ದಿಗ್ಗಾಂವ ಶ್ರೀಗಳು ಶಿವಲಿಂಗದ ಮೇಲೆ ಕಾಲಿಟ್ಟಿದ್ದು ಮಹಾಪರಾಧ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ತಾಲೂಕಿನ ದಿಗ್ಗಾಂವ ಪಂಚಗೃಹ ಹಿರೇಮಠದ ಪೀಠಾಧಿಪತಿ ಸಿದ್ದವೀರ ಶಿವಾಚಾರ್ಯರು ಶಿವಲಿಂಗದ ಮೇಲೆ ಕಾಲಿಟ್ಟಿದ್ದು (ಪಾದಗಳು) ಮಹಾಪರಾಧ ವಾಗಿದ್ದು ಇದನ್ನು ಭಾಗೋಡಿ ಶಿವಭಕ್ತರು ಉಗ್ರವಾಗಿ ಖಂಡಿಸುತ್ತೇವೆ ಎಂದು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ತಾಲೂಕು ಕಾರ್ಯದರ್ಶಿ ದಳಪತಿ ಬಸವರಾಜ ಪೊಲೀಸ್ ಪಾಟೀಲ ಭಾಗೋಡಿ ತಿಳಿಸಿದ್ದಾರೆ.
ಈ ಕುರಿತು ಪತ್ರಿಕೆ ಹೇಳಿಕೆ ನೀಡಿದ ಅವರು, ಈ ಹಿಂದೆ ಒಮ್ಮೆ ಮೋಟ್ನಳ್ಳಿ ಗ್ರಾಮದಲ್ಲಿ ದೇವತೆಯ ಮೇಲೆ ಪಾದವನ್ನು ಇಟ್ಟು ಪೂಜೆ ಮಾಡಿದ್ದು ಉಂಟು ಇದು ಈಗ ಎರಡನೇ ಸಲ ಸೇಡಂ ತಾಲೂಕಿನ ಕಲಕಂಬ ಗ್ರಾಮದಲ್ಲಿ ಶಿವಲಿಂಗ ಮೇಲೆ ಪಾದವನ್ನು ಇಟ್ಟು ಪೂಜೆ ಮಾಡಿದ್ದು ಮಹಾ ಅಪರಾಧ ಕೂಡಲೇ ಶಿವಭಕ್ತರ ಕ್ಷಮೆ ಕೋರಬೇಕು ಎಂದು ಆಗ್ರಹಿಸಿದ್ದಾರೆ.
ದಿಗ್ಗಾಂವ ಶ್ರೀಗಳು ಕೂಡಲೇ ಎಚ್ಚೆತ್ತು ಇಷ್ಟಕ್ಕೆ ಸುಮ್ಮನಾದರೆ ಒಳಿತು ಇಲ್ಲದಿದ್ದರೆ ಶ್ರೀಮಠದ ಕೆಲವು ಗುಪ್ತ ಸಮಾಚಾರಗಳನ್ನು ಬಯಲಿಗೆ ಎಳೆಯಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.