ಡೋಣಗಾಂವ ಗ್ರಾಮದಿಂದ ಪ್ರಯಾಗ ರಾಜ್ ಪ್ರವಾಸ ಕೈಗೊಂಡ ಮಹಿಳೆಯರು, ಪ್ರಯಾಗ ರಾಜ್ ಗಂಗಾ, ಯಮುನಾ ಮತ್ತು ಸರಸ್ವತಿ ನದಿಗಳ ಸಂಗಮಸ್ಥಳ: ಕಾಶಪ್ಪ ಡೋಣಗಾಂವ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ತಾಲೂಕಿನ ಡೋಣಗಾಂವ ಗ್ರಾಮದಿಂದ ಯುವಕರು ಹಾಗೂ ಮಹಿಳೆಯರು ಪವಿತ್ರ ಸ್ಥಳ ತ್ರಿವೇಣಿ ಸಂಗಮದಲ್ಲಿ ಸ್ನಾನ ಮಾಡಲು ಪ್ರಯಾಗ ರಾಜ್ ಪ್ರವಾಸ ಕೈಗೊಂಡಿದ್ದಾರೆ.
ಕೋಲಿ ಸಮಾಜದ ತಾಲೂಕು ಉಪಾಧ್ಯಕ್ಷ ಕಾಶಪ್ಪ ಡೋಣಗಾಂವ ಮಾತನಾಡಿ, ಗಂಗಾ, ಯಮುನಾ ಮತ್ತು ಸರಸ್ವತಿ ನದಿಗಳ ಸಂಗಮಸ್ಥಳವಾದುದರಿಂದ ಹಿಂದೂಗಳಿಗೆ ಇದು ಪ್ರಮುಖ ತೀರ್ಥಸ್ಥಳವಾಗಿದೆ ಅದರಲ್ಲೂ 144 ವರ್ಷಕ್ಕೊಮ್ಮೆ ಬರುವ ಮಹಾ ಕುಂಭಮೇಳ ಪ್ರಸ್ತುತ ವರ್ಷದಲ್ಲಿ ಬಂದಿರುವುದು ಅದನ್ನು ಕಣ್ತುಂಬಾ ನೋಡಿ ಪವಿತ್ರ ಸ್ನಾನ ಮಾಡುವ ಭಾಗ್ಯ ಒದಗಿ ಬಂದಿರುವುದು ನಮ್ಮ ಪುಣ್ಯ ಎಂದರು.
ಗ್ರಾಮದ ತಾಯಂದಿರು, ಸಹೋದರಿಯರು ಪ್ರಯಾಗ ರಾಜ್ ಪ್ರವಾಸಕ್ಕೆ ಹೋಗುವ ನಿರ್ಧಾರ ಕೈಗೊಂಡಿದ್ದಾರೆ ಇವರಿಗೆ ಗ್ರಾಮದ ಕೆಲ ಯುವಕರು ಸಾತ್ ನೀಡಿದ್ದಾರೆ ಎಂದು ಹೇಳಿದರು.
ಪ್ರವಾಸ ತಂಡದಲ್ಲಿ ಮಂಜುನಾಥ (ದೇವರಹಳ್ಳಿ) ಡೋಣಗಾಂವ, ಯಲ್ಲಾಲಿಂಗ ದೇವರಹಳ್ಳಿ, ಮಾರ್ಥಂಡಪ್ಪ ಪೂಜಾರಿ, ರವಿ ಪೂಜಾರಿ ಡೋಣಗಾಂವ, ಬಸವರಾಜ್ (ಬೆಳ್ಳಿ ) ಪೂಜಾರಿ ಡೋಣಗಾಂವ, ಮಾರ್ಥಂಡಪ್ಪ್ ಪೂಜಾರಿ, ಯಲ್ಲಪ್ಪ (ದೇವರಹಳ್ಳಿ )ಡೋಣಗಾಂವ, ಕುಪ್ಪಣ್ಣ ಬಾನರ್, ನಾಗಪ್ಪ ಪುಟಾಣಿ ಡೋಣಗಾಂವ, ಮಲ್ಲಮ್ಮ ಡೋಣಗಾಂವ ( ರಾಮತೀರ್ಥ), ಸಿದ್ದಮ್ಮ ಮೀಸಿ ಡೋಣಗಾಂವ, ಸುಮಿತ್ರಮ್ಮ ದೊಡ್ಡಮನಿ, ಮಣಿಕಮ್ಮ ಕಲಾಲ್, ಶಿವಮ್ಮ ಹಲಕಟ್ಟಿ, ಮೊಗಲಮ್ಮ ಅಳ್ಳೊಳ್ಳಿ, ಲಕ್ಷ್ಮಿ ಮಾತಗಾ, ದುರ್ಗಮ್ಮ ಹಲಕಟ್ಟಿ, ಈರಮ್ಮ ಡೋಣಗಾಂವ(ದೇವರಹಳ್ಳಿ), ನಿಂಗಮ್ಮ ಡೋಣಗಾಂವ, ದೇವಿಂದ್ರಮ್ಮ (ಬೇನಕನಹಳ್ಳಿ) ಡೋಣಗಾಂವ ಇದ್ದಾರೆ. ಜಿಲ್ಲಾ ಗ್ಯಾರಂಟಿ ಯೋಜನೆ ಸಮಿತಿ ಸದಸ್ಯ ಶರಣು ಡೋಣಗಾಂವ ಪ್ರವಾಸ ಕೈಗೊಂಡ ಎಲ್ಲರಿಗೂ ಶುಭ ಹಾರೈಸಿದರು.