ಇವಣಿ ಗ್ರಾಮದಲ್ಲಿ ಶ್ರಾವಣ ಬಸವೇಶ್ವರ ದೇವರ ಅದ್ದೂರಿ ಪಲ್ಲಕಿ ಉತ್ಸವ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ತಾಲೂಕಿನ ಇವಣಿ ಗ್ರಾಮದಲ್ಲಿ ಬಸವೇಶ್ವರ ದೇವರ ಶ್ರಾವಣ ಮಾಸದ ನಿಮಿತ್ಯ ಒಂದು ತಿಂಗಳು ಕಾಲ ವಿಶೇಷ ಪೂಜೆ ಹಾಗೂ ಅಭಿಷೇಕ್ ಬಿಲ್ಪತ್ರೆ ಯಿಂದ ಬಸವೇಶ್ವರ ಮೂರ್ತಿಗೆ ವಿಶೇಷ ಪೂಜೆ ನೇರವೇರಿಸಲಾಯಿತು.
ಪ್ರತಿ ಸೋಮವಾರದಂದು ಅಭಿಷೇಕ್ ಹಾಗೂ ಪೂಜೆಗಳು 5 ವಾರ ಮಾಡಿಕೊಂಡು ಬರಲಾಗಿದ್ದು ಕೊನೆಯ ಸೋಮವಾರದಂದು ದೇವಸ್ಥಾನ ದಿಂದ ಬಂದ ನಂತರ ಭಕ್ತರಿಗೆ ಅನ್ನದಾಸೋಹ ನೆವರೆಸಿದರು.
ಮಂಗಳವಾರ ದಂದು ಬಸವೇಶ್ವರ ಮೂರ್ತಿ ಹಾಗೂ ಭಾವಚಿತ್ರವನ್ನು ದೇವಸ್ಥಾನ ಅಡ್ಡ ಪಲ್ಲಕಿ ಉತ್ಸವ ಗ್ರಾಮದ ಪ್ರಮುಖ ಬಿದಿಗಳಲ್ಲಿ ಭಜನಾ ಮಂಡಳಿ, ಹಾಗೂ ವಿವಿಧ ವಾದ್ಯಗಳ ಮೂಲಕ ಅದ್ದೂರಿಯಾಗಿ ನೇರವೇರಿತ್ತು.
ಗ್ರಾಮದ ಪ್ರಮುಖರಾದ ವೀರುಪಾಕ್ಷಪ್ಪ ಗಡ್ಡದ್, ಕರಬಸಪ್ಪ ಉಪ್ಪಿನ್, ಶ್ರೀಶೈಲ ಗೌಡ ಪಾವಡಶೆಟ್ಟಿ, ಗ್ರಾಮ ಪಂಚಾಯತ ಸದಸ್ಯರಾದ ಚನ್ನಪ್ಪ ಐನಾಪುರ, ಸುಬಣ್ಣಗೌಡ ಲಗಶೆಟ್ಟಿ, ಗುಂಡಪ್ಪ ಬಿರಾದಾರ್, ಕರಣಪ್ಪ ರಾವುರ, ನಾಗಣ್ಣ ಉಪ್ಪಿನ್, ಬಾಬುರಾವ್ ಪಾವಡಶೆಟ್ಟಿ, ಬಸವರಾಜ್ ಗಡ್ಡದ, ಮಲ್ಲಣ್ಣ ಇಂಗಿನ, ವಿಶ್ವನಾಥ್ ತಿಳಗೊಳ, ಚಂದ್ರಕಾಂತ್ ಬಂಗಾರ,
ಗ್ರಾಮದ ಯುವಕರಾದ ಮಹೇಶ್ ಗಡ್ಡದ, ವಿಶ್ವರಾಧ್ಯ ಉಪ್ಪಿನ್, ಅಣ್ಣಾರಾಯ ವಿ ಇವಣಿ, ಚಂದ್ರಶೇಖರ ವೈ. ಉಪ್ಪಿನ, ಅಂಬರೀಷ್ ಐನಾಪುರ, ವರುಣ ಬಂಗಾರ, ಬಾಬುರಾವ್ ಉಪ್ಪಿನ್, ರಾಜಶೇಖರ್ ಪಾವಡಶೆಟ್ಟಿ, ಲಕ್ಷ್ಮೀಕಾಂತ್ ಐನಾಪುರ, ಸಂಗಮೇಶ, ಸಿದ್ದರಾಮ್ ಇಂಗಿನ ಸೇರಿದಂತೆ ಅನೇಕ ಮಹಿಳೆಯರು ಇತರರು ಇದ್ದರು.