Oplus_0

ಕಾಳಗಿಯಲ್ಲಿ ವಿದ್ಯಾರ್ಥಿಗಳ ಸ್ವಾಗತ, ಬೀಳ್ಕೊಡುಗೆ ಸಮಾರಂಭ

ವಿದ್ಯಾರ್ಥಿಗಳು ಮೊಬೈಲ್, ಟಿವಿಯಿಂದ ದೂರವಿರಿ: ಬೆಳಗುಂಪಾ ಶ್ರೀ

ನಾಗಾವಿ ಎಕ್ಸಪ್ರೆಸ್

ಕಾಳಗಿ : ಕಲಿಕಾ ಸಮಯದಲ್ಲಿ ಮೊಬೈಲ್‌, ಟಿವಿ ಬಳಕೆ ಅಪಾಯಕಾರಿ. ಅದು ವಿದ್ಯಾರ್ಥಿಗಳ ಸಾಧನೆಯ ಹಾದಿಗೆ ತೊಡಕುಂಟು ಮಾಡುತ್ತದೆ. ಹೀಗಾಗಿ ವಿದ್ಯಾರ್ಥಿಗಳು ಮೊಬೈಲ್‌ ಹಾಗೂ ಟಿವಿಯಿಂದ ದೂರವಿರಬೇಕು ಎಂದು ಬೆಳಗುಂಪಾ ಬ್ರಹನ್ಮಠದ ಶ್ರೀ ಅಭಿವನ ಪರ್ವತೇಶ್ವರ ಶಿವಾಚಾರ್ಯರು ಆಶಿರ್ವಚನ ನೀಡಿದರು.

ಪಟ್ಟಣದ ಕಾಳೇಶ್ವರ ಪದವಿ ಮಹಾವಿದ್ಯಾಲಯದ ಆವರಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಅಂತಿಮ ವರ್ಷದ ಪದವಿ ವಿದ್ಯಾರ್ಥಿಗಳ‌ ಬೀಳ್ಕೊಡುಗೆ ಹಾಗೂ ಜೆ.ಎಸ್.ಬಸವೇಶ್ವರ ಪದವಿ ಪೂರ್ವ ಕಾಲೇಜಿನ ಪ್ರಥಮ ವರ್ಷದ ವಿದ್ಯಾರ್ಥಿಗಳ ಸ್ವಾಗತ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ಜೀವನದಲ್ಲಿ ಯಶಸ್ವಿ ವ್ಯಕ್ತಿಯಾಗಲು ಪುಸ್ತಕ ಜ್ಞಾನವಷ್ಟೇ ಸಾಲದು, ಮಸ್ತಕ ಜ್ಞಾನವೂ ಬೇಕು. ತರಗತಿಯಲ್ಲಿ ಪಡೆದ ಜ್ಞಾನದೊಂದಿಗೆ ಲೋಕ ಜ್ಞಾನವೂ ಬೇಕು. ವಿಷಯ ಜ್ಞಾನದೊಂದಿಗೆ ವ್ಯವಹಾರ ಜ್ಞಾನವಿದ್ದರೆ ಯಶಸ್ಸು ಗಳಿಸಬಹುದು ಎಂದು ಹೇಳಿದರು.

ನಿವೃತ್ತ ಅಬಕಾರಿ ಪಿಎಸ್ಐ ಬಾಲಕೃಷ್ಣ ಮುದಕಣ್ಣ  ಮಾತನಾಡಿ, ವಿದ್ಯಾರ್ಥಿ ಜೀವನ ಬಂಗಾರದ ಜೀವನ ಇದ್ದಂತೆ, ತಂದೆ ತಾಯಿ ಕಷ್ಟಪಟ್ಟು ಶಿಕ್ಷಣ ಕೊಡಿಸುತ್ತಾರೆ ಅವರು ನಿಮ್ಮ ಮೇಲೆ ಇಟ್ಟಂತ ವಿಶ್ವಾಸ ಮತ್ತು ನಂಬಿಕೆಗೆ ಯಾವತ್ತೂ ದ್ರೋಹ ತರುವ ಕೆಲಸ ಮಾಡಬೇಡಿ ಎಂದು ಹೇಳಿದರು.

ಪತ್ರಕರ್ತ‌ ಕಾಶಿನಾಥ ಗುತ್ತೇದಾರ ಮಾತನಾಡಿ, ಸಿನೇಮಾಗಳು ಬರೀ ಮನೋರಂಜನೆಗಾಗಿ ಅಷ್ಟೇ ಅದೇ ಜೀವನವಲ್ಲ, ಸಿನೇಮಾ ನೋಡಿ ಅದರಂತೆ ಹೊರಗಡೆ ಮಾಡಬೇಡಿ ಎಂದು ಕಿವಿಮಾತು ಹೇಳಿದರು. ವಿದ್ಯಾರ್ಥಿಗಳು ಮೊದಲು ತಮ್ಮ ಮನಸ್ಥಿತಿ ಬದಲಾಯಿಸಿಕೊಳ್ಳಿ, ಸಂಕುಚಿತ ಮನೋಭಾವದಿಂದ ಹೊರಬನ್ನಿ, ಜೀವನದಲ್ಲಿ ಯಾರು ಏನೇ ಅಂದರೂ ಮನಸ್ಸಿಗೆ ಹಚ್ಚಿಕೊಳ್ಳಬೇಡಿ, ಅವಮಾನ ಮಾಡಿದವರಿಂದಲೇ ಸನ್ಮಾನಕ್ಕೆ ಮತ್ತು ತಿರಸ್ಕರಿಸಿದವರಿಂದಲೇ ಪುರಸ್ಕಾರಕ್ಕೆ ಪಾತ್ರರಾಗಬೇಕು ಆ ನಿಟ್ಟಿನಲ್ಲಿ ಬೆಳೆಯಬೇಕು ಎಂದು ಸಲಹೆ ನೀಡಿದರು.

ಉಪನ್ಯಾಸಕ ಅಮರನಾಥ ಶಿವಮೂರ್ತಿ, ನಿವೃತ್ತ ಶಿಕ್ಷಕ ಗುಡುಸಾಬ್ ಕಮಲಾಪೂರ, ಮುಖ್ಯಗುರು ರಮೇಶ ನಾಮದಾರ ಮಾತನಾಡಿದರು. ಯುವ ಮುಖಂಡ ನೀಲಕಂಠ ಗುತ್ತೇದಾರ, ಸಂಸ್ಥೆ ಸಂಸ್ಥಾಪಕ ಅಧ್ಯಕ್ಷ ಸಂಗಪ್ಪ ಅರಣಕಲ್, ಉದ್ಯಮಿ ವಿಶ್ವನಾಥ ವನಮಾಲಿ, ಮುಖ್ಯಗುರು ವಿರೂಪಾಕ್ಷಯ್ಯ ಹಿರೇಮಠ, ಉಪನ್ಯಾಸಕರಾದ ಸಂತೋಷ ಕೊಂಡಪಳ್ಳಿ, ಶರಣು ಪಾಟೀಲ, ರಾಜಶೇಖರ ಪಾಟೀಲ, ಖಾಸಿಂ ಅಲಿ, ಡಾ. ಮೀರಾಬಾಯಿ ಡಿ.ಕೆ, ಸಪ್ನಾ ಮುಕರಂಬಿ, ಜ್ಯೋತಿ ಚಿಂಚೋಳಿ, ಶರಣಮ್ಮ ಹೂಗಾರ, ಗುಂಡಮ್ಮ ಕೊರವಾರ, ಈರಮ್ಮ ಮೋಘಾ ಸೇರಿದಂತೆ ವಿದ್ಯಾರ್ಥಿಗಳು ಇದ್ದರು.

ಕಾಲೇಜಿನ ಪಾಚಾರ್ಯ ಅಂಬದಾಸ ಮದನೆ ಪ್ರಾಸ್ತಾವಿಕವಾಗಿ ಮಾತನಾಡಿದರು, ವಿದ್ಯಾರ್ಥಿನಿ ರೋಹಿಣಿ ಸ್ವಾಗತಿಸಿದರು, ನೀಖಿತಾ ಮತ್ತು ಸುರೇಖಾ ನಿರೂಪಿಸಿದರು, ಸೃಷ್ಟಿ ವಂದಿಸಿದರು. ನಂತರ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.

Spread the love

Leave a Reply

Your email address will not be published. Required fields are marked *

You missed

error: Content is protected !!