Oplus_0

ಕಾಳಗಿ ತಾಲೂಕಿನ ವಿವಿಧ ಗ್ರಾಮಗಳಿಗೆ ಜಿಪಂ ಸಿಇಒ ಭಂವಾರಸಿಂಗ್ ಮೀನಾ ಭೇಟಿ

ನಾಗಾವಿ ಎಕ್ಸಪ್ರೆಸ್

ಕಾಳಗಿ: ತಾಲೂಕಿನ ವಿವಿಧ ಗ್ರಾಮಗಳಿಗೆ ಕಲಬುರ್ಗಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಭಂವಾರಸಿಂಗ್ ಮೀನಾ ಗುರುವಾರ ದಿಢೀರನೆ ಭೇಟಿ ಮಾಡಿದರು.

ಮಾಡಬೂಳ ಗ್ರಾಮಕ್ಕೆ ಭೇಟಿ ನೀಡಿದ ಸಿಇಒ ಅರಿವು ಕೇಂದ್ರ ವಿಕ್ಷಣೆ ಮಾಡಿದರು. ನಂತರ ಗೋಟೂರ ಗ್ರಾಮದಲ್ಲಿ ಆಟದ ಮೈದಾನ, ಪುಸ್ತಕದ ಗೂಡು, ಕುಸಿನ ಮನೆ ಹಾಗೂ ರಟಕಲ್ ಗ್ರಾಮದಲ್ಲಿ ಸ್ವಚ್ಛ ಭಾರತ ಕಸ ಸಂಗ್ರಹ ಘಟಕ ವಿಕ್ಷೀಸಿದರು.‌ ಮನೆ ಮನೆಯಿಂದ ಸಂಗ್ರಹಿಸಿದ ಕಸವನ್ನು ವಿಂಗಡಿಸಿ ಮಾರಾಟ ಮಾಡಿ ಆದಾಯ ಸಂಗ್ರಹಿಸುತ್ತಿರುವ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು. ಮತ್ತು ಕೋರವಾರ ಗ್ರಾಮದಲ್ಲಿ ತೆರಿಗೆ ಸಂಗ್ರಹ ಪರೀಶೀಲನೆ ಮಾಡಿದರು.

ಈ ಸಂದರ್ಭದಲ್ಲಿ ಕಾಳಗಿ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಡಾ.ಬಸಲಿಂಗಪ್ಪ ಡಿಗ್ಗಿ ಸೇರಿದಂತೆ ಇತರೆ ಅಧಿಕಾರಿಗಳು ಉಪಸ್ಥಿತರಿದ್ದರು.

Spread the love

Leave a Reply

Your email address will not be published. Required fields are marked *

error: Content is protected !!