ಹೆಬ್ಬಾಳ ಮೋಟಾರ ಕಳ್ಳತನ ಪ್ರಕರಣಗಳಲ್ಲಿ ಕಳ್ಳರ ಬಂಧನ, 05 ನಿರೇತ್ತುವ ಮೋಟಾರಗಳು ಜಪ್ತಿ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ಮಾಡಬೂಳ ಪೊಲೀಸ್ ಠಾಣೆ ವ್ಯಾಪ್ತಿಯ ಹೆಬ್ಬಾಳ ಗ್ರಾಮದ ಸಿಮಾಂತರ ಹೊಲದ ಪಕ್ಕದಲ್ಲಿರುವ ಕೆನ್ನಾಲ್ ಗೆ ಅಳವಡಿಸಿರುವ 05 ಹೆಚ್.ಪಿ ನಿರೇತ್ತುವ ಪಂಪಸೆಟ್ ಮೋಟಾರ ಕಳುವಾದ ಬಗ್ಗೆ ಜನವರಿ 16 ರಂದು ಮಾಡಬೂಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಮೂರೇ ದಿನದಲ್ಲಿ (ಜನವರಿ 19 ರಂದು) ಪ್ರಕರಣ ಭೇದಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಅಪರ ಪೊಲೀಸ್ ಅಧೀಕ್ಷಕ ಮಹೇಶ ಮೇಘಣ್ಣವರ್, ಶಹಾಬಾದ ಡಿವೈಎಸ್ಪಿ ಶಂಕರಗೌಡ ಪಾಟೀಲ ರವರ ಮಾರ್ಗದರ್ಶನದಲ್ಲಿ ಸಿಪಿಐ ಜಗದೇವಪ್ಪ ಪಾಳಾ, ಪಿಎಸ್ಐ (ತನಿಖೆ) ಶೀಲಾದೇವಿ, ಪಿಎಸ್ಐ (ಕಾಸು) ಚೇತನ್, ಮಾಡಬೂಳ ಪೊಲೀಸ್ ಸಿಬ್ಬಂದಿಯವರಾದ ಕಮಲಾಕರ್, ಮಾಳಗೊಂಡ, ಅರುಣ, ಕೃಷ್ಣಾ ಪಿಸಿ, ವಿರಶೆಟ್ಟಿ ಹೆಚ್.ಸಿ, ಸಂಗಣ್ಣ ಸಿಪಿಸಿ, ರಮೆಶ ಸಿಪಿಸಿ, ಚಂದ್ರಶೇಖರ, ಶಾಂತಮಲ್ಲಪ್ಪ ಸಿಪಿಸಿ, ಪ್ರಶಾಂತಕುಮಾರ ರವರುಗಳನ್ನೊಳಗೊಂಡ ತಂಡವನ್ನು ರಚಿಸಿದ್ದು ಸದರಿಯವರು ಜನವರಿ 19 ರಂದು ಆರೋಪಿತರಾದ ಆನಂದ ಸೋಮಶೇಖರ ತತ್ತಂಡಿ ಹಳೆ ಹೆಬ್ಬಾಳ, ಹಣಮಂತ ನಾಗಣ್ಣ ಮಾಂಗ್ ಹಳೆ ಹೆಬ್ಬಾಳ ಇವರುಗಳನ್ನು ಬಂಧಿಸಿ, ಸದರಿ ಆರೋಪಿತರಿಂದ ಕಳ್ಳತನ ಮಾಡಿದ ಮುದ್ದೆಮಾಲಾದ 5 ಹೆಚ್.ಪಿ ನಿರೇತ್ತುವ ಮೋಟಾರ್ ಅ.ಕಿ 19,000, ಮತ್ತು ಕಳ್ಳತನವಾದ 5 ಹೆಚ್.ಪಿ ಮೋಟಾರ್ ಅ.ಕಿ 15,000 ಹಾಗೂ ಬೇರೆ ಬೇರೆ ಕಡೆ ಕಳ್ಳತನ ಮಾಡಿದ 3 ನಿರೇತ್ತುವ ಮೋಟಾರಗಳು ಅ.ಕಿ 57,000 ರೂ. ಹೀಗೆ ಒಟ್ಟು 5 ನಿರೇತ್ತುವ ಮೋಟಾರುಗಳು ಅ.ಕಿ 91,000 ರೂ. ಜಪ್ತಿಪಡಿಸಿಕೊಂಡು ಪ್ರಕರಣವನ್ನು ಬೇಧಿಸುವಲ್ಲಿ ಯಶ್ವಸಿಯಾಗಿರುತ್ತಾರೆ. ಸದರಿ ಅಧಿಕಾರಿ ಮತ್ತು ಸಿಬ್ಬಂದಿಯವರ ಈ ಕಾರ್ಯಕ್ಕೆ ಜಿಲ್ಲಾ ಪೊಲೀಸ್ ಅಧಿಕ್ಷಕರು ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ.