ಕ-ಕ ಸಂಪಾದಕರ ಸಂಘದಿಂದ ಪತ್ರಿಕಾ ದಿನಾಚರಣೆ, ಹಿರಿಯ ಸಂಪಾದಕರಿಗೆ ಸನ್ಮಾನ ಸಮಾರಂಭ | ಸ್ಥಳೀಯ ಪತ್ರಿಕೆಗಳಿಗೆ ಪ್ರತಿ ತಿಂಗಳು ಎರಡು ಪುಟದ ಜಾಹೀರಾತು ನೀಡುವ ಬೇಡಿಕೆ ಸಿಎಂ ಗಮನಕ್ಕೆ ತರುವ ಪ್ರಯತ್ನ: ಅಲ್ಲಮಪ್ರಭು ಪಾಟೀಲ
ನಾಗಾವಿ ಎಕ್ಸಪ್ರೆಸ್
ಕಲಬುರಗಿ: ಜಿಲ್ಲಾ ಮಟ್ಟದ ಸ್ಥಳೀಯ ಹಾಗೂ ಪ್ರಾದೇಶಿಕ ಪತ್ರಿಕೆಗಳಿಗೆ ಪ್ರತಿ ತಿಂಗಳು ಎರಡು ಪುಟದ ಜಾಹೀರಾತು ನೀಡಬೇಕೆಂಬ ಬೇಡಿಕೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಮತ್ತು ಕೆಕೆಆರ್’ಡಿಬಿ ಅಧ್ಯಕ್ಷ ಡಾ.ಅಜಯಸಿಂಗ್ ಅವರ ಗಮನಕ್ಕೆ ತರುವ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ಕಲಬುರಗಿ ದಕ್ಷಿಣ ಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಕಲ್ಯಾಣ ಕರ್ನಾಟಕ ಸಂಪಾದಕರ ಸಂಘ ಕಲಬುರಗಿ ವಿಭಾಗದ ವತಿಯಿಂದ ಭಾನುವಾರ ಹಮ್ಮಿಕೊಂಡಿದ್ದ ಪತ್ರಿಕಾ ದಿನಾಚರಣೆ ಮತ್ತು ಕಲ್ಯಾಣ ಕರ್ನಾಟಕ ಭಾಗದ ಹಿರಿಯ ಸಂಪಾದಕರಿಗೆ ಸನ್ಮಾನ ಸಮಾರಂಭದ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು, ಪ್ರಜಾಪ್ರಭುತ್ವದ ನಾಲ್ಕನೇ ಅಂಗ ಪತ್ರಿಕಾ ರಂಗ ಗಟ್ಟಿಯಾಗಬೇಕಾದರೆ ಪತ್ರಕರ್ತರಿಗೆ ಸೌಲಭ್ಯಗಳನ್ನು ಒದಗಿಸುವುದು ಅಗತ್ಯವಿದೆ ಎಂದು ಅಭಿಪ್ರಾಯಪಟ್ಟರು.
ಸಮಸ್ಯೆಗಳ ಬಗ್ಗೆ ತಮ್ಮ ವರದಿಯ ಮೂಲಕ ಜನಪ್ರತಿನಿಧಿಗಳ ಹಾಗೂ ಅಧಿಕಾರಿಗಳ ಗಮನಕ್ಕೆ ತರುವ ಪತ್ರಕರ್ತರ ಸಾಮಾಜಿಕ ಸೇವೆ ಅಮೋಘ ಎಂದು ಬಣ್ಣಿಸಿದರು.
ಇದೇ ಸಂದರ್ಭದಲ್ಲಿ ಕಲ್ಯಾಣ ಕರ್ನಾಟಕ ಭಾಗದ ಹಿರಿಯ ಸಂಪಾದಕರಿಗೆ ಸನ್ಮಾನಿಸಲಾಯಿತು. ಸನ್ಮಾನಿತರ ಪರವಾಗಿ ಹಿರಿಯ ಪತ್ರಕರ್ತ ಶಂಕರ ಕೋಡ್ಲಾ ಮಾತನಾಡಿದರು.
ಮುಖ್ಯ ಅತಿಥಿಗಳಾಗಿ ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಮಜಾರ್ ಅಲ್ಲಂಖಾನ್, ಸಂಘದ ಜಿಲ್ಲಾಧ್ಯಕ್ಷ ಗುರುರಾಜ್ ಕುಲಕರ್ಣಿ, ಗೌರವಾಧ್ಯಕ್ಷ ಸುರೇಶ್ ಗೌರೆ, ರಾಜ್ಯ ಉಪಾಧ್ಯಕ್ಷ ಭವಾನಿಸಿಂಗ್ ಠಾಕೂರ್, ವಿ.ಟಿ.ಕಾಂಬಳೆ, ವಾರ್ತಾ ಇಲಾಖೆಯ ರಾಜರತ್ನ, ಹಿರಿಯ ಪತ್ರಕರ್ತರಾದ ಪ್ರಭಾಕರ ಜೋಶಿ, ಹಣಮಂತರಾವ್ ಬೈರಾಮಡಗಿ, ಅಖಿಲ್ ಮೊಹ್ಮದ್ ಕೊಪ್ಪಳ, ಕುಲಕರ್ಣಿ ಯಾದಗಿರಿ, ವಿಜಯಕುಮಾರ್ ವಿಜಯನಗರ, ವಿಜಯಕುಮಾರ್ ಪಾಟೀಲ ಬೀದರ್ ವೇದಿಕೆಯಲ್ಲಿದ್ದರು.
ಆನಂದ ಮಣ್ಣೂರ, ಸಿದ್ದಣ್ಣಗೌಡ ಯಡ್ಡಳ್ಳಿ, ವಿಜಯಕುಮಾರ್ ಜಿಡಗಾ, ಗೌತಮ್ ಗೌಳಾ, ನಾಗಸೇನ್, ರುಕ್ಮೇಶ್, ಶಿವುಕುಮಾರ ಶಿಂಧೆ, ದೇವಿಂದ್ರಪ್ಪ ಅವಂಟಿ, ಶಿವರಂಜನ ಸತ್ಯಂಪೇಟೆ, ಬಾಬು ಚವ್ಹಾಣ, ಜಯಪ್ರಕಾಶ್ ಪೂಜಾರಿ, ಅವಿನಾಶ್ ಕೊಳ್ಳುರ್, ಅವಿನಾಶ್ ದೊಡ್ಡಮನಿ, ಶಿವುಕುಮಾರ ತೊಟ್ನಳ್ಳಿ ಸೇರಿದಂತೆ ಏಳು ಜಿಲ್ಲೆಗಳ ಸಂಪಾದಕರು, ಪತ್ರಕರ್ತರು ಭಾಗವಹಿಸಿದ್ದರು.
ಪತ್ರಕರ್ತ ಚಂದ್ರಶೇಖರ ಕವಲಗಾ ಸ್ಥಳೀಯ ಹಾಗೂ ಪ್ರಾದೇಶಿಕ ಪತ್ರಿಕೆಗಳಿಗೆ ಪ್ರತಿ ತಿಂಗಳು ಎರಡು ಪುಟದ ಜಾಹೀರಾತು ನೀಡಬೇಕು ಎನ್ನುವ ಮನವಿ ಪತ್ರವನ್ನು ಶಾಸಕರಿಗೆ ಸಲ್ಲಿಸಿದರು. ಅಜೀಜುಲ್ಲಾ ಸರ್ಮಸ್ತ್ ಪ್ರಾಸ್ತಾವಿಕವಾಗಿ ಮಾತನಾಡಿದರು, ವಿಠಲ್ ಚಿಕಣಿ ಸಂವಿಧಾನದ ಪೀಠಿಕೆ ಪಠಿಸಿದರು, ಬಾಬುರಾವ್ ಕೋಬಾಳ್ ಪ್ರಾರ್ಥಿಸಿದರು, ಹಣಮಂತ ಬೋಧನಕರ್ ಸ್ವಾಗತಿಸಿದರು, ಚಂದ್ರಕಾಂತ ಹಾವನೂರು ನಿರೂಪಿಸಿದರು.

