ಹಿಂದುಗಳ ನಿರಂತರ ಹತ್ಯೆ ತಡೆಯುವಲ್ಲಿ ವಿಫಲರಾದ ಗೃಹಮಂತ್ರಿ ಡಾ. ಜಿ ಪರಮೇಶ್ವರ ರಾಜೀನಾಮೆಗೆ ಹಣಮಂತ ಇಟಗಿ ಆಗ್ರಹ
ನಾಗಾವಿ ಎಕ್ಸಪ್ರೆಸ್
ಯಾದಗಿರಿ: ರಾಜ್ಯದಲ್ಲಿ ಹಿಂದುಗಳ ನಿರಂತರ ಹತ್ಯೆ ತಡೆಯುವಲ್ಲಿ ವಿಫಲರಾದ ಗೃಹಮಂತ್ರಿ ಡಾ. ಜಿ ಪರಮೇಶ್ವರ ಕೂಡಲೇ ರಾಜೀನಾಮೆ ನೀಡಬೇಕು ಎಂದು ಬಿಜೆಪಿ ಜಿಲ್ಲಾ ವಕ್ತಾರ ಹಣಮಂತ ಇಟಗಿ ಆಗ್ರಹಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು,ಕರ್ನಾಟಕ ಸರ್ಕಾರದ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಕಾಂಗ್ರೆಸ್ ಸರ್ಕಾರದ ಆಡಳಿತ ಹಾಗೂ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದ್ದು, ಕರ್ನಾಟಕ ರಾಜ್ಯದಲ್ಲಿ ಹಿಂದೂ ಹತ್ಯೆ ಸರಣಿ ಮುಂದುವರೆದಿದ್ದೇ ಸಾಕ್ಷಿಯಾಗಿದೆ ಎಂದು ಆರೋಪಿಸಿದ್ದಾರೆ.
ಕರ್ನಾಟಕದಲ್ಲಿ ಹಿಂದೂಗಳು ಸುರಕ್ಷಿತವಾಗಿಲ್ಲ ಹಾಡು ಹಗಲಿನಲ್ಲಿ ರಸ್ತೆಯಲ್ಲಿ ಹತ್ಯೆಗಳು ನಡೆಯುತ್ತಿದೆ, ಗೃಹ ಮಂತ್ರಿ ಮಂತ್ರಿ ಡಾ. ಜಿ ಪರಮೇಶ್ವರ್, ಪೋಲಿಸ್ ಇಲಾಖೆ ಸಂಪೂರ್ಣ ಕೈಕಟ್ಟಿ ಕುಳಿತಿದೆ ಗೃಹಮಂತ್ರಿ ಡಾ. ಜಿ ಪರಮೇಶ್ವರ ತಕ್ಷಣವೇ ರಾಜೀನಾಮೆ ಕೊಡಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಕೆಪಿಎಸ್ಸಿ ಪರೀಕ್ಷೆ ಅಧ್ವಾನದಿಂದ ನಡೆಸುತ್ತಿದ್ದು ಇದನ್ನು ತಕ್ಷಣ ಮುಂದೂಡಬೇಕೆಂದು ಅವರು ಆಗ್ರಹಿಸಿದ್ದಾರೆ. ಕೆಪಿಎಸ್ಸಿ ಪರೀಕ್ಷೆ ಬರೆಯುತ್ತಿರುವ ಅಭ್ಯರ್ಥಿಗಳಿಗೆ ರಾತ್ರಿ ವೇಳೆ ಹಾಲ್ ಟಿಕೆಟ್ ನೀಡಿ ಬೆಳಗ್ಗೆ ಪರೀಕ್ಷೆ ನಿಗದಿಪಡಿಸಲಾಗಿದೆ. ಇದು ಅತ್ಯಂತ ಅವ್ಯವಸ್ಥಿತ ಸಂಗತಿಯಾಗಿದೆ ರಾತ್ರಿ ಹಾಲ್ ಟಿಕೆಟ್ ನೀಡಿ ಬೆಳಗ್ಗೆ ಪರೀಕ್ಷೆ ಬರೆ ಎಂದರೆ ಅವರು ಹೇಗೆ ಹೋಗಿ ಪರೀಕ್ಷೆ ಹಾಜರಾಗಬೇಕು, ರಾಜ್ಯ ಸರ್ಕಾರ ಅಭ್ಯರ್ಥಿಗಳ ಭವಿಷ್ಯದ ಜೊತೆಗೆ ಸಂಪೂರ್ಣ ಚೆಲ್ಲಾಟ ಆಡುತ್ತಿದೆ ಸರ್ಕಾರ ಇನ್ನೊಂದು ದಿನಾಂಕ ನಿಗದಿ ಮಾಡಿ ಪರೀಕ್ಷೆ ನಡೆಸಬೇಕೆಂದು ಆಗ್ರಹಿಸಿದ್ದಾರೆ.