ಗಣೇಶ ಚತುರ್ಥಿ ನಿಮಿತ್ತ ಚಿತ್ತಾಪುರದಲ್ಲಿ ಪೊಲೀಸ್ ರೂಟ್ ಮಾರ್ಚ್
ಚಿತ್ತಾಪುರ: ಗಣೇಶ ಚತುರ್ಥಿ ನಿಮಿತ್ತ ಜನರಲ್ಲಿ ದೈರ್ಯ ತುಂಬಲು, ಶಾಂತಿ ನೆಲೆಸಲು ಪೊಲೀಸ್ ಇಲಾಖೆ ವತಿಯಿಂದ ಸೋಮವಾರ ಸಂಜೆ ಪೊಲೀಸ್ ರೂಟ್ ಮಾರ್ಚ್ ನಡೆಯಿತು.
ಶಹಾಬಾದ್ ಡಿವೈಎಸ್ಪಿ ಶಂಕರಗೌಡ ಪಾಟೀಲ ಮಾತನಾಡಿ, ಶಾಂತಿಯುತ ಗಣೇಶ ಉತ್ಸವ ಆಚರಣೆ, ಕಾನೂನು ಸುವ್ಯವಸ್ಥೆ ಹಾಗೂ ಪೊಲೀಸ್ ರಕ್ಷಣೆಯ ಕುರಿತು ಜನರಲ್ಲಿ ಜಾಗೃತಿ ಮೂಡಿಸುವುದು ಪೊಲೀಸ್ ರೂಟ್ ಮಾರ್ಚ್ ಉದ್ದೇಶವಾಗಿದೆ ಎಂದರು.
ಪಟ್ಟಣದ ರೈಲ್ವೆ ನಿಲ್ದಾಣದಿಂದ ಪ್ರಾರಂಭವಾದ ರೂಟ್ ಮಾರ್ಚ್ ಪೊಲೀಸ್ ಪಥ ಸಂಚಲನ ನಾಗಾವಿ ವೃತ್ತ, ಜನತಾ ವೃತ್ತ, ಚಿತ್ತಾವಲಿ ವೃತ್ತ, ಪಾಲಪ್ ಗಲ್ಲಿ, ಹೋಳಿ ಕಟ್ಟಿ, ಭುವನೇಶ್ವರಿ ವೃತ್ತದ ಮೂಲಕ ಅಂಬೇಡ್ಕರ್ ವೃತ್ತಕ್ಕೆ ಆಗಮಿಸಿ ಸಮಾಪ್ತಿಗೊಂಡಿತ್ತು.
ಸಿಪಿಐ ಚಂದ್ರಶೇಖರ ತಿಗಡಿ, ಪಿಎಸ್ಐ ಚಂದ್ರಾಮಪ್ಪ, ಲಾಲ್ ಅಹ್ಮದ್, ನಾಗೇಂದ್ರ ತಳವಾರ, ತಿಮ್ಮಯ್ಯ ಕರದಾಳ ಸೇರಿದಂತೆ ಪೊಲೀಸರು, ಗೃಹ ರಕ್ಷಕ ದಳ ಸಿಬ್ಬಂದಿಗಳು ಪಥ ಸಂಚಲನದಲ್ಲಿ ಭಾಗವಹಿಸಿದ್ದರು.