Oplus_0

ಟ್ಯಾಬ್ – ಲ್ಯಾಬ್ ಮೂಲಕ ಮಕ್ಕಳಲ್ಲಿ ಗುಣಾತ್ಮಕ ಶಿಕ್ಷಣಕ್ಕೆ ಪ್ರೋತ್ಸಾಹ, ಐ.ಐ.ಎಫ್.ಎಲ್. ಸಂಸ್ಥೆಯ ಕಾರ್ಯ ಶ್ಲಾಘನೀಯ: ಸಾಗರ ಖಂಡ್ರೆ ಅಭಿಮತ

ನಾಗಾವಿ ಎಕ್ಸಪ್ರೆಸ್

ಭಾಲ್ಕಿ: ಉತ್ತಮ ಶಿಕ್ಷಣ ಪಡೆಯುವುದು ಪ್ರತಿ ಮಗುವಿನ ಹಕ್ಕು ಟ್ಯಾಬ್ ಲ್ಯಾಬ್ ಮೂಲಕ ಮಕ್ಕಳಿಗೆ ತಂತ್ರಜ್ಞಾನ ಆಧಾರಿತ ಶಿಕ್ಷಣ ಕೊಡಿಸುವಲ್ಲಿ ಐ.ಐ.ಎಫ್.ಎಲ್. ಸಂಸ್ಥೆ, ಪ್ರಜ್ಞಾ ಫೌಂಡೇಷನ್ ಮತ್ತು ತಾಲೂಕಿನ ಶಿಕ್ಷಣ ಇಲಾಖೆಯ ಕೆಲಸ ಮೆಚ್ಚುವಂತಹದ್ದು ಎಲ್ಲಾ ಶಾಲೆಗಳು ಈ ಟ್ಯಾಬ್ ಲ್ಯಾಬ್ ನ ಸದುಪಯೋಗ ಪಡೆದುಕೊಳ್ಳಿ ಎಂದು ಬೀದರ ಲೋಕಸಭಾ ಕ್ಷೇತ್ರದ ಸದಸ್ಯ ಸಾಗರ ಈಶ್ವರ ಖಂಡ್ರೆ ಅಭಿಪ್ರಾಯ ವ್ಯಕ್ತಪಡಿಸಿದರು.

ನಗರದಲ್ಲಿ ಐ.ಐ.ಎಫ್.ಎಲ್. ಸಂಸ್ಥೆ, ಪ್ರಜ್ಞಾ ಫೌಂಡೇಷನ್ ಹಾಗೂ ಶಾಲಾ ಶಿಕ್ಷಣ ಇಲಾಖೆಯ ಮೂಲಕ ಮಕ್ಕಳಿಗೆ ಟ್ಯಾಬ್ ವಿತರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಐ.ಐ.ಎಫ್.ಎಲ್. ಹಾಗೂ ಪ್ರಜ್ಞಾ ಫೌಂಡೇಷನ್ ಮೂಲಕ ಭಾಲ್ಕಿ ತಾಲೂಕಿನ 10 ಸರಕಾರಿ ಪ್ರೌಢಶಾಲಾ ಮಕ್ಕಳಿಗೆ ವಿವರಿಸಲಾಗಿದೆ, ಪ್ರತೀ ಶಾಲೆಯಲ್ಲಿ ಟ್ಯಾಬ್ ಲ್ಯಾಬ್ ರಚನೆ ಮಾಡಲಾಗಿದೆ, ಪ್ರತೀ ಶಾಲೆಗೆ 20 ಟ್ಯಾಬ್, 20 ಟೇಬಲ್, 20 ಹೆಡ್ ಪೋನ್ ಇತರೆ ಸಾಮಗ್ರಿಗಳನ್ನು ವಿತರಿಸಲಾಗುತ್ತಿದೆ ಎಂದರು.

ಕಾರ್ಯಕ್ರಮದಲ್ಲಿ ಸಿ.ಎಸ್.ಆರ್.ಮ್ಯಾನೇಜರ್ ಶಂಭುಲಿಂಗ್, ರಾಮಣಗೌಡ, ಪ್ರಜ್ಞಾ ಫೌಂಡೇಷನ್ ಅದ್ಯಕ್ಷ ಕಾಶೀನಾಥ ಪುಜಾರಿ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ದತ್ತು ಕಾಟಕರ್, ಇ.ಸಿ.ಓ ಸಹದೇವ ಕೋಸಂ ಶಾಲಾ ಶಿಕ್ಷಕರಾದ ರಮೇಶ ಮರೂರ, ಸಂಜೀವ ಸಾವರೆ, ಹಣಮಂತ ಕಾರಮಗೆ, ಸಂತೋಷ ಮುದಾಳೆ ಬಿ.ಆರ್.ಪಿ. ಪತ್ರ ಕರ್ತರ ಸಂಘದ ಅಧ್ಯಕ್ಷ ಜಯರಾಜ್ ಮತ್ತು ಮಕ್ಕಳು ಹಾಜರಿದ್ದರು.

Spread the love

Leave a Reply

Your email address will not be published. Required fields are marked *

error: Content is protected !!