Oplus_0

ದಿಗ್ಗಾಂವ ರೈತರ ಜಮೀನನ್ನು ಪರವಾನಿಗೆ ತೆಗೆದುಕೊಳ್ಳದೇ ನೋಂದಣಿ ಮಾಡಿಕೊಳ್ಳುತ್ತಿರುವುದನ್ನು ನಿಲ್ಲಿಸುವಂತೆ ಆಗ್ರಹಿಸಿ ರೈತ ಸಂಘ ಜಿಲ್ಲಾಧಿಕಾರಿಗೆ ಮನವಿ 

ನಾಗಾವಿ ಎಕ್ಸಪ್ರೆಸ್ 

ಚಿತ್ತಾಪುರ: ತಾಲೂಕಿನ ದಿಗ್ಗಾಂವ ಗ್ರಾಮದ ವಿವಿಧ ಸರ್ವೆ ನಂಬರಗಳ ರೈತರ ಜಮೀನನ್ನು ಅಲ್ಟ್ರಾ ಟೆಕ್ ಸಿಮೆಂಟ್  ಉತ್ಪಾದನಾ ಕಲ್ಲುಗಣಿಗಾರಿಕೆಗಾಗಿ 1961 ರ 109 ಪ್ರಕಾರ ಪರವಾನಿಗೆ ತೆಗೆದುಕೊಳ್ಳದೇ ಚಿತ್ತಾಪುರ ತಾಲೂಕಿನ ಉಪ ನೋಂದಣಿ ಅಧಿಕಾರಿ ರೈತರ ಆಸ್ತಿ ನೋಂದಣಿ ಮಾಡಿಕೊಳ್ಳುತ್ತಿದ್ದಾರೆ ಇದನ್ನು ಕೂಡಲೇ ನಿಲ್ಲಿಸಬೇಕೆಂದು ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಕಾರ್ಮಿಕ ಸೇನೆ ಹಾಗೂ ನವ ಕರ್ನಾಟಕ ರೈತ ಸಂಘ ಇವರ ನೇತೃತ್ವದಲ್ಲಿ ರೈತರು ಜಿಲ್ಲಾಧಿಕಾರಿಗೆ ಮನವಿ ಪತ್ರ ಸಲ್ಲಿಸಿದರು.

ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಜಗದೀಶ ಎಸ್.ಸಾಗರ ಮಾತನಾಡಿ, ಚಿತ್ತಾಪುರ ತಾಲೂಕಿನ ದಿಗ್ಗಾಂವ ಗ್ರಾಮದಲ್ಲಿ ವಿವಿಧ ಸರ್ವೆ ನಂಬರಗಳು ಕಳೆದ 23 ಮಾರ್ಚ್ 2022 ರಂದು ಅಜೀತ್ ಉಸ್ಟಾಲ್ ಎಂಬುವರು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಖನಿಜ ಭವನ ಬೆಂಗಳೂರು ರವರ 11 ಏಪ್ರಿಲ್ 2022 ರಂದು ಎಲೆಕ್ಟ್ರಾನಿಕ್ ಹರಾಜಿನ ಮೂಲಕ 786 ಹೆಕ್ಟರ್ 32 ಗುಂಟೆ ಜಮೀನನ್ನು ರೈತರ ಗಮನಕ್ಕೆ ಇಲ್ಲದೆ ಎಲೆಕ್ಟ್ರಾನಿಕ್ ಹರಾಜಿನ ಮೂಲಕ ಅಜೀಶ್ ಉಸ್ವಾಲ್ ಅಲ್ಟಾಟೆಕ್ ಸಿಮೆಂಟ್ ಇವರಿಗೆ ಹರಾಜು ಮಾಡಿರುವುದು ನ್ಯಾಯವಲ್ಲ, ಮತ್ತು ಚಿತ್ತಾಪುರ ತಾಲೂಕಿನ ಉಪ ನೋಂದಣಿ ಕಾರ್ಯಾಲಯದಲ್ಲಿ ಅಲ್ಟ್ರಾಟೆಕ್ ಸಿಮೆಂಟ್ ರವರು ದಿಗ್ಗಾಂವ ಗ್ರಾಮದ ವಿವಿಧ ಸರ್ವೆ ನಂಬರಗಳ ಭೂಮಿ ಫಲವತ್ತಾಗಿರುತ್ತದೆ. ಎಕರೆಗೆ 10 ಕ್ವಿಂಟಲ್ ಇಳುವರಿ ಬರುತ್ತದೆ. ಆದರೆ ಅಲ್ಟ್ರಾಟೆಕ್ ಸಿಮೆಂಟ್ ಲಿಮಿಟೆಡ್ ಕಂಪನಿಯವರು ಮಧ್ಯವರ್ತಿಗಳಿಂದ ಉಪ-ನೋಂದಣಿ ಕಚೇರಿಯಲ್ಲಿ ಎಕರೆಗೆ ರೂ.15,00,000 ಲಕ್ಷದಂತೆ ನೋಂದಣಿ ಮಾಡಿಕೊಂಡು ರೈತರನ್ನು ವಂಚಿಸುತ್ತಿದ್ದಾರೆ ಎಂದು ಹೇಳಿದರು.

1961 ರ ಪ್ರಕಾರ 109 ಪ್ರಕಾರ ಕಲಬುರಗಿ ಜಿಲ್ಲಾಧಿಕಾರಿಗಳಿಂದ ಪರವಾನಿಗೆ ಇಲ್ಲದೆ ರೈತರಿಗೆ ಮೋಸ ಮಾಡುತ್ತಿದ್ದಾರೆ. ಆದ್ದರಿಂದ ಜಿಲ್ಲಾಧಿಕಾರಿಗಳು ಮಧ್ಯಸ್ಥಿತಿಗೆ ವಹಿಸಬೇಕೆಂಬುದು ರೈತರ ಮನವಿ ಇರುತ್ತದೆ. ಮತ್ತು ಚಿತ್ತಾಪುರ ತಾಲೂಕಿನ ದಿಗ್ಗಾಂವ ಗ್ರಾಮದ ವಿವಿಧ ಸರ್ವೆ ನಂಬರಗಳು ನೋಂದಣಿ ಆಗುತ್ತಿರುವುದನ್ನು ಕೂಡಲೇ ನಿಲ್ಲಿಸಬೇಕು. ಇಲ್ಲದೆ ಇದ್ದಲ್ಲಿ ದಿಗ್ಗಾಂವ ಗ್ರಾಮದ ರೈತರು ಬೀದಿಗಿಳಿದು ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.

ಈ ಸಂದರ್ಭದಲ್ಲಿ ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪರಮೇಶ್ವರ ಜಿ.ಜಳಕಿ, ತಾಲೂಕು ಅಧ್ಯಕ್ಷ ಪರಮೇಶ್ವರ ಎಸ್.ಮತ್ತಿಮಡು, ನವ ಕರ್ನಾಟಕ ರೈತ ಸಂಘದ ಸೇಡಂ ಅಧ್ಯಕ್ಷ ದೊಡ್ಡಪ್ಪ ಮಳಖೇಡ, ದಿಗ್ಗಾಂವ ಗ್ರಾಪಂ ಅಧ್ಯಕ್ಷ ಹರಳಯ್ಯ ಬಡಿಗೇರ್, ಉಪಾಧ್ಯಕ್ಷ ಜಗನ್ನಾಥ ಸೀದಾ, ಸುರೇಶ್ ಅಚ್ಚೇಲಿ, ಗುರುಶಾಂತ್ ಭಾಗೋಡಿ, ನಾಗರಾಜ್ ಸುಲ್ತಾನಪೂರ, ಗುರುಲಿಂಗಪ್ಪ ಬಂದಳ್ಳಿ, ದೇವಿಂದ್ರಪ್ಪ ಪುಟಪಾಕ್ ಸೇರಿದಂತೆ ಅನೇಕ ರೈತರು ಉಪಸ್ಥಿತರಿದ್ದರು.

Spread the love

Leave a Reply

Your email address will not be published. Required fields are marked *

You missed

error: Content is protected !!