ಕಾಳಗಿ ಪಟ್ಟಣ ಪಂಚಾಯತ ವಾರ್ಡ್ ವಾರು ಮೀಸಲಾತಿ ಪ್ರಕಟ, ಗರಿಗೆದರಿದ ರಾಜಕೀಯ ಚಟುವಟಿಕೆ
ನಾಗಾವಿ ಎಕ್ಸಪ್ರೆಸ್
ಕಾಳಗಿ: ಪಟ್ಟಣ ಪಂಚಾಯತ 11 ವಾರ್ಡ್ ಗಳಿಗೆ ಮೀಸಲಾತಿ ನಿಗದಿಪಡಿಸಿ ನಗರಾಭಿವೃದ್ಧಿ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಟಿ.ಮಂಜುನಾಥ ಅಧಿಸೂಚನೆ ಹೊರಡಿಸಿದ್ದಾರೆ.
ವಾರ್ಡ್ -1(ಸಾಮನ್ಯ), ವಾರ್ಡ್ -2 ( ಸಾಮನ್ಯ), ವಾರ್ಡ್-3 (ಸಾಮನ್ಯ ಮಹಿಳೆ), ವಾರ್ಡ್-4 ( ಪರಿಶಿಷ್ಟ ಪಂಗಡ), ವಾರ್ಡ್-5 (ಸಾಮಾನ್ಯ), ವಾರ್ಡ್-6 (ಸಾಮಾನ್ಯ ಮಹಿಳೆ), ವಾರ್ಡ್-7 ( ಪರಿಶಿಷ್ಟ ಜಾತಿ), ವಾರ್ಡ್-8 (ಸಾಮಾನ್ಯ ಮಹಿಳೆ), ವಾರ್ಡ್-9 (ಪರಿಶಿಷ್ಟ ಜಾತಿ ಮಹಿಳೆ), ವಾರ್ಡ್-10 (ಪರಿಶಿಷ್ಟ ಜಾತಿ), ವಾರ್ಡ್-11 (ಪರಿಶಿಷ್ಟ ಜಾತಿ ಮಹಿಳೆ) ವರ್ಗಕ್ಕೆ ಮೀಸಲಾತಿ ಘೋಷಣೆಯಾಗಿದೆ.
ಗರಿಗೆದರಿದ ರಾಜಕೀಯ ಚಟುವಟಿಕೆ: ಈ ಮೊದಲು ಗ್ರಾಮ ಪಂಚಾಯಿತಿಯಾಗಿದ್ದ ಕಾಳಗಿ ನಂತರ ದಿನಗಳಲ್ಲಿ ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೆಗೇರಿತ್ತು, ಪಟ್ಟಣ ಪಂಚಾಯಿತಿ ಆದ ನಂತರ ಮೊದಲ ಚುನಾವಣೆಗೆ ಮೀಸಲಾತಿ ಪ್ರಕಟಗೊಂಡಿದೆ ಹೀಗಾಗಿ ಪಟ್ಟಣದಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿದ್ದು ಕಾಂಗ್ರೆಸ್ ಮತ್ತು ಬಿಜೆಪಿ ಗೆ ಇದು ಪ್ರತಿಷ್ಠೆಯ ಚುನಾವಣೆಯಾಗಿ ಮಾರ್ಪಟ್ಟಿದೆ.
ಇನ್ನೂ ಚುನಾವಣೆ ವೇಳಾಪಟ್ಟಿ ಘೋಷಣೆ ಆಗದಿದ್ದರೂ ಆಕಾಂಕ್ಷಿಗಳು ಮಾತ್ರ ಈಗಿನಿಂದಲೇ ಟಿಕೆಟ್ ಗಾಗಿ ತೆರೆಮರೆಯಲ್ಲಿ ವಿವಿಧ ರೀತಿಯ ಪ್ರಯತ್ನ ನಡೆಸಿದ್ದಾರೆ. ಬರುವ ದಿನಗಳಲ್ಲಿ ಈ ಚುನಾವಣೆ ಕಾವು ಯಾವ ರೂಪ ಪಡೆಯಲಿದೆ ಎಂಬುದು ಕಾದುನೋಡಬೇಕಿದೆ.