ಚಿತ್ತಾಪುರ ಕಂಬಳೇಶ್ವರ ಶ್ರೀಗಳ 58 ನೇ ಹುಟ್ಟು ಹಬ್ಬದ ನಿಮಿತ್ತ ಉಚಿತ ಕಣ್ಣಿನ ತಪಾಸಣಾ ಶಿಬಿರ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ಪಟ್ಟಣದ ಕಂಬಳೇಶ್ವರ ಸಂಸ್ಥಾನ ಮಠದ ಪೀಠಾಧಿಪತಿ ಶ್ರೀ ಸೋಮಶೇಖರ ಶಿವಾಚಾರ್ಯರು ಅವರ 58 ನೇ ಹುಟ್ಟು ಹಬ್ಬದ ಅಂಗವಾಗಿ ಬರುವ ಏಪ್ರಿಲ್ 4 ರಂದು ಧಾರ್ಮಿಕ ಕಾರ್ಯಕ್ರಮ ಮತ್ತು ಮಠದ ಭಕ್ತವೃಂದ ಹಾಗೂ ಕಲಬುರಗಿಯ ಅನುಗ್ರಹ ಆಸ್ಪತ್ರೆ ಸಹಯೋಗದಲ್ಲಿ ಮಠದ ಆವರಣದಲ್ಲಿ ಉಚಿತ ಕಣ್ಣಿನ ತಪಾಸಣಾ ಶಿಬಿರ ಹಮ್ಮಿಕೊಳ್ಳಲಾಗಿದೆ ಎಂದು ಮಠದ ಭಕ್ತ ಮಲ್ಲು ಇಂದೂರ ತಿಳಿಸಿದ್ದಾರೆ.
ಕಂಬಳೇಶ್ವರ ಮಠದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಂಬಳೇಶ್ವರ ಮಠವು ಸಾವಿರಾರು ಭಕ್ತಸಮೂಹ ಹೊಂದಿದೆ. ಮಠದ ಶ್ರೀಗಳಾದ ಸೋಮಶೇಖರ ಶಿವಾಚಾರ್ಯರು ಅನೇಕ ಸಮಾಜ ಮುಖಿಯಾಗಿ ಸಾಮಾಜಿಕ ಹಾಗೂ ಧಾರ್ಮಿಕ ಕಾರ್ಯಗಳನ್ನು ಮಾಡುತ್ತಾ ಜನಾನುರಾಗಿಯಾಗಿದ್ದಾರೆ ಈ ಬಾರಿ ಶ್ರೀಗಳ ಹುಟ್ಟು ಹಬ್ಬವನ್ನು ವಿಶಿಷ್ಟವಾಗಿ ಭಕ್ತ ಸಮೂಹ ಆಚರಿಸಲು ನಿರ್ಧರಿಸಲಾಗಿದೆ ಎಂದು ಹೇಳಿದರು.
ಅಂದು ಬೆಳಿಗ್ಗೆ 10 ಗಂಟೆಗೆ ನಡೆಯುವ ಧಾರ್ಮಿಕ ಕಾರ್ಯಕ್ರಮಕ್ಕೆ ವಿವಿಧ ಮಠಾಧೀಶರು, ಸಮಾಜದ ಗಣ್ಯ ಮಾನ್ಯರು, ರಾಜಕೀಯ ಮುಖಂಡರ ಶಿಬಿರಕ್ಕೆ ಚಾಲನೆ ನೀಡಲಿದ್ದಾರೆ. ಬೆಳಿಗ್ಗೆ 10.30 ರಿಂದ 4.30 ರ ವರೆಗೆ ಕಣ್ಣಿನ ಶಿಬಿರ ನಡೆಯಲಿದ್ದು ತಾಲೂಕಿನ ಜನರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸೌಲಭ್ಯವನ್ನು ಪಡೆದುಕೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ನಂಬರ್ ಗಳಿಗೆ ಸಂಪರ್ಕಿಸಲು ಕೋರಲಾಗಿದೆ. 9448464645, 8197117777, 9243214444, 9743270344.
ಸುದ್ದಿಗೊಷ್ಠಿಯಲ್ಲಿ ಮುಖಂಡರಾದ ನಿಹಾಲ್ ಪಾಟೀಲ್, ನಾಗರಾಜ ರೇಷ್ಮಿ, ಪ್ರಸಾದ್ ಅವಂಟಿ, ಜಗದೇವ ದಿಗ್ಗಾಂವಕರ್, ಅನೀಲಕುಮಾರ ಸುಲ್ತಾನಪುರ, ಕರಿಬಸವಯ್ಯ ಹಿರೇಮಠ, ಶಿವಶರಣಯ್ಯ ಸ್ವಾಮಿ ಇದ್ದರು.