ಚಿತ್ತಾಪುರ: ಎಕರೆಗೆ 20 ಸಾವಿರ ಪರಿಹಾರ ಘೋಷಿಸಲು ಜೆಡಿಎಸ್ ಆಗ್ರಹ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ತಾಲೂಕಿನಾದ್ಯಂತ ಮುಂಗಾರು ಬೆಳೆಗಳಾದ ಹೆಸರು, ಉದ್ದು, ಬೆಳೆಗಳು ಇದೆ ವರ್ಷದ 25 ಆಗಸ್ಟ್ ದಿಂದ 2 ನೇ ಸೆಪ್ಟೆಂಬರವರೆಗೆ ಬಿಸಿದ ಆಸ್ನಾ ಸೈಕ್ಲೋನ ಮಳೆಗೆ ಸಂಪೂರ್ಣ ಬೆಳೆಗಳು ನಾಶವಾಗಿದೆ. ಹೀಗಾಗಿ ಸರ್ಕಾರ ಕೂಡಲೇ ಹೆಸರು ಮತ್ತು ಉದ್ದು ಬೆಳೆಗಳ ಹಾನಿಯನ್ನು ವಿಶೇಷ ಸಮಿಕ್ಷೆ ಕೈಗೊಂಡು ರೈತರಿಗೆ ಕನಿಷ್ಠ ಎಕರೆಗೆ 20 ಸಾವಿರ ರೂಪಾಯಿಯಂತೆ ಪರಿಹಾರ ಘೋಷಿಸಬೇಕೆಂದು ಜೆಡಿಎಸ್ ತಾಲೂಕು ಉಪಾಧ್ಯಕ್ಷ ಅಬ್ದುಲ್ ಲತೀಫ್, ಜಿಲ್ಲಾ ಉಪಾಧ್ಯಕ್ಷ ನಾಗಣ್ಣ ವಾರದ್ ದಂಡೋತಿ ಅವರು ಆಗ್ರಹಿಸಿದ್ದಾರೆ.
60 ವರ್ಷಗಳ ನಂತರ ಅಂದರೆ 1964 ರಲ್ಲಿ ಅಗಸ್ಟ್ ತಿಂಗಳಲ್ಲಿ ಸೈಕ್ಲೋನ ಆಗಿತ್ತು. ಆದರೆ ಆಗಸ್ಟ್ ತಿಂಗಳಲ್ಲಿ ಸಾಮಾನ್ಯವಾಗಿ ಯಾವುದೇ ಸೈಕ್ಲೋನ ಬರುವುದಿಲ್ಲ. ವಾಡಿಕೆಯಂತೆ ನವೆಂಬರ್ ತಿಂಗಳಲ್ಲಿ ಸೈಕ್ಲೋನ ಬರುತ್ತದೆ. ಈ ಸೈಕ್ಲೋನ ಮಳೆಯಿಂದ ಸುಮಾರು ಶೇ.20 ಹೆಸರು ಮತ್ತು ಶೇ.80 ಉದ್ದು ಬೆಳೆ ಕಟಾವು ಹಂತದಲ್ಲಿ ಸಂಪೂರ್ಣ ನಾಶವಾಗಿರುತ್ತವೆ. ಅಲ್ಲದೆ ಮಳೆಯ ನಿಮಿತ್ತ ಕೂಲಿ ಕಾರ್ಮಿಕರ ಅಭಾವದಿಂದ ಕೂಲಿ ದರ ಹೆಚ್ಚಳವಾಗಿರುತ್ತದೆ. ರೈತರು ಬಿತ್ತನೆಗೆ ಹಾಕಿರುವ ಬಂಡವಾಳ ಬಾರದೆ ರೈತರು ತುಂಬಾ ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ತಿಳಿಸಿದ್ದಾರೆ.
ಚಿತ್ತಾಪುರ ತಾಲೂಕಿನಲ್ಲಿ ರೈತರು ತುಂಬಾ ಸಂಕಷ್ಟ ಎದುರಿಸುತ್ತಿದ್ದಾರೆ ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಎಂಬಂತ ಸ್ಥಿತಿ ನಿರ್ಮಾಣವಾಗಿದೆ, ಇಷ್ಟಾದರೂ ಸಂಬಂಧಪಟ್ಟ ಅಧಿಕಾರಿಗಳಾಗಲಿ ಜನಪ್ರತಿನಿಧಿಗಳಾಗಲಿ ಹೊಲಗಳಿಗೆ ಭೇಟಿ ನೀಡಿ ರೈತರ ನೋವು ನಲಿವು ಆಲಿಸಿಲ್ಲ, ಹೀಗಾಗಿ ಕೂಡಲೇ ಜಿಲ್ಲಾಧಿಕಾರಿಗಳು ಭೇಟಿ ನೀಡಿ ರೈತರ ನೋವು ನಿವಾರಿಸಬೇಕು ಎಂದು ಒತ್ತಾಯಿಸಿದ್ದಾರೆ.