ಕಲಬುರ್ಗಿ: ಬಂಜಾರ ಗೋರ ಸೇನೆ ಪ್ರತಿಭಟನೆಯಲ್ಲಿ ಕೋಮು ಸೌಹಾರ್ದತೆಗೆ ಭಂಗ ತರುವ ಯತ್ನ ಮಾಡಿದನ್ನು ಖಂಡಿಸಿ ಅಲ್ಪಸಂಖ್ಯಾತರ ನೌಕರರ ಸಂಘ ಜಿಲ್ಲಾಧಿಕಾರಿಗೆ ಮನವಿ
ನಾಗಾವಿ ಎಕ್ಸಪ್ರೆಸ್
ಕಲಬುರ್ಗಿ: ನಗರದಲ್ಲಿ ಬಂಜಾರ ಗೋರ ಸೇನೆ ವತಿಯಿಂದ ಇಚೇಗೆ ನಡೆದ ಪ್ರತಿಭಟನೆಯಲ್ಲಿ ಕಾನೂನು ಸುವ್ಯವಸ್ಥೆಗೆ ಭಂಗ ತರುವ ಮತ್ತು ಶತಮಾನಗಳಷ್ಟು ಹಳೆಯದಾದ ಕೋಮು ಸೌಹಾರ್ದತೆಗೆ ಭಂಗ ತರುವ ಯತ್ನ ಮಾಡಿದನ್ನು ಖಂಡಿಸಿ ಕರ್ನಾಟಕ ರಾಜ್ಯ ಸರ್ಕಾರಿ ನಿವೃತ್ತ ಅಲ್ಪಸಂಖ್ಯಾತರ ನೌಕರರ ಸಂಘದ ಜಿಲ್ಲಾಧ್ಯಕ್ಷ ಸೈಯದ್ ನಜಿರೋದ್ದಿನ್ ಮುತ್ತುವಲಿ ನೇತೃತ್ವದಲ್ಲಿ ಪದಾಧಿಕಾರಿಗಳು ಮುಖ್ಯಮಂತ್ರಿಗಳಿಗೆ ಬರೆದ ಮನವಿ ಪತ್ರವನ್ನು ಜಿಲ್ಲಾಧಿಕಾರಿಗೆ ಸಲ್ಲಿಸಿದರು.
ಈ ವೇಳೆ ಮಾತನಾಡಿದ ಅವರು, ಪ್ರತಿಭಟನೆಯಲ್ಲಿ ಭಂಗತಂದಿರುವ ಕಿಡಿಗೇಡಿಗಳಿಗೆ ಬಂಧಿಸಿ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ
ಯಡ್ರಾಮಿ ತಾಲೂಕಿನಲ್ಲಿ ಅಪ್ರಾಪ್ತ ಬಾಲಕಿಯ ಮೇಲೆ ನಡೆದ ಲೈಂಗಿಕ ದೌರ್ಜನ್ಯ ಅತ್ಯಂತ ಹೇಯವಾದ ಕೃತ್ಯವಾಗಿದ್ದು, ಮಾನವಿಯತೆಗೆ ನಾಚಿಕೆಗೇಡಿತನ ಸಂಗತಿಯಾಗಿದೆ. ಇದಕ್ಕೆ ಯಾವುದೇ ಸುಸಂಸ್ಕೃತ ಸಮಾಜ ಸಹಿಸುವುದಿಲ್ಲ. ಮತ್ತು ನಾವುಗಳಾಗಲಿ ಅಥವಾ ಯಾವುದೇ ಧರ್ಮದ ಅನುಯಾಯಿಗಳಾಗಲಿ ಇಂತಹ ಕ್ರಿಮಿನಲ್‌ಗಳಿಗೆ ಬೆಂಬಲಿಸುವುದಿಲ್ಲ. ಸದರಿ ಕೃತ್ಯ ಎಸಗಿರುವ ಕ್ರಿಮಿನಲ್‌ಗೆ ಕಾನೂನು ವತಿಯಿಂದ ಸೂಕ್ತ ಕಠಿಣ ಕ್ರಮ ಜರುಗಿಸಬೇಕು ಇದಕ್ಕೆ ನಮ್ಮದು ಸಂಪೂರ್ಣ ಬೆಂಬಲವಿದೆ. ಆದರೆ ದುರಾದೃಷ್ಟವಶಾತ ನಿರ್ದಿಷ್ಟ ಸಮುದಾಯವನ್ನು ಗುರಿಯಾಗಿಸಲು ಸದರಿ ಪ್ರತಿಭಟನೆಯಲ್ಲಿ ಪ್ರಯತ್ನ ಮಾಡಿರುವುದು ಸರಿಯಲ್ಲ ಎಂದು ತಿಳಿಸಿದ್ದಾರೆ.
ಪ್ರತಿಭಟನೆಯಲ್ಲಿ ಕಾನೂನು ಸುವ್ಯವಸ್ಥೆಗೆ ಭಂಗ ತಂದಿರುವ, ನಿರ್ದಿಷ್ಟ ಸಮುದಾಯವನ್ನು ಗುರಿಯಾಗಿಸಲು ಪ್ರಯತ್ನ ಮಾಡಿರುವ ತಪ್ಪಿಸ್ಥರನ್ನು ಕೂಡಲೇ ಬಂದಿಸಿ ಕಾನೂನು ಕ್ರಮ ಜರುಗಿಸಲು ಹಾಗೂ ಪ್ರತಿಭಟನೆಯನ್ನು ಆಯೋಜಿಸಲು ಕಾರಣರಾದವರ ವಿರುದ್ಧವು ಕ್ರಮ ಜರುಗಿಸಬೇಕು ಮತ್ತು ಮುಂದಿನ ದಿನಗಳಲ್ಲಿ ಯಾವುದೇ ಪ್ರತಿಭಟನೆಯಲ್ಲಿ ಅಂತಹ ಕೃತ್ಯಗಳು ನಡೆಯದಂತೆ ಷರತ್ತಿನ ಮೇಲೆ ಪ್ರತಿಭಟನೆಗೆ ಅವಕಾಶ ನೀಡಬೇಕೆಂಬ ಮನವಿ ಪತ್ರ ಸಲ್ಲಿಸಿದರು.
ಈ ಸಂದರ್ಭದಲ್ಲಿ ಸಂಘದ ಕಾರ್ಯಾಧ್ಯಕ್ಷ ಆಸಾದ್ ಅಲಿ ಅನ್ಸಾರಿ, ಗೌರವಾಧ್ಯಕ್ಷ ಡಾ.ಎಂ.ಎಂ.ಬೈಗ್, ಉಪಾಧ್ಯಕ್ಷರಾದ ಡಾ.ಅಸ್ಲಾಂ ಸಾಹೀದ್, ಮಹ್ಮದ್ ಮೀನಾಹುಜುದ್ದಿನ್, ಪ್ರದಾನ ಕಾರ್ಯದರ್ಶಿ ಎಸ್.ಎಂ.ಜಾಗೀರದಾರ್, ಕಾರ್ಯದರ್ಶಿ ನವಾಬ್ ಖಾನ್, ಜಂಟಿ ಕಾರ್ಯದರ್ಶಿ ಅಬ್ದುಲ್ ಖದೀರ್ ಖಜಾಂಚಿ ಎಸ್.ಎಂ.ಖಾದರಿ, ಅಹ್ಮದ್ ಹೂಸೇನ್, ಖಾಜಾ ಗಸುರ್ದಾಜ್ ಸೇರಿದಂತೆ ಇತರರು ಇದ್ದರು.