Oplus_131072

ಕಾಳಗಿ ಅಂತಿಮ ವರ್ಷದ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭ, ಉತ್ತಮ ಶಿಕ್ಷಣ ಪಡೆದು ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಶಾಸಕ ಅವಿನಾಶ್ ಜಾಧವ ಕರೆ 

ನಾಗಾವಿ ಎಕ್ಸಪ್ರೆಸ್

ಕಾಳಗಿ: ವಿದ್ಯಾರ್ಥಿಗಳು ಉತ್ತಮ ಶಿಕ್ಷಣ ಪಡೆದು, ನಿರಂತರವಾಗಿ ಶ್ರದ್ದೆಯಿಂದ ಅಧ್ಯಾಯನ ಮಾಡಿ ಉತ್ತಮ ಭವಿಷ್ಯವನ್ನು ರೂಪಿಸಿಕೊಳ್ಳಬೇಕು ಎಂದು ಶಾಸಕ ಡಾ. ಅವಿನಾಶ್ ಜಾಧವ ಕರೆ ನೀಡಿದರು.

ಪಟ್ಟಣದ ಶ್ರೀ ಜಗದ್ಗುರು ರೇವಣಸಿದ್ದೇಶ್ವರ ಶ್ರೀಮತಿ ನಾಗರತ್ನಮ್ಮ ಶಿವಶರಣಪ್ಪ ಕಮಲಾಪೂರ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಹಮ್ಮಿಕೊಂಡ 2024-25 ನೇ ಸಾಲಿನ ಕ್ರೀಡಾ, ಸಾಂಸ್ಕೃತಿಕ, ಎನ್.ಎಸ್.ಎಸ್, ಆಂತರಿಕ ಗುಣಮಟ್ಟ ಭರವಸಾಕೋಶ (ಐಕ್ಯೂಎಸಿ), ಯುತ್ ರೆಡ್ ಕ್ರಾಸ್, ಸ್ಕೌಟ್ಸ್ ಆಂಡ ಗೈಡ್ಸ್, ಹಾಗೂ ಪ್ಲೆಸ್‌ಮೆಂಟ್ ಸೆಲ್ ಚಟುವಟಿಕೆಗಳ ಸಮಾರೋಪ ಹಾಗೂ ಬಿ.ಎ., ಬಿ.ಕಾಂ., ಬಿ.ಎಸ್ಸಿ ಅಂತಿಮ ವರ್ಷದ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಮಹಾವಿದ್ಯಾಲಯದಲ್ಲಿ ಸಾಂಸ್ಕೃತಿಕ ಚಟುವಟಿಕೆಗಳು ಹಾಗೂ ಸಭೆ, ಸಮಾರಂಭಗಳು ನಡೆಸಲು ಸುಸಜ್ಜಿತ ಅಡಿಟೋರಿಯಮ್ ನಿರ್ಮಾಣಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ಭರವಸೆ ನೀಡಿದರು.

ವಿಧಾನ ಪರಿಷತ್ ಸದಸ್ಯ ಜಗದೇವ ಗುತ್ತೇದಾರ ಮಾತನಾಡಿ, ವಿದ್ಯಾರ್ಥಿಗಳು ಮಹಾವಿದ್ಯಾಲಯದಲ್ಲಿ ಸಿಗುವಂತಹ ಸವಲತ್ತುಗಳನ್ನು ಉತ್ತಮ ರೀತಿಯಲ್ಲಿ ಬಳಸಿಕೊಂಡು ಉತ್ಕೃಷ್ಟವಾದ ಶಿಕ್ಷಣವನ್ನು ಪಡೆದುಕೊಳ್ಳಬೇಕು ಎಂದು ತಿಳಿಸಿದ ಅವರು, ಮಹಾ ವಿದ್ಯಾಲಯಕ್ಕೆ ಅಗತ್ಯವಿರುವ ಸೌಕರ್ಯಗಳನ್ನು ಕಲ್ಪಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ಭರವಸೆ ನೀಡಿದರು.

ಕಾಲೇಜು ಭೂದಾನಿ ಶಿವಶರಣಪ್ಪ ಕಮಲಾಪೂರ, ಪ್ರಾಚಾರ್ಯ ಪಂಡಿತ ಬೆಳಮಗಿ, ರಾಘವೇಂದ್ರ ಗುತ್ತೇದಾರ, ವಿಜಯಕುಮಾರ ಚೆಂಗಟಿ, ಪ್ರಶಾಂತ ಕದಮ್, ಜಗನ್ನಾಥ ಚಂದನಕೇರಿ, ರಾಜಕುಮಾರ ರಾಜಾಪೂರ, ಮಲ್ಲಿಕಾರ್ಜುನ ಡೊಣ್ಣೂರು, ಜಗನ್ನಾಥ ಮೊಘಾ, ಬಾಬು ನಾಟೀಕರ್, ಗುರುಪ್ರಕಾಶ ಹೂಗಾರ, ರಾಜೇಂದ್ರ ಕುಮಾರ ಕುಲಕರ್ಣಿ, ಡಾ. ಬಿ. ಆರ್. ಅಣ್ಣಾಸಾಗರ, ಚಿತ್ರಶೇಖರ ನಾಗೂರ, ಡಾ. ಸೈಯದ ಅನಿಸ ಫಾತಿಮಾ ಹಮೀದ, ಡಾ. ಶಾಂತಲಾ ಪಾಟೀಲ್, ಜಯಲಕ್ಷ್ಮೀ ಹಾವಪ್ಪಗೋಳ್, ಶ್ರೀನಿವಾಸ ನಾಯನೊರ್, ಜ್ಯೋತಿ ಕುಲಕರ್ಣಿ, ತಾಳಿಕೋಟೆ ಶರಣಬಸಪ್ಪ, ಮಾಧವಿ ಕುಲಕರ್ಣಿ, ಗೋಪಾಲಕೃಷ್ಣ ಭೀಮರಾವ್, ಸುಜಾತ ಮಾಕಲ್, ರೇವಣಸಿದ್ದ ಗುಂಡಿ, ಬೋದಕ-ಬೋದಕೇತರ ಸಿಬ್ಬಂದಿ ವರ್ಗ ಇತರರು ಇದ್ದರು.

ಸೌಜನ್ಯ ಪ್ರಾರ್ಥಿಸಿದರು. ಡಾ. ಶಿವಶರಣಪ್ಪ ಮೋತಕಪಳ್ಳಿ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು. ಡಾ. ಶಿವಲೀಲಾ ಚಟ್ನಳ್ಳಿ ನಿರೂಪಿಸಿದರು.

Spread the love

Leave a Reply

Your email address will not be published. Required fields are marked *

error: Content is protected !!