ಹೊಸಳ್ಳಿ (ಎಚ್) ಗ್ರಾಮದಲ್ಲಿ ಕಟಾವಿಗೆ ಬಂದಿದ್ದ 10 ಎಕರೆ ಕಬ್ಬು ಬೆಂಕಿಗಾಹುತಿ, ಕಂಗಾಲಾದ ರೈತರು

ನಾಗಾವಿ ಎಕ್ಸಪ್ರೆಸ್ 

ಕಾಳಗಿ: ಕಟಾವಿಗೆ ಬಂದು ನಿಂತಿದ್ದ 10 ಎಕರೆ ಕಬ್ಬು ಬೆಳೆ ಬೆಂಕಿ ಕೆನ್ನಾಲಿಗೆ ಆಹುತಿಯಾದ ಘಟನೆ ತಾಲೂಕಿನ ಹೊಸಳ್ಳಿ (ಎಚ್) ಗ್ರಾಮದಲ್ಲಿ ನಡೆದಿದೆ.

ಶಾರ್ಟ್ ಸರ್ಕ್ಯೂಟ್ ನಿಂದ ಗುರುವಾರ ಮದ್ಯಾಹ್ನ 2 ಗಂಟೆಗೆ ಶ್ರೀದೇವಿ ಲಕ್ಷಮಯ್ಯ ಗುತ್ತೇದಾರ ಅವರ ಹೊಲದ ಕಬ್ಬಿಗೆ ಬೆಂಕಿ ಹತ್ತಿಕೊಂಡಿದೆ, ಇದಾದ ಬಳಿಕ ಪಕ್ಕದ ಮೋತಿಬಾಯಿ ಜೇನು, ಹಾಗೂ ಲಕ್ಷ್ಮಣ ಧನಸಿಂಗ ಅವರ ಹೊಲಕ್ಕೂ ಬೆಂಕಿ ಹರಡಿದೆ, ಒಟ್ಟು 10 ಎಕರೆ ಗೆ ವಿಸ್ತರಿಸಿದ ಬೆಂಕಿಯು ಕಟಾವಿಗೆ ಬಂದಿದ್ದ ಕಬ್ಬು ಬೆಂಕಿಗೆ ಆಹುತಿಯಾಗಿದೆ.

ಪ್ರತಿ ಎಕರೆಗೆ 50 ಟನ ಕಬ್ಬು ಸಾಮರ್ಥ್ಯ ದಂತೆ ಸುಮಾರು 10 ಎಕರೆಯ 500 ಟನ್ ಗೂ ಹೆಚ್ಚು ಕಬ್ಬು ಭಸ್ಮವಾಗಿದ್ದು, ಒಟ್ಟು 10 ಲಕ್ಷಕ್ಕೂ ಅಧಿಕ ಮೌಲ್ಯದ ಕಬ್ಬು ಬೆಂಕಿಗಾಹುತಿಯಾಗಿದೆ. ಇದರಿಂದ ರೈತರ ಜೀವನ ಸಂಕಷ್ಟಕ್ಕೆ ಸಿಲುಕಿದಂತಾಗಿದೆ ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಭೇಟಿ ನೀಡಿ ಪರಿಹಾರ ದೊರಕಿಸುವ ಕೆಲಸ ಮಾಡಬೇಕಿದೆ.

“ಶಾರ್ಟ್ ಸರ್ಕ್ಯೂಟ್ ನಿಂದ ತಗುಲಿದ ಬೆಂಕಿಯಿಂದ ನಮ್ಮ 3 ಎಕರೆ ಕಬ್ಬು ಬೆಂಕಿಗಾಹುತಿಯಾಗಿದ್ದು, ಸುಮಾರು 150 ಟನ್ ಕಬ್ಬು ನಮ್ಮ ಕಣ್ಣೆದುರೆ ಬೆಂಕಿಯ ಪಾಲಾಗಿದೆ, ನಮ್ಮ ಕುಟುಂಬಕ್ಕೆ ಆಸರೆಯಾಗಿದ್ದ ಕಬ್ಬು ಬೆಳೆ ಸುಟ್ಟು ಭಸ್ಮವಾಗಿದೆ ಇದರಿಂದ ದಿಕ್ಕು ತೋಚದಂತಾಗಿದೆ ಹೀಗಾಗಿ ಸಂಬಂಧಪಟ್ಟ ಅಧಿಕಾರಿಗಳು ಆದಷ್ಟು ಬೇಗ ನಮಗೆ ಸೂಕ್ತ ಪರಿಹಾರ ನೀಡಬೇಕು”.-ಶ್ರೀದೇವಿ ಲಕ್ಷಮಯ್ಯ  ರೈತ ಮಹಿಳೆ ಹೊಸಳ್ಳಿ (ಎಚ್).

Spread the love

Leave a Reply

Your email address will not be published. Required fields are marked *

error: Content is protected !!