ಕಲಬುರ್ಗಿಯಲ್ಲಿ ನ.23, 24 ರಂದು ಪ್ರತಿಬೆಗೊಂದು ರಂಗ ವೇದಿಕೆ ವಿನೂತನ ಕಾರ್ಯಕ್ರಮ ಅಡಿಯಲ್ಲಿ ರಂಗ ಸುವರ್ಣ, ರಂಗಸಿರಿ ಪ್ರಶಸ್ತಿ ಪ್ರದಾನ, ಉಚಿತ ನಾಟಕೋತ್ಸವ
ನಾಗಾವಿ ಎಕ್ಸಪ್ರೆಸ್
ಕಾಳಗಿ: ರಂಗಮಿತ್ರ ನಾಟ್ಯ ಸಂಘ ಕಲಬುರ್ಗಿಯಿಂದ ವಿವಿಧ ರೀತಿಯಲ್ಲಿ ಕಾರ್ಯಕ್ರಮಗಳು ಪ್ರತಿ ವರ್ಷದಂತೆ ಈ ವರ್ಷವು ಕೂಡ ಮಾಡುತ್ತಿದ್ದು ಏಲೆಮರಿ ಕಾಯಿಯಂತೆ ಇರುವ ಕಲಾವಿದರುನ್ನು ಗುರುತಿಸಿ ರಂಗ ಸುವರ್ಣ ಪ್ರಶಸ್ತಿ 5 ಗ್ರಾಂ.ಚಿನ್ನದ ಜೋತೆ ದಂಪತಿಗಳಿಗೆ ಹೊದಿಕೆ ನೆನಪಿನ ಕಾಣಿಕೆ ಮತ್ತು ರಂಗಸಿರಿ ಪ್ರಶಸ್ತಿ ನೆನಪಿನ ಕಾಣಿಕೆ ಗೌರವ ಸತ್ಕಾರ ಮಾಡಲಾಗುವುದು ಎಂದು ರಂಗಮಿತ್ರ ನಾಟ್ಯ ಸಂಘದ ಜಿಲ್ಲಾ ಸಂಯೋಜಕ ಲಕ್ಷ್ಮಣ ಆವಂಟಿ ಹೇಳಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರತಿಭೆಗೊಂದು ರಂಗ ವೇದಿಕೆ ವಿನೂತನ ಕಾರ್ಯಕ್ರಮ ಅಡಿಯಲ್ಲಿ ರಂಗಮಿತ್ರ ನಾಟ್ಯ ಸಂಘದಿಂದ ಕಲಬುರ್ಗಿಯ ರಂಗಮಂದಿರದಲ್ಲಿ ಬರುವ 23 ಮತ್ತು 24 ರಂದು ಹಮ್ಮಿಕೊಂಡ ಅಳ್ಳೋಳ್ಳಿಯ ಗದ್ದುಗೆ ಮಠದ ಲಿಂ. ಹಂಪಯ್ಯ ಮಹಾಸ್ವಾಮಿಗಳ ಸ್ಮರಣಾರ್ಥ ಅಂಗವಾಗಿ ಕೊಡುಮಾಡುವ ಕನ್ನಡ ರಾಜ್ಯೋತ್ಸವ ಅಂಗವಾಗಿ ರಂಗ ಸುವರ್ಣ, ರಂಗಸಿರಿ ಪ್ರಶಸ್ತಿ ಪ್ರದಾನ ಜೋತೆ ಸನ್ಮಾನಿಸಿ ಗೌರವಿಸಿ ನೆನಪಿನ ಕಾಣಿಕೆ ನೀಡಲಾಗುವುದು ಹಾಗೂ ಎರಡು ದಿನ ತ್ಯಾಗದ ತೊಟ್ಟಿಲು ಮತ್ತು ಅನುಮಾನ ತಂದ ಆಪತ್ತು ಉಚಿತ ನಾಟಕೋತ್ಸವ ಮತ್ತು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.
ಈ ಕಾರ್ಯಕ್ರಮಕ್ಕೆ ಸರ್ಕಾರದ ಸಚಿವರು ಶಾಸಕರು, ಮಠಾಧೀಶರು, ಕಲಾವಿದರು, ಆಗಮಿಸುತ್ತಿದ್ದು ಹೆಚ್ಚಿನ ಸಂಖ್ಯೆಯಲ್ಲಿ ಅಭಿಮಾನಿಗಳು ಆಗಮಿಸಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕು ಎಂದರು.
ಕಾಳಗಿ ತಾಲ್ಲೂಕಿನಿಂದ ಪ್ರಶಸ್ತಿಗೆ ಭಾಜನರಾದ ಕಲಾವಿದರು ವೀರಣ್ಣ ಗಂಗಾಣಿ, ರಂಗ ಸುವರ್ಣ ಪ್ರಶಸ್ತಿ 5 ಗ್ರಾಂ. ಚಿನ್ನ ದಂಪತಿಗಳಿಗೆ ಹೊದಿಕೆ, ಸಂತೋಷ ಖನ್ನಾ ರಂಗ ಸುವರ್ಣ ಪ್ರಶಸ್ತಿ 5 ಗ್ರಾಂ. ಚಿನ್ನ, ಬಾಬು ಗೋಪಾನ್ ಕಲಾ ಚಕ್ರವರ್ತಿ ಬಿರುದು ಪ್ರದಾನ, ವಿರೇಶ ಮಾನಕರ್ ರಂಗಶ್ರೀ ಪ್ರಶಸ್ತಿಗೆ ಭಾಜನ, ರಾಮರಾವ ಪಾಟೀಲ ಮೋಘಾ ವಿಶೇಷ ಸನ್ಮಾನ, ಒಟ್ಟಾರೆ 8 ಜನರಿಗೆ ರಂಗಶ್ರೀ ಪ್ರಶಸ್ತಿ ಜೋತೆ ವಿವಿಧ ರೀತಿಯಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಕವಿಗಳಾದ ಶಂಕರಜೀ ಹೂವಿನಹಿಪ್ಪರಗಿ, ಶಿವರಾಜ ಪಾಟೀಲ ಗೋಣಗಿ, ರಾಜಶೇಖರ, ರೇವಣಸಿದ್ದ ಚೇಂಗಟಾ, ವೀರಣ್ಣ ಗಂಗಾಣಿ, ಸಂತೋಷ ಖನ್ನಾ, ಚಂದ್ರಶೇಟ್ಟಿ, ಜಗದೀಶ, ಮಹೇಬೂಬ್ ಷಾ ಅನವಾರ ಇದ್ದರು.