ಗಂಡೋರಿ ನಾಲಾ ನೀರಾವರಿ ಯೋಜನೆಯಡಿಯಲ್ಲಿ ಕಾಲುವೆಗಳು ದುರಸ್ತಿ ಮಾಡಲು ರೈತ ಸಂಘ ಆಗ್ರಹ
ನಾಗಾವಿ ಎಕ್ಸಪ್ರೆಸ್
ಕಾಳಗಿ: ಗಂಡೋರಿ ನಾಲಾ ನೀರಾವರಿ ಯೋಜನೆಯಡಿಯಲ್ಲಿ ಕಾಲುವೆಗಳು ದುರಸ್ತಿ ಮಾಡಿ ರೈತರ ಅನುಕೂಲಕ್ಕಾಗಿ ನೀರು ಹರಿಸಬೇಕು ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ತಾಲೂಕು ಅಧ್ಯಕ್ಷ ವೀರಣ್ಣ ಗಂಗಾಣಿ ರಟಕಲ್ ಅವರು ಕಲಬುರ್ಗಿ ವಿಭಾಗದ ಕ.ನಿ.ನಿ.ನಿ ಮುಖ್ಯ ಕಾರ್ಯನಿರ್ವಾಹಕ ಅಭಿಯಂತರರಿಗೆ ಮನವಿ ಪತ್ರ ಸಲ್ಲಿಸಿ ಆಗ್ರಹಿಸಿದ್ದಾರೆ.
ರೈತರಿಗೆ ಕಾಲುವೆ ನೀರು ಆಸರೆಯಾಗಿದ್ದು ಯೋಜನೆಯ ಕಾಲುವೆಗಳು ಹದಗೆಟ್ಟು ಹೋಗಿವೆ ಇದರಿಂದ ರೈತರಿಗೆ ತೊಂದರೆಯಾಗುತ್ತಿದೆ. ಈಗ ರೈತರಿಗೆ ನೀರಿನ ಅವಶ್ಯಕತೆ ಇದ್ದು, ಕಾಲುವೆಗಳು ಸರಿಪಡಿಸಿ ನೀರು ಹರಿಸಿದರೆ ರೈತರಿಗೆ ಆದಾಯ ಪೂರಕವಾದ ಶೇಂಗಾ, ಮೆಣಸಿನಕಾಯಿ, ಮೆಕ್ಕೆಜೋಳ ಹಾಗೂ ದನಕರುಗಳಿಗೆ ತಿನ್ನಲು ಮೇವಿನ ಅನುಕೂಲವಾಗಲಿದೆ. ಆದ್ದರಿಂದ ರೈತರ ಅನುಕೂಲಕ್ಕಾಗಿ ಕೂಡಲೇ ನೀರು ಹರಿಸಬೇಕು ಎಂದು ಒತ್ತಾಯಿಸಿದ್ದಾರೆ.
ಈ ಸಂದರ್ಭದಲ್ಲಿ ರೈತ ಸಂಘದ ಮುಖಂಡರಾದ ಶಂಕರ್ ಚೌಕ್, ಶರಣು, ಬೈರಪ್ಪ ಸೇರಿದಂತೆ ಇತರರು ಇದ್ದರು.