ಗುಣತೀರ್ಥ ಯುವತಿ ಕೊಲೆ ಖಂಡಿಸಿ ಚಿತ್ತಾಪುರದಲ್ಲಿ ಕೋಲಿ ಸಮಾಜದಿಂದ ಪ್ರತಿಭಟನೆ
ಸಂತ್ರಸ್ತ ಕುಟುಂಬಕ್ಕೆ 50 ಲಕ್ಷ ಪರಿಹಾರ ನೀಡಲು ಒತ್ತಾಯ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ಬೀದರ ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ಗುಣತೀರ್ಥ ಗ್ರಾಮದಲ್ಲಿ ಕೋಲಿ ಸಮಾಜದ ಯುವತಿಯನ್ನು ಅಪಹರಿಸಿ, ಅತ್ಯಾಚಾರ ನಡೆಸಿ, ಅಮಾನುಷವಾಗಿ ಕೊಲೆ ಮಾಡಿರುವ ಘಟನೆ ಖಂಡಿಸಿ, ಆರೋಪಿಗಳಿಗೆ ಗಲ್ಲುಶಿಕ್ಷೆ ವಿಧಿಸಬೇಕು, ಸಂತ್ರಸ್ತ ಕುಟುಂಬಕ್ಕೆ ರೂಂ.50 ಲಕ್ಷ ಪರಿಹಾರ, ಸರ್ಕಾರಿ ನೌಕರಿ ನೀಡಬೇಕು ಹಾಗೂ ಒಂದು ಸುಸಜ್ಜಿತ ಮನೆ ಕಟ್ಟಿಸಿಕೋಡಬೇಕು ಎಂದು ಒತ್ತಾಯಿಸಿ ತಾಲೂಕು ಕೋಲಿ ಸಮಾಜದ ನೇತೃತ್ವದಲ್ಲಿ ಮುಖಂಡರು ಪ್ರತಿಭಟಿಸಿ ಮುಖ್ಯಮಂತ್ರಿಗಳಿಗೆ ಬರೆದ ಮನವಿ ಪತ್ರವನ್ನು ತಹಸೀಲ್ದಾರ್ ಅವರಿಗೆ ಸಲ್ಲಿಸಿದರು.
ಕೋಲಿ ಸಮಾಜದ ತಾಲೂಕು ಅಧ್ಯಕ್ಷ ರಾಮಲಿಂಗ ಬಾನರ್ ಮಾತನಾಡಿ, ಯುವತಿಯನ್ನು ಅಪಹರಿಸಿ ಅಮಾನುಷವಾಗಿ ಕೊಲೆ ಮಾಡಿರುವ ಘಟನೆಯನ್ನು ತಾಲೂಕು ಕೋಲಿ ಸಮಾಜ ಭಲವಾಗಿ ಖಂಡಿಸುತ್ತದೆ. ಯುವತಿಯ ಅಪಹರಣ, ಅತ್ಯಾಚಾರ, ಕೊಲೆ ಪ್ರಕರಣವು ಇಡೀ ನಾಗರೀಕ ಸಮಾಜವೇ ತಲೆತಗ್ಗಿಸುವಂತೆ ಮಾಡಿದ್ದಲ್ಲದೇ ಸರ್ಕಾರಕ್ಕೆ ದುಷ್ಕರ್ಮಿಗಳು ಸೆಡ್ಡು ಹೊಡೆದಿದ್ದಾರೆ. ಇಂತಹ ಪ್ರಕರಣಗಳಲ್ಲಿ ಆರೋಪಿಗಳು ಎಷ್ಟೇ ಪ್ರಭಾವಶಾಲಿಯಾಗಿರಲಿ, ಯಾವುದೇ ಧರ್ಮ, ಯಾವುದೇ ಜಾತಿ ಜನಾಂಗಕ್ಕೆ ಸೇರಿರಲಿ ಜಾತಿ ಧರ್ಮದ ಬೇಧ ಮಾಡದೇ ಮತರಾಜಕಾರಣದ ವಿಚಾರ ಬದಿಗಿಟ್ಟು ಆರೋಪಿಗಳಿಗೆ ಗಲ್ಲುಶಿಕ್ಷೆ ವಿಧಿಸಲು ಬೇಕಾದ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಕೋಲಿ ಸಮಾಜದ ಮುಖಂಡ ಮಲ್ಲಿಕಾರ್ಜುನ ಎಮ್ಮೆನೋರ್ ಮಾತನಾಡಿ, ಇತ್ತೀಚೆಗೆ ಕೋಲಿ ಸಮಾಜದ ಮೇಲೆ ದಬ್ಬಾಳಿಕೆ, ದೌರ್ಜನ್ಯ, ಜನರ ಕೋಲೆ, ಮಹಿಳೆಯರ ಅತ್ಯಾಚಾರ ಪ್ರಕರಣಗಳು ಹೆಚ್ಚಾಗುತ್ತಿವೆ, ಇದಕ್ಕೆ ಕಡಿವಾಣ ಹಾಕಲು ಸರ್ಕಾರ ಕಾನೂನು ಮೂಲಕ ಮುಂದಾಗಬೇಕು ಎಂದು ಒತ್ತಾಯಿಸಿದರು.
ಕೋಲಿ ಸಮಾಜದ ಮುಖಂಡರಾದ ಹಣಮಂತ ಸಂಕನೂರ, ಭೀಮರಾಯ ಹೋತಿನಮಡಿ, ಗುಂಡು ಐನಾಪುರ, ತಮ್ಮಣ್ಣ ಡಿಗ್ಗಿ, ದೇವಿಂದ್ರ ಅರಣಕಲ್, ನಿಂಗಣ್ಣ ಹೆಗಲೇರಿ, ಬಸವರಾಜ ಚಿನ್ನಮಳ್ಳಿ, ಶಿವಕುಮಾರ ಸುಣಗಾರ, ಮೌನೇಶ್ ಭಂಕಲಗಿ, ದಶರಥ ದೊಡ್ಡಮನಿ, ಮಲ್ಲಿಕಾರ್ಜುನ ಅಲ್ಲೂರಕರ್, ಲಕ್ಷ್ಮೀಕಾಂತ ಸಾಲಿ, ಶರಣು ಸಿದ್ರಾಮಗೋಳ, ಕರಣಕುಮಾರ್ ಅಲ್ಲೂರು, ಮೈಪಾಲ್ ಹೊಸ್ಸುರ್, ಪ್ರಭು ಹಲಕರ್ಟಿ, ಸಂಗು ಯರಗಲ್ ಸೇರಿದಂತೆ ಅನೇಕರು ಇದ್ದರು.