Oplus_131072

ಕಲಬುರ್ಗಿ ಬಿಜೆಪಿ ಜಿಲ್ಲಾಧ್ಯಕ್ಷ ಸ್ಥಾನ ಸಿಗುವ ವಿಶ್ವಾಸವಿದೆ: ರವಿರಾಜ್ ಕೊರವಿ

ನಾಗಾವಿ ಎಕ್ಸಪ್ರೆಸ್

ಕಾಳಗಿ: ಕಲಬುರ್ಗಿ ಭಾರತೀಯ ಜನತಾ ಪಕ್ಷದ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ನಾನು ಪ್ರಬಲ ಆಕಾಂಕ್ಷಿಯಾಗಿದ್ದು, ನನಗೆ ಜಿಲ್ಲಾಧ್ಯಕ್ಷ ಸ್ಥಾನ ಸಿಗುವ ಸಂಪೂರ್ಣ ವಿಶ್ವಾಸವಿದೆ ಎಂದು ಕೋಲಿ ಸಮಾಜದ ಜಿಲ್ಲಾಧ್ಯಕ್ಷ ರವಿರಾಜ್ ಕೊರವಿ ಹೇಳಿದರು.

ತಾಲೂಕಿನ ಕೊರವಿ ಗ್ರಾಮದ ಅತಿಥಿ ನಿಲಯದಲ್ಲಿ ಏರ್ಪಡಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈಚೆಗೆ ನಡೆದ ಬಿಜೆಪಿ ಕೋರ್ ಕಮಿಟಿ ಸಭೆಯಲ್ಲಿ ಬಿಜೆಪಿ ಗ್ರಾಮಾಂತರ ಜಿಲ್ಲಾಧ್ಯಕ್ಷರನ್ನು ಬದಲಾವಣೆ ಮಾಡಲು ಪಕ್ಷ ಕೈಗೊಂಡ ತೀರ್ಮಾನ ಸಂತಸ ತಂದಿದೆ ಮತ್ತು ಸ್ವಾಗತಾರ್ಹ ಎಂದರು.

ಪಕ್ಷಕ್ಕಾಗಿ ಸಲ್ಲಿಸಿದ ಸೇವೆಯನ್ನು ಗುರುತಿಸಿ ಪಕ್ಷದ ಹೈಕಮಾಂಡ್ ನನ್ನನ್ನು ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಪರಿಗಣಿಸುತ್ತಾರೆ ಎಂಬುವ ಅಚಲ ವಿಶ್ವಾಸ ಇದೆ ಎಂದು ಹೇಳಿದರು.

ಕಷ್ಟಕಾಲದಲ್ಲಿ ಚಿಂಚೋಳಿ ತಾಲೂಕಿನಾದ್ಯಂತ ಏಕಾಂಗಿಯಾಗಿ ಸಂಚರಿಸಿ ಜ್ಯಾತ್ಯಾತೀತವಾಗಿ ಬಿಜೆಪಿ ಪಕ್ಷದ ಸಂಘಟನೆ ಬಲಿಷ್ಠವಾಗಲು ಶ್ರಮಿಸಿದ್ದೇನೆ ಎಂದರು.

ಕಳೆದ ವಿಧಾನಸಭಾ ಚುನಾವಣೆ ವೇಳೆಯಲ್ಲಿ ಹಾಗೂ ಲೋಕಸಭಾ ಚುನಾವಣೆಯಲ್ಲಿ ಕಾಲಿಗೆ ಚಕ್ರ ಕಟ್ಟಿಕೊಂಡು ಕಲಬುರಗಿ ಮತ್ತು ಚಿಂಚೋಳಿ ತಾಲೂಕಿನಾದ್ಯಂತ ನಿಸ್ವಾರ್ಥ ಸೇವೆ ಸಲ್ಲಿಸಿದ್ದು ಕಾರಣ ನನಗೆ ರಾಜಕೀಯ ಭವಿಷ್ಯ ನೀಡಿದ್ದು ಬಿಜೆಪಿ ಪಕ್ಷ ಕಾರಣ, ಬದಲಾದ ರಾಜಕೀಯ ಪರಿಸ್ಥಿತಿಯಲ್ಲಿ ನನಗೆ ಬಿಜೆಪಿ ಪಕ್ಷದಲ್ಲಿ ಯಾವುದೇ ಹುದ್ದೆಯನ್ನು ಸಿಗಲಿಲ್ಲ, ಯಾವುದೇ ಹುದ್ದೆಗೆ ಆಸೆಪಟ್ಟವನಲ್ಲ ಹಾಗಂತ ನಾನೇನು ಪಕ್ಷದ ವಿರುದ್ದ ಹೋಗಿಲ್ಲ, ಪಕ್ಷ ಯಾರಿಗೆ ಟಿಕೆಟ್ ನೀಡಿದರೂ ಗೆಲುವೊಂದೇ ನಮಗೆ ಮಾನದಂಡ. ಎಂದು ಒಬ್ಬ ಜ್ಯಾತ್ಯಾತೀತ ನಾಯಕನಾಗಿ ಎಲ್ಲಾ ಸಮಾಜದ ನಾಯಕರಿಗೆ ಪಕ್ಷದ ಬಲವರ್ಧನೆ ಬುನಾದಿ ಹಾಕಿದ್ದೇನೆ ಎಂದು ತಿಳಿಸಿದ್ದಾರೆ.

ಪಂಚ ಗ್ಯಾರಂಟಿ ನೀಡುತ್ತವೆ ಎಂದು ಕಾಂಗ್ರೆಸ್ ಪಕ್ಷದ ಜನರಿಗೆ ಮೋಸ ಮಾಡುತ್ತಿರುವುದು ಜನರಿಗೆ ತಿಳಿದಿದೆ. ಮುಂಬರುವ ಜಿಲ್ಲಾ ಪಂಚಾಯತ ತಾಲೂಕು ಪಂಚಾಯತ, ಪಟ್ಟಣ ಪಂಚಾಯತ ಹಾಗೂ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ತಕ್ಕ ಪಾಠವನ್ನು ಕಲಿಸುತ್ತಾರೆ ಎಂದರು.

ಪ್ರಧಾನಿ ಮೋದಿಜಿ ರವರ ಹಿತದೃಷ್ಟಿಯಲ್ಲಿ ಯುವಕರಿಗೆ ಮಣೆಹಾಕುವುದು ಧ್ಯೆಯವಾಗಿದೆ ನಾನೋಬ್ಬ ಯುವಕ ಜ್ಯಾತ್ಯಾತೀತ ನಾಯಕನೆಂದು ಕಲಬುರಗಿ ತಾಲೂಕಿನ ಮತದಾರರು ಹೇಳಿರುವುದು, ಹೇಳುವ ಪ್ರಸಂಗ ಇದಾಗಿದೆ. ಚಂದು ಪಾಟೀಲ ಅವರು ಪ್ರಸ್ತುತ ಕಲಬುರ್ಗಿ ನಗರಾಧ್ಯಕ್ಷರಿದ್ದಾರೆ, ಗ್ರಾಮಾಂತರ ಜಿಲ್ಲಾಧ್ಯಕ್ಷರನ್ನಾಗಿ ನನ್ನನ್ನು ಆಯ್ಕೆ ಮಾಡಿದ್ದರೆ ಹಿಂದುಳಿದ ವರ್ಗಕ್ಕೆ ನ್ಯಾಯ ಕೊಟ್ಟಂತೆ ಆಗುತ್ತದೆ, ಅಲ್ಲದೇ ಜ್ಯಾತ್ಯಾತೀತ ನಾಯಕನಿಗೆ ಸ್ಥಾನ ನೀಡಿದಂತೆ ಆಗುತ್ತದೆ ಎಂದು ಹೇಳಿದರು.

Spread the love

Leave a Reply

Your email address will not be published. Required fields are marked *

You missed

error: Content is protected !!