ಜ.22 ರಂದು ರೈತ ಸಂಘಟನೆಗಳಿಂದ ಕರೆ ನೀಡಿದ ಕಲಬುರ್ಗಿ ಬಂದ್ ಗೆ ಜೆಡಿಎಸ್ ಬೆಂಬಲ
ನಾಗಾವಿ ಎಕ್ಸಪ್ರೆಸ್
ಕಲಬುರ್ಗಿ: ಕಲಬುರ್ಗಿಯ ಆರ್ಥಿಕತೆ ನಿರ್ಧಾರವಾಗುವುದೇ ತೊಗರಿ ಮೇಲೆ, ಬಂಪರ್ ಬೆಳೆ ಬಂದರೆ ಮಾತ್ರ ಅನ್ನದಾತರ ಮೊಗದಲ್ಲಿ ಮಂದಹಾಸ ಕಾಣಲು ಸಾಧ್ಯ. ಒಂದೆಡೆ ಬರ, ಇನ್ನೊಂದೆಡೆ ನೆರೆ ಎರಡೂ ಪಾರಾಗಿ ಬಂದರೂ ಸೂಕ್ತ ಬೆಲೆ ಸಿಗದೇ ರೈತ ಕಂಗಾಲಾಗುವಂತೆ ಮಾಡಿದೆ ತೇವಾಂಶ ಕೊರತೆಯಿಂದ ಒಣಗಿದ ತೊಗರಿಗೆ ಪರಿಹಾರಕ್ಕಾಗಿ, ಬೆಳೆ ವಿಮೆ ಮಂಜೂರು ಮಾಡಲು ಆಗ್ರಹಿಸಿ ಕರ್ನಾಟಕ ಪ್ರಾಂತ ರೈತ ಸಂಘ ಹಾಗೂ ವಿವಿಧ ರೈತ ಸಂಘದ ನೇತೃತ್ವದಲ್ಲಿ ಜ.22 ರಂದು ಕರೆ ನೀಡಿದ ಕಲಬುರ್ಗಿ ಬಂದಗೆ ಜೆಡಿಎಸ್ ಪಕ್ಷ ಬೆಂಬಲ ನೀಡಲಿದೆ ಎಂದು ಪಕ್ಷದ ಜಿಲ್ಲಾದ್ಯಕ್ಷ ಬಾಲರಾಜ್ ಗುತ್ತೇದಾರ ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿರುವ ಅವರು, ಕಲಬುರ್ಗಿ ಜಿಲ್ಲೆಯ ತೊಗರಿ ಬಿತ್ತನೆ 6.06884 ಹೆಕ್ಟೇರ್ ಮಾಡಿದ ತೊಗರಿ ಸರಾಸರಿ 2 ಲಕ್ಷ ಹೆಕ್ಟೇರ್ ತೊಗರಿ ಬೆಳೆ ಒಣಗಿ ಹೋಗಿದೆ ತೊಗರಿ ಕಣಜ ಎಂದು ಏಷ್ಯಾ ಖಂಡದಲ್ಲಿ ಪ್ರಸಿದ್ಧ ವಾಗಿದೆ. ತೊಗರಿ ನಾಡಿನಲ್ಲಿ ಈ ವರ್ಷ ರೈತರು, ರಸ ಗೊಬ್ಬರ ಬೆಲೆ, ಬಿಜದ ಬೆಲೆ, ಔಷಧಿ ಬೆಲೆ ಗಗನಕ್ಕೆರಿದೆ, ಬಿತ್ತಿದ್ದು ಬುಕ್ಕದ ಆಳು, ಸದಿ ಎಡಿ ಔಷಧಿ ಸಿಂಪರಣೆ ಮಾಡಿದ್ದು ಲಾಗೊಡಿ ಮಾಡಿದ ರೈತರು ಒಳ್ಳೆಯ ಬಂಪರ್ ಬೆಳೆ ಬೆಳೆದು ನಿಂತಿದ್ದ, ನೆನಿ, ಹೂ, ಚೆಳ್ಳಿ, ಕಾಯಿ ಕಚ್ಚುವ ಸಮಯದಲ್ಲಿ ತೇವಾಂಶ ಕೊರತೆಯಿಂದ ಒಣಗಿಹೊದ ತೊಗರಿ ಬೆಳೆ ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದೆ, ಸಿಕ್ಕಾಪಟ್ಟಿ ಲಾಗೊಡಿ ಮಾಡಿದ ಸಾಲ ತೀರಿಸಲು ಆಗದೆ ತೊಗರಿ ಬೆಳೆಗಾರರು ಕಂಗಾಲಾಗಿದ್ದಾರೆ ಎಂದು ತಿಳಿಸಿದ್ದಾರೆ.
ಜಿಐ ಮಾನ್ಯತೆ ಸಿಕ್ಕರೂ ಲಾಭ ಏನಾಗುತ್ತಿದೆ ರೈತರ ಹೈರಾಣು ತಪ್ಪುತ್ತಿಲ್ಲ. ರಾಜ್ಯದ ತೊಗರಿ ಕಣಜ ಕಲಬುರ್ಗಿಯಲ್ಲಿ ತೊಗರಿ ಬೆಳೆಗಾರರ ಹಿತಕಾಪಾಡಲು ಅಸ್ತಿತ್ವಕ್ಕೆ ಬಂದಿರುವ ರಾಜ್ಯ ತೊಗರಿ ಅಭಿವೃದ್ಧಿ ಮಂಡಳಿ ತೊಗರಿ ಖರೀದಿಯೂ ನಡೆಸದೆ, ಹೊಸ ತಳಿ ಅಭಿವೃದ್ಧಿಯನ್ನೂ ಮಾಡದೆ ತೊಗರಿ ಮಂಡಳಿ ಇದ್ದೂ ಇಲ್ಲದಂತಾಗಿದೆ. 20 ವರ್ಷಗಳಲ್ಲಿ ಸಿಕ್ಕಿದ್ದು ಕೇವಲ 5 ಕೋಟಿ ರೂ.ಮಾತ್ರ .ಆರಂಭದಲ್ಲಿ ಅನುದಾನ ನೀಡಿದ್ದು ಬಿಟ್ಟರೆ ಈಗ ಹಣವೇ ನೀಡಿಲ್ಲ, ಈಗ ತೊಗರಿ ಮಂಡಳಿಯಿಂದ ತೊಗರಿ ಖರೀದಿಯೂ ಇಲ್ಲ, ತೊಗರಿ ಮಂಡಳಿ ಅನಾಥವಾಗಿದೆ. ತೊಗರಿ ಹೊಸ ತಳಿ ಅಭಿವೃದ್ಧಿಯೂ ಇಲ್ಲ, ಅನುದಾನ ಇಲ್ಲದೇ ಬಳಲುತ್ತಿರುವ ಮಂಡಳಿಯು ರೈತರ ಪಾಲಿಗೆ ಸತ್ತಂತಾಗಿದೆ ಎಂದು ತಿಳಿಸಿದ್ದಾರೆ.
ಕೆಎಂಎಫ್ ಮಾದರಿಯಲ್ಲಿ ಜಾರಿ ಮಾಡಲು ರೈತರ ತೊಗರಿ ಖರೀದಿಸಿ ಮಾರಾಟ ಮಾಡಬೇಕು, ದ್ವಿದಳ ಧಾನ್ಯಗಳ ಪಲ್ಸ್ ಸೆಸ್ ಬೋರ್ಡ್ ಬಲ ಪಡಿಸಿ, ಹೊರದೇಶದ ತೊಗರಿ ಮೇಲೆ ಶೇ. 50 ರಷ್ಟು ಇಂಪೋರ್ಟ ಡಿವುಟಿ ಹಾಕಬೇಕು, ರೇಷನ್ ಅಂಗಡಿಗಳಲ್ಲಿ ಪಡಿತರ ಚೀಟಿ ಮೂಲಕ 23 ಪ್ರತಿ ಶತ ಪ್ರೋಟೀನ್ ಹೊಂದಿರುವ ತೊಗರಿ ಬೆಳೆ ವಿತರಿಸಬೆಕು, ಅಕ್ಷರ ದಾಸೋಹ ಬಿಸಿ ಉಟಕ್ಕೆ ಶಾಲೆಗಳಿಗೆ ಕಲಬುರಗಿ ತೊಗರಿ ಬೆಳೆ ವಿತರಿಸಬೆಕು, ಎಂಎಸ್ಪಿ ಬೆಂಬಲ ಬೆಲೆ ನಿಗದಿ ಪಡಿಸಲು ಆಗ್ರಹಿಸಿ ರೈತರ ಸಾಲ ಮನ್ನಕ್ಕಾಗಿ, ಕ್ವಿಂಟಲ್ ತೊಗರಿಗೆ ಕೇಂದ್ರ ಸರ್ಕಾರದ 1000 ರೂ. ಪ್ರೋತ್ಸಾಹ ಧನ ಕೊಡಬೇಕು, ರಾಜ್ಯ ಸರ್ಕಾರ ಮುಖ್ಯಮಂತ್ರಿಗಳು ಆವರ್ಥ ನಿಧಿ 500 ರೂ. ಕೊಡಬೇಕು ಎಂದು ಆಗ್ರಹಿಸಿದ್ದಾರೆ.