Oplus_0

ಹಲಕಟ್ಟಿ ಗ್ರಾಮದಲ್ಲಿ ಶಿವಗಂಗಮ್ಮ ಇಸಬಾ ಅವರ 105ನೇ ಜನ್ಮದಿನಾಚರಣೆ, ಅವಿಭಕ್ತ ಕುಟುಂಬಗಳಿಗೆ ಹಿರಿಯರೇ ಆಸ್ತಿಯಿದ್ದಂತೆ: ಹಲಕಟ್ಟಿ ಶ್ರೀ 

ನಾಗಾವಿ ಎಕ್ಸಪ್ರೆಸ್

ಚಿತ್ತಾಪುರ: ಅವಿಭಕ್ತ ಕುಟುಂಬಗಳಿಗೆ ಹಿರಿಯರೇ ಆಸ್ತಿಯಿದ್ದಂತೆ ಎಂದು ಹಲಕಟ್ಟಿ ಶ್ರೀ  ಮುನೀಂದ್ರ ಶಿವಾಚಾರ್ಯ ಹೇಳಿದರು.

ತಾಲೂಕಿನ ಹಲಕಟ್ಟಿ ಗ್ರಾಮದ ಕಟ್ಟಿಮನಿ ಹಿರೇಮಠ ಆವರಣದಲ್ಲಿ ಇಸಬಾ ಪರಿವಾರದ ಹಿರಿಯ ಜೀವಿ ಶಿವಗಂಗಮ್ಮ ಅವರ 105ನೇ ಹುಟ್ಟು ಹಬ್ಬದ ಸಂಭ್ರಮಾಚರಣೆ ಸಮಾರಂಭದ ಸಾನಿಧ್ಯ ವಹಿಸಿ ಮಾತನಾಡಿದ ಅವರು, ಹಿರಿಯರು ಇದ್ದರೆ ತುಂಬಿದ ಮನೆಯಿದ್ದಂತೆ ಹಿರಿಯರಿಂದ ಉತ್ತಮ ಸಂಸ್ಕಾರ, ಆಚಾರ ವಿಚಾರ ಸಿಗಲಿದೆ ಆದರೆ ಈಗಿನ ವಿಭಕ್ತ ಕುಟುಂಬಗಳಲ್ಲಿ ಅಂತಹ ಸಂಸ್ಕಾರ ಮರೀಚಿಕೆಯಾಗಿದೆ ಮಕ್ಕಳಿಗೆ ಉತ್ತಮ ಸಂಸ್ಕಾರ ಸಿಗುತ್ತಿಲ್ಲ ಎಂದರು.

ಹಲಕಟ್ಟಿ ಗ್ರಾಮದಲ್ಲಿ ಶಿವಗಂಗಮ್ಮ ಇಸಬಾ ತಾಯಿ ಶತಾಯುಷಿ ಮೀರಿದ ಏಕೈಕ ಹಿರಿಯ ಜೀವಿಯಾಗಿದ್ದಾರೆ ಇದು ಇಡೀ ಗ್ರಾಮಕ್ಕೆ ಹೆಮ್ಮೆ ತರುವಂತಹದ್ದು ಎಂದು ಬಣ್ಣಿಸಿದರು.

ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಸದಸ್ಯ ಗುರುನಾಥ್ ಮಣಿಗೇರಿ ಹಾಗೂ ಶಿಕ್ಷಕ ಶ್ರೀನಾಥ್ ಹಿರುಗೊಂಡ ಮಾತನಾಡಿದರು. ಈ ಸಂದರ್ಭದಲ್ಲಿ ಪ್ರಮುಖರಾದ ರಾಜುಗೌಡ ಪೊಲೀಸ್ ಪಾಟೀಲ್, ನಾಗಣ್ಣ ಪೂಜಾರಿ ಮುಗುಟಿ, ಕರಣಪ್ಪ ಇಸಬಾ, ಸಾಬಣ್ಣ ಜೈನಾಪುರ, ಸಿದ್ದು ಪೂಜಾರಿ, ಅಶೋಕ್ ಚತ್ರಿಕಿ, ಶಿವಶರಣ ಪೂಜಾರಿ, ಶರಣು ಹಿಟ್ಟಿನ್, ಮಲ್ಲು ಪೂಜಾರಿ, ರವಿ ಸೌಕಾರ, ಮೈಲಾರಿ ಸುಣಗಾರ, ಮಲ್ಲು ಕಟ್ಟಿಮನಿ, ಪ್ರಕಾಶ್ ಚಂದನಕೇರಿ, ದತ್ತಾತ್ರೇಯ ಬುಕ್ಕಾ, ತಿಪ್ಪಣ್ಣ ಇಸಬಾ, ನಾಗಪ್ಪ ಇಸಬಾ, ಈರಣ್ಣ ಇಸಬಾ, ಲಕ್ಷ್ಮೀ ಇಸಬಾ, ದೇವು ಸುಣುಗಾರ್, ಶರಣಪ್ಪ ಬೊಮ್ಮನಳ್ಳಿ ಸೇರಿದಂತೆ ಇಸಬಾ ಪರಿವಾರದ ಎಲ್ಲಾ ಸದಸ್ಯರ ಭಾಗವಹಿಸಿದ್ದರು. ಶಿವಕುಮಾರ್ ಆಂದೋಲಾ ನಿರೂಪಣೆ ಮಾಡಿದರು.

Spread the love

Leave a Reply

Your email address will not be published. Required fields are marked *

error: Content is protected !!