ದಿ. 17 ರಂದು ಹಡಪದ ಅಪ್ಪಣ್ಣ ಸಮಾಜದ ನಾನಾ ಬೇಡಿಕೆ ಈಡೇರಿಕೆಗಾಗಿ ಬೆಳಗಾವಿ ಚಲೋ, ಹೆಚ್ಚಿನ ಸಂಖ್ಯೆಯಲ್ಲಿ ಸಮುದಾಯದವರು ಭಾಗವಹಿಸಲು: ಡಾ.ಮಲ್ಲಿಕಾರ್ಜುನ ಹಡಪದ ಕರೆ
ನಾಗಾವಿ ಎಕ್ಸಪ್ರೆಸ್
ಕಲಬುರ್ಗಿ: ಇದೇ ಡಿಸೆಂಬರ್ 17 ರಂದು ಇಡೀ ರಾಜ್ಯಾದ್ಯಂತ ಹಡಪದ ಸಮಾಜದ ನಡಿಗೆ ಬೆಳಗಾವಿಯ ಚಳಿಗಾಲದ ಅಧಿವೇಶನದ ಕಡೆಗೆ ಬೆಳಗಾವಿ ಸುವರ್ಣ ಗಾಡ್೯ನ ನಲ್ಲಿ ಇರುವ ಟೆಂಟ್ ನಂಬರ 9 ರಲ್ಲಿ ಅಖಿಲ ಕರ್ನಾಟಕ ಹಡಪದ ಅಪ್ಪಣ್ಣ (ಕ್ಷೌರಿಕ ) ಸಮಾಜದ ವತಿಯಿಂದ ವಿವಿಧ ಬೇಡಿಕೆಯನ್ನು ಈಡೇರಿಸುವಂತೆ ರಾಜ್ಯ ಸರ್ಕಾರ ಕ್ಕೆ ಮನವಿ ಪತ್ರ ಸಲ್ಲಿಸುವ ಮೂಲಕ ಬೃಹತ್ ಪ್ರಮಾಣದಲ್ಲಿ ಹೋರಾಟ ಹಮ್ಮಿಕೊಳ್ಳಲಾಗಿದೆ ಎಂದು ಕಲಬುರಗಿ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಡಾ. ಮಲ್ಲಿಕಾರ್ಜುನ ಬಿ.ಹಡಪದ ಸುಗೂರ ತಿಳಿಸಿದ್ದಾರೆ.
ಹಡಪದ ಅಪ್ಪಣ್ಣ (ಕ್ಷೌರಿಕ) ಸಮುದಾಯದ ನಾನಾ ಬೇಡಿಕೆಗಳು ಮತ್ತು ಹಡಪದ ಅಪ್ಪಣ್ಣ ಸಮಾಜದ ಪ್ರತ್ಯೇಕ ಅಭಿವೃದ್ಧಿ ನಿಗಮ ಮಂಡಳಿ ಪೂರ್ಣ ಪ್ರಮಾಣದಲ್ಲಿ ಜಾರಿಗೆ ತಂದು ಈ ನಿಗಮಕ್ಕೆ 50 ಕೋಟಿ ಅನುದಾನ ಮೀಸಲಿಡಬೇಕು ಹಾಗೂ ಸಮುದಾಯದ ಬಂಧುಗಳಿಗೆ ಜಾಗೃತಿ ಮೂಡಿಸಲು ಅನೇಕ ಬಾರಿ ನಮ್ಮ ಸಮಾಜದ ವತಿಯಿಂದ ವಿಭಿನ್ನ ಕಾರ್ಯಕ್ರಮ ಸಮಾವೇಶ ನಡೆದಿವೆ. ಮತ್ತು ಮುಂದಿನ ದಿನಗಳಲ್ಲಿ ಸಹ ಸಮಾವೇಶಗಳು ನಡೆಯಲಿದೆ, ಸಮಾಜದ ಹೆಸರಲ್ಲಿ ರಾಜಕೀಯ ಮಾಡುವ ಅನೇಕ ರಾಜಕೀಯ ಪಕ್ಷಗಳು ನಮ್ಮ ಹಡಪದ ಅಪ್ಪಣ್ಣ ಸಮುದಾಯಕ್ಕೆ ನಿರ್ಲಕ್ಷ್ಯ ಮಾಡಿದ್ದಾರೆ, ಕೇವಲ ವೋಟ್ ಬ್ಯಾಂಕ್ಗಳಾಗಿ ಈ ಸಮುದಾಯಗಳನ್ನು ಬಳಸಿಕೊಳ್ಳುತ್ತಿದ್ದು ಸುಳ್ಳು ಭರವಸೆಗಳು ನೀಡುವ ಪಕ್ಷಗಳಿಗೆ ಮುಂದಿನ ಲೋಕಸಭಾ ವಿಧಾನಸಭೆ ಮತ್ತು ಜಿಲ್ಲಾ ಪಂಚಾಯತ ತಾಲೂಕು ಪಂಚಾಯತ ಚುನಾವಣೆ ಮೇಲೆ ಕಣ್ಣು ಕುಕ್ಕುತ್ತಿದೆ. ಈಗಾಗಲೇ ವಿಧಾನ ಸಭಾ ಮತ್ತು ಜಿಲ್ಲಾ ಮತ್ತು ತಾಲೂಕು ಪಂಚಾಯತ ಚುನಾವಣೆಯಲ್ಲಿ ಜನರು ತಕ್ಕ ಬುದ್ದಿ ಕಲಿಸಲಿದ್ದಾರೆ ಎಂದರು.
ರಾಜ್ಯದಲ್ಲಿ ಹಡಪದ ಅಪ್ಪಣ್ಣ ಸಮುದಾಯದ ಅಭಿವೃದ್ಧಿಗಾಗಿ ಶಿಕ್ಷಣ ಮತ್ತು ಉದ್ಯೋಗದ ಮೀಸಲಾತಿಗಾಗಿ ಸ್ವಾಮೀಜಿಗಳ ಹಾಗೂ ರಾಜ್ಯ ನಾಯಕರ ಮತ್ತು ಅನೇಕ ಜಿಲ್ಲೆಯಲ್ಲಿ ಹೋರಾಟಗಳು ಮತ್ತು ನಮ್ಮ ಕಲಬುರಗಿ ಜಿಲ್ಲೆಯ ಅಧ್ಯಕ್ಷರ ನೇತೃತ್ವದಲ್ಲಿ ಅನೇಕ ವಿಭಿನ್ನವಾಗಿ ಹೋರಾಟಗಳು, ಪ್ರತಿಭಟನೆಗಳನ್ನು ನಡೆಸಿದ ಭಾಗವಾಗಿ ಸರ್ಕಾರ ಮೀಸಲಾತಿ (ನಮ್ಮ ಸಮಾಜಕ್ಕೆ ನಿಗಮ ಮಂಡಳಿ ಬಿಜೆಪಿ ಸರ್ಕಾರ ಕೊಟ್ಟಿದ್ದಾರೆ) ಈ ಹಡಪದ ಅಪ್ಪಣ್ಣ ಸಮಾಜದ ನಿಗಮ ಮಂಡಳಿಯನ್ನು ಈಗಿನ ಕಾಂಗ್ರೆಸ್ ಸರ್ಕಾರ ಪೂರ್ಣ ಪ್ರಮಾಣದಲ್ಲಿ ಜಾರಿಗೆ ತಂದು ಈ ನಿಗಮಕ್ಕೆ 50 ಕೋಟಿ ಅನುದಾನ ಮೀಸಲಿಡಬೇಕು ಈ ನಿಟ್ಟಿನಲ್ಲಿ ಸರಕಾರಗಳು ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ಜಾರಿ ಮಾಡಬೇಕು ಎಂದು ಒತ್ತಾಯಿಸಿದರು.
ನಮ್ಮನ್ನು ದಲಿತರಿಗಿಂತ ತೀರಾ ಹೀನಾಯವಾಗಿ ಬದುಕುವ ಪರಿಸ್ಥಿತಿ ಶೋಷಿತರ ತರಹ ಈ ಬಡ ಸಮಾಜದ ಜನತೆಗೆ ಮತ್ತು ಮಹಿಳೆಯರಿಗೆ ಶೋಷಣೆಯ ಮೇಲೆ ಶೋಷಣೆ, ನಮ್ಮ ಹಡಪದ ಅಪ್ಪಣ್ಣ (ಕ್ಷೌರಿಕ) ಸಮಾಜದ ಜನತೆಗೆ ಜಾತಿ ನಿಂದನೆ ಮಾಡಿ ಹಲ್ಲೆ ಹಿಂಸೆ ದೌರ್ಜನ್ಯ ಪ್ರಕರಣ ಮಾಡಿದ್ದಾರೆ. ಅದನ್ನು ಮನಗೊಂಡು ಈ ಅನೇಕ ಹೋರಾಟಗಳು ಮತ್ತು ಮುಂದಿನ ದಿನಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಸಮಾವೇಶವು ಮಾಡುವ ಲೆಕ್ಕಾಚಾರ ಇದೆ ಎಂದು ತಿಳಿಸಿದ್ದಾರೆ.
12ನೇ ಶತಮಾನದ ವಿಶ್ವಗುರು ಬಸವಣ್ಣನವರ ಆಪ್ತಕಾರ್ಯದರ್ಶಿಯಾದ ನಿಜಸುಖಿ ಹಡಪದ ಅಪ್ಪಣ್ಣ ಸಮಾಜಕ್ಕೆ ನ್ಯಾಯ ಸಿಗಲೇಬೇಕು, ಅನೇಕ ಸಮಾಜಗಳ ನಡುವೆ ಒಡನಾಟ ಹೊಂದಿದ್ದ ಸಮಾಜ ಹಡಪದ ಅಪ್ಪಣ್ಣ ಸಮಾಜ ಈ ಸಮಾಜವು ಆರ್ಥಿಕವಾಗಿ, ರಾಜಕೀಯವಾಗಿ, ಶೈಕ್ಷಣಿಕವಾಗಿ, ಸಾಮಾಜಿಕವಾಗಿ ತೀರಾ ಹಿಂದುಳಿದ ಸಮಾಜ ಈ ಕ್ಷೌರಿಕ ವೃತ್ತಿಯ ಹಡಪದ ಅಪ್ಪಣ್ಣ ಸಮಾಜವನ್ನು ಅಭಿವೃದ್ಧಿ ಪಡಿಸುವ ಮೂಲಕ ಈ ಸಮಾಜದ ಪರವಾಗಿ ಕೇಂದ್ರ ಸರ್ಕಾರದ ಅನೇಕ ಸಂಸದರು ಈ ಸಮಾಜದ ಪರವಾಗಿ ಚಳಿಗಾಲದ ಅಧಿವೇಶನದಲ್ಲಿ ಧ್ವನಿಯಾಗಿ ಹಡಪದ ಅಪ್ಪಣ್ಣ (ಕ್ಷೌರಿಕ) ಸಮಾಜವನ್ನು ಎಸ್ಸಿಗ ಅಥವಾ ಎಸ್ಟಿಗೆ ಸೇರ್ಪಡೆ ಮಾಡುವ ವಿಷಯ ಕುರಿತು ಚರ್ಚಿಸಿ ಎಂದು ಮನವಿ ಮಾಡಿಕೊಂಡಿದ್ದಾರೆ.
ನಮ್ಮ ಹಡಪದ ಅಪ್ಪಣ್ಣ ಸಮಾಜದ ಬಹು ದಿನಗಳ ಬೇಡಿಕೆಯನ್ನು ಮತ್ತು ಈ ಸಮಾಜಕ್ಕೆ ಮೀಸಲಾತಿ ಯ ಬಗ್ಗೆ ಮತ್ತು ಈ ಹಡಪದ ಅಪ್ಪಣ್ಣ ಸಮಾಜದ ಪ್ರತ್ಯೇಕವಾಗಿ ನಿಗಮ ಮಂಡಳಿ ಪೂರ್ಣ ಪ್ರಮಾಣದಲ್ಲಿ ಜಾರಿಗೆ ತರುವ ಮೂಲಕ ವಿವಿಧ ಬೇಡಿಕೆಯನ್ನು ಮತ್ತು ಅನೇಕ ವಿಷಯಗಳ ಬಗ್ಗೆ ಚರ್ಚೆ ಕೂಡ ಚಳಿಗಾಲದ ಅಧಿವೇಶನದಲ್ಲಿ ಮಾಡಲಿ ಮತ್ತು ಇದೇ ಡಿಸೆಂಬರ್ 17 ರಂದು ಬೆಳಗಾವಿಯ ಸುವರ್ಣ ಸೌಧದ ಹಿಂದುಗಡೆ ಗಾಡ್೯ನನಲ್ಲಿ ಇರುವ ಟೆಂಟ್-9 ರಲ್ಲಿ ಸಮಾಜದ ಹತ್ತು ಹಲವು ಬೇಡಿಕೆಯನ್ನು ಪೂರೈಸಲು ಸರ್ಕಾರಕ್ಕೆ ಮನವರಿಕೆ ಮಾಡುವ ಮೂಲಕ ಹಡಪದ ಅಪ್ಪಣ್ಣ ಸಮಾಜದ ವತಿಯಿಂದ (ಹತ್ತು) ಹಲವು ನಾನಾ ಬೇಡಿಕೆಯನ್ನು ಈಡೇರಿಸಲು ಬೃಹತ್ ಹೋರಾಟ ಹಮ್ಮಿಕೊಂಡಿದೆ ಸಹಸ್ರಾರು ಸಂಖ್ಯೆಯಲ್ಲಿ ಸಮಾಜದ ಬಂಧುಗಳು ಈ ಹೋರಾಟದಲ್ಲಿ ಭಾಗವಹಿಸಿ ಎಂದು ಕೋರಿದ್ದಾರೆ.
ಕಾಂಗ್ರೆಸ್ ಸರ್ಕಾರದ ಕ್ಯಾಬಿನೆಟ್ ದರ್ಜೆಯ ಸಚಿವರಿಗೂ. ಶಾಸಕರಿಗೂ, ವಿಧಾನ ಪರಿಷತ್ ಸದಸ್ಯರಿಗೂ ಮತ್ತು ವಿರೋಧ ಪಕ್ಷದ ನಾಯಕರಿಗೂ ಈ ಸಣ್ಣ ಸಣ್ಣ ಸಮುದಾಯ ಮೂಲೆ ಗುಂಪು ಆಗಿದ್ದು. ಈ ಸಮಾಜದ ಬಗ್ಗೆ ಚಳಿಗಾಲದ ಅಧಿವೇಶನದಲ್ಲಿ ಈ ಸಣ್ಣ ಸಮುದಾಯವಾದ ಹಡಪದ ಅಪ್ಪಣ್ಣ ಸಮಾಜಕ್ಕೆ ನ್ಯಾಯ ದೂರಕಿಸುವ ಕೊಡುವ ಕೆಲಸ ಮಾಡಬೇಕು ಎಂದು ಕಲಬುರಗಿ ಜಿಲ್ಲೆಯ ಹಡಪದ ಅಪ್ಪಣ್ಣ (ಕ್ಷೌರಿಕ) ಸಮಾಜದ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಡಾ.ಮಲ್ಲಿಕಾರ್ಜುನ ಬಿ.ಹಡಪದ ಸುಗೂರ ಎನ್ ಅವರು ರಾಜ್ಯ ಸರ್ಕಾರಕ್ಕೆ ಮತ್ತು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.