ಹಲಕಟ್ಟಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ 9, ಬಿಜೆಪಿ ಬೆಂಬಲಿತ 3 ಅಭ್ಯರ್ಥಿಗಳು ಆಯ್ಕೆ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ತಾಲೂಕಿನ ಹಲಕಟ್ಟಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ 12 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಬೆಂಬಲಿತ 9 ಅಭ್ಯರ್ಥಿಗಳು ಹಾಗೂ ಬಿಜೆಪಿ ಬೆಂಬಲಿತ 3 ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ
ಕಾಂಗ್ರೆಸ್ ಬೆಂಬಲಿತ ಈರಣ್ಣ ಬಸಣ್ಣ ಇಸಬಾ, ಶರಣಪ್ಪ ಸಂಗನಬಸಪ್ಪ ಬೊಮ್ಮನಳ್ಳಿ, ಶರಣಪ್ಪ ಸಿದ್ದಣ್ಣ ಮಾಡಿಗಿ, ಸೈಯದ್ ಇಮ್ತಿಯಾಜ್ ಪಟೇಲ್, ವೀರೇಶ್ ಶಿವಶರಣಪ್ಪ ಕೋಟಗಿ, ಮುನಿಯಪ್ಪ ಮಲ್ಲಣ್ಣ ಇಸಬಾ, ಶ್ರೀಧರ್ ಬಳವಡಗಿ, ಮೋತಿಲಾಲ್ ಗಂಗು, ಸವಿತಾ ಬಾಬು ಗುರೆಗೊಳ್ ಹಾಗೂ ಬಿಜೆಪಿ ಬೆಂಬಲಿತ ಭಾಗಣ್ಣ ಬುಕ್ಕಾ, ಮಲ್ಲಿಕಾರ್ಜುನ ಬಳವಡಗಿ, ಲಲಿತಾ ಸಿಂಗಶೆಟ್ಟಿ ಆಯ್ಕೆಯಾಗಿದ್ದಾರೆ.
ಈ ಸಂದರ್ಭದಲ್ಲಿ ಹಲಕಟ್ಟಿ ಶ್ರೀ ಮುನೀಂದ್ರ ಶಿವಾಚಾರ್ಯರು, ಮುಖಂಡರಾದ ಜಗದೀಶ್ ಸಿಂಧೆ, ಇಬ್ರಾಹಿಂ ಪಟೇಲ್, ರಾಜುಗೌಡ, ಕಾಂತು ಸಾಹುಕಾರ, ಚಂದ್ರಕಾಂತ ಮೇಲಿನಮನಿ, ಶರಣಪ್ಪ ಹಿಟ್ಟಿನ್, ಸಿದ್ದು ಮುಗುಟಿ, ರಾಘವೇಂದ್ರ ಅಲ್ಲಿಪೂರಕರ್, ಶಿವುಕುಮಾರ ಆಂದೋಲಾ, ಕರಣಪ್ಪ ಇಸಬಾ, ಈರಣ್ಣ ಸಣ್ಣಬಸಣ್ಣ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ತಾಪಂ ಮಾಜಿ ಸದಸ್ಯ ಜಗದೀಶ್ ಸಿಂಧೆ ಮಾತನಾಡಿ, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಲು ಕ್ಷೇತ್ರದ ಶಾಸಕರು ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ರವರ ಜನಪ್ರಿಯ ರೈತಪರ ಅಭಿವೃದ್ಧಿ ಕಾರ್ಯಗಳನ್ನು ಮೆಚ್ಚಿ ರೈತರು ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳಿಗೆ ಉತ್ತಮ ಬೆಂಬಲ ನೀಡಿ ಭರ್ಜರಿ ಗೆಲುವು ಸಾಧಿಸಲು ಸಹಾಯವಾಗಿದೆ , ಅಭ್ಯರ್ಥಿಗಳ ಗೆಲುವಿಗೆ ಕಾಂಗ್ರೆಸ್ ಪಕ್ಷದ ಮುಖಂಡರು, ವಿಶೇಷವಾಗಿ ಎಲ್ಲಾ ಗ್ರಾಮದ ರೈತರು, ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು, ಗ್ರಾಮ ಪಂಚಾಯತ್ ಸದಸ್ಯರ ಸಹಕಾರದಿಂದ ಈ ಭರ್ಜರಿ ಗೆಲುವಿಗೆ ಕಾರಣವಾಗಿದೆ ಎಂದು ಹೇಳಿದರು. ನಂತರ ಕಾಂಗ್ರೆಸ್ ಕಾರ್ಯಕರ್ತರು ವಿಜಯೋತ್ಸವ ಆಚರಿಸಿದರು.