ಅನುಭವವೇ ಹೆಚ್ಚು ಪರಿಣಾಮಕಾರಿ. ಬದುಕಿನಲ್ಲಿ ಸುಖ ಮತ್ತು ದುಃಖ ಎರಡೂ ಶಾಶ್ವತವಲ್ಲ. ನಾವು ಮಾಡುವಂಥ ಉತ್ತಮ ಕಾರ್ಯಗಳು ಮಾತ್ರ ಸದಾ ಜನಮಾನಸದಲ್ಲಿ ಉಳಿಯುತ್ತವೆ ಎಂದು ಹೇಳಿದರು.

ಬೆನಕನಹಳ್ಳಿ ವೀರಕ್ತಮಠದ ಶ್ರೀ ಕೇದಾರನಾಥ ಸ್ವಾಮಿಗಳು ಸಾನಿಧ್ಯ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಪತ್ರಕರ್ತರಾದ ವೀರೇಂದ್ರ ಕೊಲ್ಲೂರು, ಜಗದೇವ ದಿಗ್ಗಾಂವಕರ್, ಕಾಶಿನಾಥ ಗುತ್ತೇದಾರ, ಮಹ್ಮದ್ ಮಶಾಕ್, ಚಂದ್ರಶೇಖರ ಬಳ್ಳಾ, ಆನಂದ ರೆಡ್ಡಿ ಇವಣೆ ವೇದಿಕೆಯಲ್ಲಿದ್ದರು.

ಹಿತ್ತಲಶಿರೂರು ಹಿರೇಮಠದ ಕಲ್ಲಿನಾಥ್ ಶಾಸ್ತ್ರಿಗಳು ಸಂಗೀತ ಸೇವೆ ಹಾಗೂ ವೀರಯ್ಯ ಸ್ವಾಮಿ ಮಾಡ್ಯಾಳ ತಬಲಾ ಸೇವೆ ಸಲ್ಲಿಸಿದರು. ರಾಮನಾಥ ಪೊಲೀಸ್ ಪಾಟೀಲ, ಸೋಮನಾಥ್ ಪೊಲೀಸ್ ಪಾಟೀಲ, ಬನಶಂಕರ, ಮಲ್ಲಶೆಟ್ಟಪ್ಪ ಸಂಗಾವಿ, ವಿರೇಶ್ ಸಂಗಾವಿ, ಕಾಶಿನಾಥ ದುಗನೂರ, ಶೇಖರ್ ಅಣಿಕೇರಿ, ಶೈಲುಗೌಡ ಪಾಟೀಲ, ಮಹಾದೇವ ಗುಂಡಾನೋರ, ರಮೇಶ್ ಗುತ್ತೇದಾರ ಸೇರಿದಂತೆ ಮಹಾದಾಸೋಹಿ ಶ್ರೀ ಶರಣಬಸವೇಶ್ವರ ಮಹಾಪುರಾಣ ಸಮಿತಿಯ ಸದಸ್ಯರು ಹಾಗೂ ಶ್ರೀ ಶಂಭುಲಿಂಗೇಶ್ವರ ದೇವಸ್ಥಾನ ಟ್ರಸ್ಟ್ ಪದಾಧಿಕಾರಿಗಳು ಸೇರಿದಂತೆ ಮಹಿಳೆಯರು ಉಪಸ್ಥಿತರಿದ್ದರು. ಶಂಭುಲಿಂಗ ಸಂಗಾವಿ ನಿರೂಪಿಸಿದರು.

Spread the love

Leave a Reply

Your email address will not be published. Required fields are marked *

You missed

error: Content is protected !!