ಹಲಚೇರಾ ಗ್ರಾಮದ ಶ್ರೀ ಪಂಚಲಿಂಗೇಶ್ವರರ ತೃತೀಯ ಜಾತ್ರಾ ಮಹೋತ್ಸವ, ಸತ್ಯ ಸಂಕಲ್ಪದಿಂದ ಸತ್ಕಾರದ ಅನಾವರಣ: ಹಾರಕೂಡ ಶ್ರೀ
ನಾಗಾವಿ ಎಕ್ಸಪ್ರೆಸ್
ಕಾಳಗಿ: ಭಕ್ತಿ, ಶ್ರದ್ಧೆ, ಸತ್ಯ, ಶುದ್ಧ ಮನಸ್ಸಿನಿಂದ ಮಾಡಿದ ಸಂಕಲ್ಪದಿಂದ ಅದ್ಭುತವಾದ ಸತ್ಕಾರ್ಯಗಳು ಅನಾವರಣಗೊಳ್ಳುತ್ತವೆ ಎಂದು ಹಾರಕೂಡದ ಡಾ. ಚನ್ನವೀರ ಶಿವಾಚಾರ್ಯರು ನುಡಿದರು.
ತಾಲೂಕಿನ ಹಲಚೇರಾ ಗ್ರಾಮದ ಶ್ರೀ ಪಂಚಲಿಂಗೇಶ್ವರರ ತೃತೀಯ ಜಾತ್ರಾ ಮಹೋತ್ಸವ ಅಂಗವಾಗಿ ಆಯೋಜಿಸಿದ ಧರ್ಮಸಭೆಯ ಪಾವನ ಸಾನಿಧ್ಯ ವಹಿಸಿ ಮಾತನಾಡಿದ ಶ್ರೀಗಳು, ಮನುಷ್ಯ ತನ್ನ ಬದುಕಿನಲ್ಲಿ ಸಂಕಲ್ಪಧಾರಿಯಾಗಿ, ಪ್ರಾಮಾಣಿಕ ಪ್ರಯತ್ನ ಶೀಲನಾದರೆ, ಸಮಾಜ ಮತ್ತು ದೇವರು ಒಪ್ಪುವ ಅಭೂತಪೂರ್ವ ಕಾರ್ಯಗಳು ಫಲಿಸುತ್ತವೆ ಎಂದು ಹೇಳಿದರು.
ಸುಜ್ಞಾನ ಮತ್ತು ವಿವೇಕದಿಂದ ಮಾಡುವ ಕಾಯಕವೇ ದೇವ ಪೂಜೆಯಾಗಿ ಮಾರ್ಪಡುತ್ತದೆ. ನೇಗಿಲ ಯೋಗಿ ಮಾಡುವ ಪ್ರತಿ ಕಾರ್ಯವೂ ದೇವನೊಲುಮೆಗೆ ಅರ್ಹವಾಗಿದ್ದು, ಈ ಜಗತ್ತಿನಲ್ಲಿ ಕೃಷಿ ಕಾಯಕ ಅತ್ಯಂತ ಶ್ರೇಷ್ಠವಾಗಿದೆ. ಮುಂಬರುವ ಕೆಲವೇ ದಿನಗಳಲ್ಲಿ ರೈತನ ಮಹತ್ವ, ಅವನ ಬೆವರ ಹನಿಯ ಮೌಲ್ಯಕ್ಕೆ ಸಮವಾದದ್ದು ಯಾವುದು ಇಲ್ಲ ಎಂಬ ಸತ್ಯಾಂಶ ಗೊತ್ತಾಗಲಿದೆ ಎಂದು ನುಡಿದರು.
ಶ್ರೀ ಸಿದ್ದಲಿಂಗ ಶಿವಾಚಾರ್ಯರು ಹಲಚೇರಾ, ಶಿವಯ್ಯ ಸ್ವಾಮಿ, ಮಲ್ಲಿಕಾರ್ಜುನ ಪಾಟೀಲ, ಸಂಗಣ್ಣ ಕುಂಬಾರ ಮುಂತಾದವರು ಭಾಗವಹಿಸಿದ್ದರು.
ಕಾರ್ತಿಕ ಸ್ವಾಮಿ ಯಲದಗುಂಡಿ ಪ್ರಾರ್ಥನಾ ಗೀತೆ ಹಾಡಿದರು, ಅನಿಲಕುಮಾರ ಜಮಾದಾರ ಸ್ವಾಗತಿಸಿದರು, ಗುರುನಾಥ ವಿಂಬಡಶೆಟ್ಟಿ ನಿರೂಪಣೆ ಮಾಡಿದರು.