ಗಣೇಶ ಉತ್ಸವ ಕಾರ್ಯಕ್ರಮ
ಗಣೇಶ ಉತ್ಸವ ಎಲ್ಲರೂ ಸೇರಿ ಆಚರಿಸುವ ಹಬ್ಬ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ಎಲ್ಲ ಜಾತಿ ಜನಾಂಗದವರು, ಯುವಕರು, ಮಹಿಳೆಯರು ಎಲ್ಲರೂ ಸೇರಿ ಬಹಳ ಹುಮ್ಮಸ್ಸಿನಿಂದ ಮತ್ತು ಸಂತೋಷದಿಂದ ಆಚರಿಸಲ್ಪಡುವ ಹಬ್ಬವೇ ಗಣೇಶ ಉತ್ಸವ ಎಂದು ಕಾಂಗ್ರೆಸ್ ಮುಖಂಡ ಮಲ್ಲಿಕಾರ್ಜುನ ಮುಡುಬೂಳಕರ್ ಅಭಿಪ್ರಾಯಪಟ್ಟಿದ್ದಾರೆ.
ಪಟ್ಟಣದ ಸಂತೋಷ ನಗರದಲ್ಲಿ ಶ್ರೀ ವಿನಾಯಕ ಗೆಳೆಯರ ಬಳಗದ ವತಿಯಿಂದ ಹಮ್ಮಿಕೊಂಡಿದ್ದ ಗಣೇಶ ಉತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಸಂತೋಷ ನಗರದಲ್ಲಿ ಎಲ್ಲ ಯುವಕರು ಸೇರಿ ಸತತವಾಗಿ ಮೂರು ವರ್ಷಗಳಿಂದ ಗಣೇಶ ಉತ್ಸವ ಆಚರಿಸುತ್ತಾ ಬಂದಿದ್ದಾರೆ ಎಂದು ತಿಳಿಸಿದರು. ಇಲ್ಲಿ ಪ್ರತಿನಿತ್ಯ ಅನ್ನ ಪ್ರಸಾದ ವಿತರಣೆ ಮಾಡುವ ಕಾರ್ಯ ವಿಶೇಷವಾಗಿದೆ ಎಂದರು.
ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ರೇಖಾ ಪವನ್ ಕುಮಾರ್, ಮಮತಾ ಸತೀಶ್, ರೂಪಾ ನಿಂಗರಾಜ, ನಾಗರಾಜ ರುದ್ರಪ್ಪ, ಶಿವಾನಿ ರಮೇಶ್, ಸೌಜನ್ಯ ಬಸವರಾಜ, ಸುಮನ್ ರಾಜಶೇಖರ್, ಲಕ್ಷ್ಮೀ ರವಿ, ರಾಧೀಕಾ ಕಾಶಿನಾಥ, ಆಶಾರಾಣಿ ಆನಂದ ಅವರಿಗೆ ಬಹುಮಾನಗಳನ್ನು ವಿತರಿಸಲಾಯಿತು.
ಪತ್ರಕರ್ತ ಕಾಶಿನಾಥ ಗುತ್ತೇದಾರ ಮಾತನಾಡಿದರು. ಪತ್ರಕರ್ತರಾದ ರವಿಶಂಕರ್ ಬುರ್ಲಿ, ಅನಂತನಾಗ್ ದೇಶಪಾಂಡೆ, ಡಾ.ಸಂತೋಷ ಯಲ್ಹೇರಿ, ವಿನಾಯಕ ಬಳಗದ ಅಧ್ಯಕ್ಷ ಲಕ್ಷ್ಮೀಕಾಂತ ರಾಜೋಳ್ಳಾ, ಪ್ರಮುಖರಾದ ಬಸವರಾಜ ರಾಜೋಳ್ಳಾ, ಮಲ್ಲಿಕಾರ್ಜುನ ಅಲ್ಲೂರಕರ್, ಚನ್ನಬಸಪ್ಪ ಪಾಟೀಲ ಮುಡಬೂಳ, ನಾಗು ಯಾದಗಿರ, ಪರಮೇಶ್ವರ್ ಪೇಂಟರ್, ಸಾಗರ ಚೌದರಿ, ರಾಮಲಿಂಗ ಮೊಗಲಿ, ಸಂತೋಷ ಮುಡಬೂಳ ಸೇರಿದಂತೆ ಇತರರು ಇದ್ದರು. ರುದ್ರಪ್ಪ ತಾವರೆ ನಿರೂಪಿಸಿದರು.