Oplus_131072

ಡೋಣಗಾಂವ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಸಿದ್ರಾಮ ಮೆಂಗಾ ಉಪಾಧ್ಯಕ್ಷರಾಗಿ ದೇವಿಂದ್ರಪ್ಪ ಹಲಕರ್ಟಿ ಅವಿರೋಧ ಆಯ್ಕೆ 

ನಾಗಾವಿ ಎಕ್ಸಪ್ರೆಸ್

ಚಿತ್ತಾಪುರ: ತಾಲೂಕಿನ ಡೋಣಗಾಂವ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ನಡೆದ ಅಧ್ಯಕ್ಷ ಉಪಾಧ್ಯಕ್ಷ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಸಿದ್ರಾಮ ಹಣಮಂತ ಮೆಂಗಾ ಹಾಗೂ ಉಪಾಧ್ಯಕ್ಷರಾಗಿ ದೇವಿಂದ್ರಪ್ಪ ನರಸಪ್ಪ ಹಲಕರ್ಟಿ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಆನಂದಕುಮಾರ್ ಪೂಜಾರಿ ತಿಳಿಸಿದ್ದಾರೆ.

ಗ್ರಾಮದ ಸಂಘದ ಕಚೇರಿಯಲ್ಲಿ ಸೋಮವಾರ ನಡೆದ ಚುನಾವಣೆ ಪ್ರಕ್ರಿಯೆಯಲ್ಲಿ ಆಡಳಿತ ಮಂಡಳಿಯ 12 ಜನ  ನಿರ್ದೇಶಕರ ಪೈಕಿ ಪರಿಶಿಷ್ಟ ಪಂಗಡದ ಒಂದು ಸ್ಥಾನ ಖಾಲಿಯಿದ್ದು 11 ಜನ ನಿರ್ದೇಶಕರಾದ ಸಣ್ಣ ಶರಣಪ್ಪ ದೇವಿಂದ್ರಪ್ಪ, ದುರ್ಗಮ್ಮ ಶರಣಪ್ಪ, ತಿಪ್ಪಣ್ಣ ಶಿವರಾಯ, ದುರ್ಗಮ್ಮ ದುಂಡಪ್ಪ, ಭೀಮವ್ವ ರಾಮಣ್ಣ ಪರಮಾನೂರ, ಕಮಲಾಬಾಯಿ ಚಂದಪ್ಪ ಪೂಜಾರಿ, ಭೀಮಣ್ಣ ರಾಯಪ್ಪ ಮಾಡಗಿ, ಶರಣಗೌಡ ಮಲ್ಲರೆಡ್ಡಿ ಪೋ.ಪಾಟೀಲ, ದೇವಿಂದ್ರಪ್ಪ ಸಾಬಣ್ಣ ಜಡಿ ಭಾಗವಹಿಸಿದ್ದರು.

ಈ ಸಂದರ್ಭದಲ್ಲಿ ಸಂಘದ ಮುಖ್ಯಕಾರ್ಯನಿರ್ವಹಣಾಧಿಕಾರಿ ಮಾರುತಿ ಇವಣಿ, ಕೋಲಿ ಸಮಾಜದ ತಾಲೂಕು ಅಧ್ಯಕ್ಷ ನಿಂಗಣ್ಣ ಹೆಗಲೇರಿ, ಮುಖಂಡರಾದ ಕಾಶಪ್ಪ ಹಲಕರ್ಟಿ, ಮಲ್ಲಪ್ಪ ಹೊನ್ನಪ್ಪನೊರ್, ಮಲ್ಲಿಕಾರ್ಜುನ ಭಂಕೂರ, ರಾಮಣ್ಣಗೌಡ ನೊನಿ, ಶಿವಶರಣ ಮೆಂಗಾ, ಶಿವಯ್ಯ ಸ್ವಾಮಿ, ರವಿ ಪೂಜಾರಿ, ಮಾರ್ತಂಡ ಪೂಜಾರಿ, ಸಾಬಣ್ಣ ಪೂಜಾರಿ, ಶರಣಪ್ಪ ಹೊನ್ನಪ್ಪನೊರ್ ಸೇರಿದಂತೆ ಇತರರು ಉಪಸ್ಥಿತರಿದ್ದರು. ಫಲಿತಾಂಶ ಹೊರಬೀಳುತ್ತಿದ್ದಂತೆ ಮುಖಂಡರು, ಕಾರ್ಯಕರ್ತರು ಹಾಗೂ ಬೆಂಬಲಿಗರು ವಿಜಯೋತ್ಸವ ಆಚರಿಸಿದರು.

Spread the love

Leave a Reply

Your email address will not be published. Required fields are marked *

error: Content is protected !!