Oplus_131072

ಕಾಳಗಿಯಲ್ಲಿ ಡಾ.ಬಾಬು ಜಗಜೀವನರಾಮ್ ಅವರ ಜಯಂತಿ ಆಚರಣೆ, ಜಾತಿ ವ್ಯವಸ್ಥೆಯನ್ನು ತೊಡೆದುಹಾಕಿ ಸಮಾನತೆ ತರುವುದು ಬಾಬೂಜಿ ಅವರ ಮುಖ್ಯ ಉದ್ದೇಶವಾಗಿತ್ತು: ಕಟ್ಟಿಮನಿ 

ನಾಗಾವಿ ಎಕ್ಸ್‌ಪ್ರೆಸ್‌

ಕಾಳಗಿ: ಸಮಾಜದಲ್ಲಿನ ಅಸ್ಪೃಶ್ಯತೆ ಹಾಗೂ ಜಾತಿ ವ್ಯವಸ್ಥೆಯನ್ನು ತೊಡೆದುಹಾಕಿ ಎಲ್ಲರನ್ನು ಸಮಾನತೆ ತರುವುದು ಬಾಬೂಜಿ ಅವರ ಮುಖ್ಯ ಉದ್ದೇಶವಾಗಿತ್ತು ಎಂದು ಪಟ್ಟಣ ಪಂಚಾಯತ ಮಾಜಿ ಸದಸ್ಯ ಸೂರ್ಯಕಾಂತ ಕಟ್ಟಿಮನಿ ಹೇಳಿದರು.

ಪಟ್ಟಣ ಪಂಚಾಯತ ಕಾರ್ಯಾಲಯದಲ್ಲಿ ಶನಿವಾರ ಹಮ್ಮಿಕೊಂಡ ಡಾ. ಬಾಬು ಜಗಜೀವನ ರಾಮ್ ಅವರ 118 ನೇ ಜಯಂತ್ಯುತ್ಸವ ಕಾರ್ಯಕ್ರಮವನ್ನು ಉದ್ದೇಶಿಸಿ ಅವರು ಮಾತನಾಡಿದರು.

ಹಸಿರು ಕ್ರಾಂತಿ ಹರಿಕಾರ ಡಾ. ಬಾಬು ಜಗಜೀವನರಾಮ್ ಅವರು ದೇಶ ಕಂಡ ಅಪ್ರತಿಮ ನಾಯಕರಾಗಿದ್ದರು. ಕೃಷಿ, ರೇಷ್ಮೆ, ರಕ್ಷಣೆ, ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲಿ ಅಪಾರ ಕೊಡುಗೆ ನೀಡಿದ ಮಹಾನ ನಾಯಕರಾಗಿದ್ದಾರೆ. ಹಸಿರು ಕ್ರಾಂತಿ ರೂಪಿಸಿ ರೈತರನ್ನು ಆರ್ಥಿಕವಾಗಿ ಸ್ವಾವಲಂಬಿಯಾಗಿಸಿದರು. ಆಹಾರ ಉತ್ಪಾದನೆ ಹೆಚ್ಚಿಸಲು ಹೋರಾಟ ಮಾಡಿ ಯಶಸ್ವಿಯಾಗಿ ಹಸಿರು ಕ್ರಾಂತಿ ಹರಿಕಾರರಾದ ಇವರು, ಅಭಿವೃದ್ಧಿ ಹೊಂದುತ್ತಿರುವ ದೇಶಗಳ ಪಟ್ಟಿಗೆ ಭಾರತವನ್ನು ಸೇರಿಸುವಲ್ಲಿ ಇವರ ಪಾತ್ರ ಮಹತ್ವದ್ದಾಗಿದೆ, ಇಂತಹ ಮಹಾನ್ ನಾಯಕರ ಜೀವನ ಶೈಲಿ ಮತ್ತು ಆಡಳಿತ ವ್ಯವಸ್ಥೆಯನ್ನು ಇಂದಿನ ಯುವಕರು ಅಳವಡಿಸಿಕೊಳ್ಳುವ ಅಗತ್ಯವಿದೆ ಎಂದು ಹೇಳಿದರು.

ಪಟ್ಟಣ ಪಂಚಾಯತ ಮುಖ್ಯಧಿಕಾರಿ ಪಂಕಜಾ. ಎ ಮಾತನಾಡಿ, ಡಾ. ಬಾಬು ಜಗಜೀವನ ರಾಮ್ ಅವರು ತಮ್ಮ ಬದುಕಿನುದ್ದಕ್ಕೂ ಎಲ್ಲಾ ಕ್ಷೇತ್ರಗಳಿಗೆ ಅಪಾರ ಕೊಡುಗೆ ನೀಡಿದ ಮಹಾನ ನಾಯಕರಾಗಿದ್ದಾರೆ. ಸಾಮಾಜಿಕ ಸುಧಾರಣೆ, ಹಸಿರು ಕ್ರಾಂತಿ ಅಲ್ಲದೇ ಹಲವಾರು ಕ್ಷೇತ್ರಗಳ ಅಭಿವೃದ್ಧಿಯಲ್ಲಿ ತಮ್ಮ ಛಾಪನ್ನು ಮೂಡಿಸಿದ್ದಾರೆ ಎಂದು ಹೇಳಿದರು.

ಗ್ರಾ.ಪಂ ಮಾಜಿ ಅಧ್ಯಕ್ಷ ಪರಮೇಶ್ವರ ಮಡಿವಾಳ, ತೆಂಗಳಿ ಗ್ರಾಪಂ ಮಾಜಿ ಅಧ್ಯಕ್ಷ ಫಕೀರಯ್ಯ ಸ್ವಾಮಿ ಸ್ಥಾವರಮಠ, ಯುವ ಮುಖಂಡರಾದ ಮಂಜುನಾಥ ಹೆಬ್ಬಾಳ, ರಾಜೇಂದ್ರಬಾಬು ಹೀರಾಪೂರಕರ್, ಸಂತೋಷ ನರನಾಳ, ಪರಮೇಶ್ವರ ಕಟ್ಟಿಮನಿ, ಬಲರಾಮ ವಲ್ಯಾಪೂರೆ, ಮಲ್ಲಿಕಾರ್ಜುನ ಡೊಣ್ಣೂರು, ತಿಮ್ಮಯ್ಯ ಒಡೆಯರಾಜ, ಸಂಜುಕುಮಾರ ಮೊಘಾ, ಬಾಲಚಂದ್ರ ರಾಜಾಪೂರ, ಲಖನ ಮೋಘಾ, ಆನಂದ ಕಾಶಿ, ದತ್ತಾತ್ರೇಯ ಕಲಾಲ್, ರೇಣುಕಾದೇವಿ ಕಾಬಾ, ಗಂಗಾಂಬಿಕಾ ಹಿರೇಮಠ, ರಾಧಿಕಾ ಕುಂಬಾರ, ಸಾವಿತ್ರಮ್ಮ ಒಡೆಯರ್, ಕಾಳೇಶ್ವರ ಮಡಿವಾಳ, ಉದಯಕುಮಾರ ಸಿಂಗಶೆಟ್ಟಿ, ಅನೀಲಕುಮಾರ ಜಾಧವ್, ಆಕಾಶ ರಾಠೋಡ, ಫಾತೀಮಾ ಬೇಗಂ ಸೇರಿದಂತೆ ಇತರರು ಇದ್ದರು.

Spread the love

Leave a Reply

Your email address will not be published. Required fields are marked *

error: Content is protected !!