ಹಣಮಂತ ಇಟಗಿ ಯಾದಗಿರಿ ಜಿಲ್ಲಾ ಬಿಜೆಪಿ ವಕ್ತಾರ, ಅಭಿಮಾನಿಗಳಿಂದ ಸನ್ಮಾನ
ನಾಗಾವಿ ಎಕ್ಸಪ್ರೆಸ್
ಯಾದಗಿರಿ: ಭಾರತೀಯ ಜನತಾ ಪಕ್ಷದ ನೂತನ ಜಿಲ್ಲಾ ವಕ್ತಾರ ರಾಗಿ ನೇಮಕವಾದ ಹಣಮಂತ ಇಟಗಿ ಅವರನ್ನು ಅಭಿಮಾನಿಗಳು ಸನ್ಮಾನಿಸಿ ಗೌರವಿಸಿದರು.
ನಗರದ ಎಸ್.ಡಿ.ಎನ್ ಹೋಟೆಲ್ ಸಭಾಂಗಣದಲ್ಲಿ ಅಭಿಮಾನಿಗಳಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ನನ್ನ ಮೇಲೆ ವಿಶ್ವಾಸವಿಟ್ಟು ಪಕ್ಷದ ಜವಾಬ್ದಾರಿ ನೀಡಿದ ಪಕ್ಷದ ಹೈಕಮಾಂಡ್ ಗೆ, ಜಿಲ್ಲಾ ಅಧ್ಯಕ್ಷರಿಗೆ ಮತ್ತು ನಾಯಕರಿಗೆ ಯಾವುದೇ ಕಪ್ಪು ಚುಕ್ಕೆ ಬಾರದಂತೆ ನಡೆದುಕೊಂಡು ಪಕ್ಷದ ಸಂಘಟನೆಗಾಗಿ ಹಗಲಿರುಳು ಶ್ರಮಿಸುತ್ತೇನೆ ಎಂದು ಹೇಳಿದರು.
ಪಕ್ಷ ನೀಡಿದ ಜವಾಬ್ದಾರಿಯನ್ನು ಸಮರ್ಥವಾಗಿ ಎದುರಿಸಿ ಪಕ್ಷವನ್ನು ಜಿಲ್ಲೆಯಲ್ಲಿ ಇನ್ನಷ್ಟು ಬಲಪಡಿಸುತ್ತೇನೆ, ಹಿರಿಯ ನಾಯಕರು ನೀಡುವ ಮಾರ್ಗದರ್ಶನದಲ್ಲಿ ಮುನ್ನೇಡೆಯುತ್ತೇನೆ ಎಂದು ನೂತನ ಬಿಜೆಪಿ ವಕ್ತಾರ ಹಣಮಂತ್ ಇಟಗಿ ಹೇಳಿದರು.
ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ಯಲ್ಲಪ್ಪ ಮಾಳಿಕೇರಿ, ಭೀಮರಾಯ ಹಬ್ಬಳ್ಳಿ, ಶಿವರಾಜ್ ದಾಸನಕೇರಿ, ಚಂದ್ರಶೇಖರ್ ಕಡೆಸೂರ್, ಮಂಜುನಾಥ್ ದಾಸನಕೆರಿ, ಸ್ವಾಮಿದೇವ ದಾಸನಕೆರಿ, ಮಲ್ಲಿಕಾರ್ಜುನ್ ಜಲ್ಲಪ್ಪನೋರ, ರಾಜಶೇಖರ್ ಎದುರುಮನಿ, ಶಿವು ಮುದ್ನಾಳ, ಅನಿಲ್ ಕರಾಟೆ, ಮಲ್ಲಿಕಾರ್ಜುನ್ ದೊಡ್ಮನಿ ಬಬಲಾದ್, ಶರಣಗೌಡ ಅಲಿಪುರ್, ಶರಣಗೌಡ ಕಾಳ ಬೆಳಗುಂದಿ, ಶ್ರೀನಿವಾಸ್ ಇಟೆಕರ್, ಸೈದಪ್ಪ ಕೋನಳ್ಳಿ, ಮರಲಿಂಗ್ ಜಿನಕೇರ್, ಸಲ್ಮಾನ್ ಯಡಳ್ಳಿ, ಸಲೀಂ, ಪಿಂಟು ದಾಸನ್ ಕೇರಿ ಸೇರಿದಂತೆ ಅಭಿಮಾನಿಗಳು ಮತ್ತು ಕಾರ್ಯಕರ್ತರು ಇದ್ದರು.