Oplus_0

ಜೇವರ್ಗಿ ಬಾಲಕಿ ಆತ್ಮಹತ್ಯೆಗೆ ಕಾರಣನಾದ ಮಹೇಬೂಬನನ್ನು ಬಂಧಿಸಿ ಕಠಿಣ ಶಿಕ್ಷೆಗೆ ಗುರಿ ಪಡಿಸಬೇಕೆಂದು ಆಗ್ರಹಿಸಿ ವಿಶ್ವ ಹಿಂದೂ ಪರಿಷತ್ ಪ್ರತಿಭಟನೆ

ನಾಗಾವಿ ಎಕ್ಸಪ್ರೆಸ್

ಚಿತ್ತಾಪುರ: ಜೇವರ್ಗಿ ನಗರದಲ್ಲಿ ಜಿಹಾದಿ ಮಾನಸಿಕತೆ ಹೊಂದಿರುವ ಮಹೇಬೂಬನ ಕಿರುಕುಳಕ್ಕೆ ಬೇಸತ್ತು 8 ನೇ ತರಗತಿಯ ಬಾಲಕಿ ಆತ್ಮಹತ್ಯೆಗೆ ಕಾರಣವಾದ ಮಹೇಬೂಬನನ್ನು ಕೂಡಲೇ ಬಂಧಿಸುವಂತೆ ಒತ್ತಾಯಿಸಿ ವಿಶ್ವ ಹಿಂದು ಪರಿಷತ್ ಚಿತ್ತಾಪುರ ಪ್ರಖಂಡ ನೇತೃತ್ವದಲ್ಲಿ ತಹಸೀಲ್ ಕಚೇರಿ ಮುಂದೆ ಭಾನುವಾರ ಪ್ರತಿಭಟನೆ ನಡೆಸಿದ ಮುಖಂಡರು ರಾಜ್ಯಪಾಲರಿಗೆ ಬರೆದ ಮನವಿ ಪತ್ರವನ್ನು ತಹಸೀಲ್ದಾರ್ ಅವರಿಗೆ ಸಲ್ಲಿಸಿದರು.

ಪ್ರಾಂತ ಸೇವಾ ಪ್ರಮುಖ ಅಂಬರೀಷ್ ಸುಲೇಗಾಂವ ಮಾತನಾಡಿ, ಅಪ್ರಾಪ್ತ ಬಾಲಕಿ ಆತ್ಮಹತ್ಯೆಗೆ ಕಾರಣನಾದ ಜಿಹಾದಿ ಮಹೇಬೂಬನನ್ನು ಸಾರ್ವಜನಿಕರ ಸಮ್ಮುಖದಲ್ಲಿ ಗಲ್ಲಿಗೇರಿಸುವ ಮೂಲಕ ಕಠಿಣ ಶಿಕ್ಷೆಗೆ ಗುರಿ ಪಡಿಸಬೇಕು ಎಂದು ಆಗ್ರಹಿಸಿದರು.

ಜೇವರ್ಗಿ ಪಟ್ಟಣದ ಹಿಂದೂ ಬಾಲಕಿಯು 8ನೇ ತರಗತಿ ಓದುತ್ತಿದ್ದು ಶಾಲೆಗೆ ಹೋಗಿ ಬರುವ ರಸ್ತೆ ಮಾರ್ಗದಲ್ಲಿ ಜಿಹಾದಿ ಮಾನಸಿಕತೆ ಹೊಂದಿರುವ ಮಹೇಬೂಬನು ಪ್ರೀತಿ ಮಾಡುವಂತೆ ಕಿರುಕುಳ ನೀಡುತ್ತಿದ್ದ. 14 ವರ್ಷದ ಅಪ್ರಾಪ್ತ ಬಾಲಕಿಯು ಅನ್ಯ ಕೋಮಿನ ಮಹೇಬೂಬನ ಕಿರುಕುಳದಿಂದ ಬೇಸತ್ತು ತನ್ನ ಸಹೋದರನಿಗೆ ವಿಷಯವನ್ನು ಹೇಳಿರುತ್ತಾಳೆ, ಸದರಿ ಬಾಲಕಿಯ ಸಹೋದರ ಮಹೇಬೂಬನಿಗೆ ಕರೆಮಾಡಿ ನನ್ನ ಸಹೋದರಿಯನ್ನು ಪ್ರೀತಿಸುವಂತೆ ಒತ್ತಾಯಿಸುವುದನ್ನು ಬಿಡುವಂತೆ ನಮ್ರತೆಯಿಂದ ಕೇಳಿಕೊಂಡಾಗ ಜಿಹಾದಿ ಮಹೇಬೂಬನು ಅವಾಚ್ಯ ಶಬ್ದಗಳಿಂದ ಅವನಿಗೂ ಹಾಗೂ ಅವನ ಸಹೋದರಿಗೂ ಬೈದು ನಿಂದಿಸಿರುತ್ತಾನೆ ಹಾಗೂ ನಿನ್ನ ತಂಗಿಗೆ ಸಂಬಂಧಿಸಿದ ಹಲವಾರು ಭಾವ ಚಿತ್ರಗಳು ಹಾಗೂ ವಿಡೀಯೊಗಳು ನನ್ನಲ್ಲಿ ಇವೆ ಎಂದು ಭಯ ಪಡಿಸಿರುತ್ತಾನೆ. ನಂತರ ಅಪ್ರಾಪ್ತ ಬಾಲಕಿಯು ಜಿಹಾದಿಯ ಮಾತುಗಳಿಂದ ಮನನೊಂದು ಶನಿವಾರ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುತ್ತಾಳೆ ಎಂದು ಹೇಳಿದರು.

ಕಿರುಕುಳದಿಂದ ಬೇಸತ್ತು ಆತ್ಮಹತ್ಯೆ ಮಾಡಿಕೊಂಡ ಅಪ್ರಾಪ್ತ ಬಾಲಕಿಯ ಕುಟುಂಬಕ್ಕೆ ಸರ್ಕಾರ ಧೈರ್ಯತುಂಬುವ ಕೆಲಸ ಮಾಡಬೇಕು ಹಾಗೂ 50 ಲಕ್ಷ ಪರಿಹಾರವನ್ನು ನೀಡಿ ಮಾನವಿಯತೆ ದೃಷ್ಟಿಯಿಂದ ಸರ್ಕಾರದ ಉದ್ಯೋಗವನ್ನು ನೀಡಬೇಕೆಂದು ಆಗ್ರಹಿಸಿದರು

ಬಿಜೆಪಿ ಮುಖಂಡ ಅಶ್ವಥ್ ರಾಠೋಡ ಮಾತನಾಡಿ, ಯಡ್ರಾಮಿಯ ಘಟನೆ ಜರುಗಿ ಒಂದು ತಿಂಗಳು ಮಾಸುವ ಮುನ್ನವೇ ಮತ್ತೇ ಈಗ ಜೇವರ್ಗಿಯಲ್ಲಿ ಬಾಲಕಿಯ ಆತ್ಮಹತ್ಯೆ ಪ್ರಕರಣ ಜರುಗಿರುವುದು ನಾಗರಿಕ ಸಮಾಜ ತಲೆತಗ್ಗಿಸುವಂತಾಗಿದೆ. ಕೂಡಲೇ ಆತ್ಮಹತ್ಯೆಗೆ ನೇರ ಕಾರಣನಾದ ಮಹೇಬೂಬನನ್ನ ತಕ್ಷಣವೇ ಬಂಧಿಸಿ ಸೂಕ್ತ ಕಾನೂನು ಕ್ರಮ ಕೈಗೊಂಡು ಗಲ್ಲಿಗೇರಿಸಬೇಕು ಎಂದು  ಒತ್ತಾಯಿಸಿದರು.

ವಿಶ್ವ ಹಿಂದೂ ಪರಿಷತ್ ತಾಲೂಕು ಅಧ್ಯಕ್ಷ ಶ್ರೀನಿವಾಸ ಹಳ್ಳಿ, ಬಿಜೆಪಿ ತಾಲೂಕು ಅಧ್ಯಕ್ಷ ರವೀಂದ್ರ ಸಜ್ಜನಶೆಟ್ಟಿ, ನಗರಾಧ್ಯಕ್ಷ ಆನಂದ ಪಾಟೀಲ ನರಿಬೋಳ, ಜಿಲ್ಲಾ ಹಿಂದುಳಿದ ವರ್ಗಗಳ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಎಮ್ಮೆನೋರ್, ಪುರಸಭೆ ಸದಸ್ಯರಾದ ರಮೇಶ್ ಬೊಮ್ಮನಳ್ಳಿ, ಶಾಮಣ್ಣ ಮೇಧಾ, ಮುಖಂಡರಾದ ಮಹಾದೇವ ಅಂಗಡಿ, ನಾಗರಾಜ ಹೂಗಾರ, ಪ್ರಸಾದ್ ಅವಂಟಿ, ಸಂತೋಷ ಹಾವೇರಿ, ಬಸವರಾಜ ಸಂಕನೂರ, ಮಲ್ಲಿಕಾರ್ಜುನ ಮುಗಳನಾಗಾಂವ, ಮೇಘರಾಜ ಗುತ್ತೇದಾರ, ನಾಗರಾಜ ಕಡಬೂರ, ವೀರಣ್ಣ ಶಿಲ್ಪಿ, ಉದಯಕುಮಾರ್ ಸಿಂಪಿ, ಸಿದ್ದು ಹೂಗಾರ, ಮಲ್ಲು ಉಪ್ಪಾರ್, ರಮೇಶ್ ಕಾಳನೂರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ಪಿಎಸ್ಐ ಚಂದ್ರಾಮಪ್ಪ ಪೊಲೀಸ್ ಬಂದೋಬಸ್ತ್ ಒದಗಿಸಿದ್ದರು.

Spread the love

Leave a Reply

Your email address will not be published. Required fields are marked *

You missed

error: Content is protected !!