ಕಲಬುರ್ಗಿ ಮಣೂರ ಆಸ್ಪತ್ರೆಯ 4 ನೇ ವಾರ್ಷಿಕೋತ್ಸವದ ನಿಮಿತ್ತ ಮಧುಮೇಹ ಮುಕ್ತ ಕಲಬುರಗಿ ಅಭಿಯಾನಕ್ಕೆ ಚಾಲನೆ
ನಾಗಾವಿ ಎಕ್ಸಪ್ರೆಸ್
ಕಲಬುರಗಿ: ಜಿಲ್ಲೆಯಲ್ಲಿ ದಿನೆ ದಿನೆ ಮಧುಮೆಹ ರೋಗಿಗಳ ಸಂಖ್ಯೆ ಹೆಚ್ಚಾಗುತ್ತಿದು ಇನ್ನೂ ಬಹುತೇಕ ರೋಗಿಗಳು ಸರಿಯಾದ ಸಮಯಕ್ಕೆ ಹಾಗೂ ಹಣದ ಕೊರತೆಯಿಂದ ಮದುಮೇಹ ತಪಾಸಣೆ ಮಾಡಿಸಿಕೊಳ್ಳುವುದಿಲ್ಲಾ ಆದಕಾರಣ ಮಣೂರ ಮಲ್ಟಿಸ್ಪೇಷಾಲಿಟಿ ಆಸ್ಪತ್ರೆಯ 4 ವರ್ಷದ ವಾರ್ಷಿಕೊತ್ಸವದ ನಿಮಿತ್ತ ವರ್ಷವಿಡಿ ಉಚಿತವಾಗಿ ಮಧುಮೇಹ ಸೇರಿದಂತೆ ಎಫ್ಬಿಎಸ್ ಮತ್ತು ಪಿಪಿಬಿಎಸ್ ಪರೀಕ್ಷೆಯನ್ನು ಮಾಡಿಕೊಳ್ಳುವ ಮೂಲಕ ಸರಿಯಾದ ಸಮಯಕ್ಕೆ ಗುಣಮಟ್ಟದ ಚಿಕಿತ್ಸೆ ನೀಡಿ ಮಧುಮೇಹ ಮುಕ್ತ ಕಲಬುರಗಿ ಅಭಿಯಾನಕ್ಕೆ ಚಾಲನೆ ಬಿಡಲಾಗಿದೆ ಎಂದು ಡಾ.ಫಾರುಕ್ ಮನ್ನೂರ ತಿಳಿಸಿದ್ದಾರೆ.
ಕಲಬುರಗಿ ನಗರದ ಪ್ರತಿಷ್ಠಿತ ಮನ್ನೂರ ಮಲ್ಟಿಸ್ಪೇಷಾಲಿಟಿ ಆಸ್ಪತ್ರೆಯ 4ನೇ ವರ್ಷದ ವಾರ್ಷಿಕೊತ್ಸವ ಸಮಾರಂಭ ಜ. 2 ರಂದು ಹಮ್ಮಿಕೊಳ್ಳಲಾಗುದೆ ಎಂದು ಮಾಹಿತಿ ನೀಡಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿರುವ ಅವರು, ಜಿಲ್ಲೆಯಲ್ಲಿ ಕಡಿಮೆ ಅವಧಿಯಲ್ಲಿ ಗುಣಮಟ್ಟದ ಚಿಕಿತ್ಸೆ ನೀಡುವ ಮೂಲಕ ಮನ್ನೂರ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಕಲಬುರಗಿ, ಬೀದರ,ಯಾದಗಿರಿ ಜಿಲ್ಲೆಯ ಜನರ ವಿಶ್ವಾಸ ಹಾಗೂ ನಂಬಿಕೆ ಉಳಿಸಿಕೊಂಡು ಬರುತ್ತಿದೆ, ನಮ್ಮ ಆಸ್ಪತ್ರೆ ಗುಣ ಮಟ್ಟದ ಚಿಕಿತ್ಸೆ ಜೊತೆಗೆ ನಿರಂತರ ಜಿಲ್ಲೆಯಲ್ಲಿ ಸಮಾಜಿಕ ಕಾರ್ಯಮಾಡಿಕೊಂಡು ಬರುತ್ತಿದೆ. ಬೆಸಿಗೆ ಕಾಲದಲ್ಲಿ ತಾಲೂಕು ಮಟ್ಟದಲ್ಲಿ ಶುದ್ದ ಕುಡಿಯುವ ನೀರಿನ ವ್ಯವಸ್ಥೆ, ಬಿದಿ ಬದಿ ವ್ಯಾಪಾರಿಗಳಿಗೆ ಚತ್ರಿ ವಿತರಣೆ, ಕ್ಷಯ ಪಿಡಿತ ರೋಗಿಗಳಿಗೆ ದತ್ತು ಪಡೆದು ಪೌಷ್ಟಿಕ ಆಹಾರ ಪೂರೈಕೆ, ಬಡ ಹೆಣ್ಣು ಮಕ್ಕಳಿಗೆ ಸುಕನ್ಯ ಸಮೃದ್ದಿ ಯೋಜನೆಯಲ್ಲಿ ಹಣದ ಸಹಾಯ , ಟ್ರಾಫಿಕ ಪೋಲಿಸರಿಗೆ ಹೆಲ್ಮೆಟ್ ವಿತರಣೆ ಸೇರಿದಂತೆ ಕಲಬುರಗಿ ಜಿಲ್ಲೆಯ ಎಲ್ಲಾ ತಾಲೂಕಿನಲ್ಲಿ ಉಚಿತ ಆರೋಗ್ಯ ತಪಾಸಣೆ ಶಿಬಿರ ಆಯೋಜಿಸಿ ಉಚಿತವಾಗಿ ಔಷದಿ ವಿತರಣೆ ಸೇರಿದಂತೆ ಅನೇಕ ಸಮಾಜಿಕ ಕಾರ್ಯಗಳನ್ನು ಮಾಡಿಕೊಂಡು ಬರುತ್ತಿದೆ ಎಂದರು.
ಜ .2 ರಂದು ಇಂದು 4ನೇ ವಾರ್ಷಿಕೊತ್ಸವ ಸಂದರ್ಭದಲ್ಲಿ ಜನರಿಗೆ ಆರೋಗ್ಯದ ಕುರಿತು ಜಾಗೃತಿಗೊಸ್ಕರ ಮ್ಯಾಗಜಣಿನ ಬಿಡುಗಡೆ ಗೊಳಿಸಿ ಜಿಲ್ಲೆಯಲ್ಲಿ ಉಚಿತವಾಗಿ ವಿತರಣೆ ಮಾಡಲಾಗಿವುದು, ಹಾಗೂ ಕ್ಯಾಲೆಂಡರ್ ಬಿಡುಗಡೆ ಮಾಡಲಾಗುವುದು, ವಾರ್ಷಿಕೊತ್ಸವ ಸಮಾರಂಭದಲ್ಲಿ ಜಿಲ್ಲೆಯ ಶಾಸಕರು,ಸಂಸದರು, ಮಾಜಿ ಶಾಸಕರು, ಅಧಿಕಾರಿಗಳು ಸೇರಿದಂತೆ ಗಣ್ಯರು ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದ್ದಾರೆ.