ಕನಗನಹಳ್ಳಿಯಲ್ಲಿ ಬುದ್ಧ ಜಯಂತಿ ಆಚರಣೆ, ಪಂಚಶೀಲ ಪಾದಯಾತ್ರೆಯ ಫಲವಾಗಿ ಸರ್ಕಾರ ಭಗವಾನ್ ಬುದ್ಧರ ಜಯಂತಿ ಆಚರಣೆಗೆ ಆದೇಶ: ರಣಧೀರ ಹೊಸಮನಿ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ಬುದ್ಧ ಪೌರ್ಣಿಮೆಯ ದಿನವನ್ನು ಆಚರಣೆ ಮಾಡಬೇಕು ಮತ್ತು ಪ್ರಾಧಿಕಾರ ರಚನೆ ಮಾಡಬೇಕು ಒತ್ತಾಯಿಸಿ ಸನ್ನತಿ ಯಿಂದ ಬೆಂಗಳೂರು ವರೆಗೆ 900 ಕಿ.ಮೀ ಕೈಗೊಂಡ ಪಂಚಶೀಲ ಪಾದಯಾತ್ರೆಯ ಫಲವಾಗಿ ರಾಜ್ಯ ಸರ್ಕಾರ ಭಗವಾನ್ ಬುದ್ಧರ ಜಯಂತಿ ಆಚರಣೆಗೆ ಆದೇಶ ಮಾಡಿದೆ ಎಂದುಪಾಲಿ ಶಿಕ್ಷಕ ರಣಧೀರ ಹೊಸಮನಿ ಹೇಳಿದರು.
ತಾಲೂಕಿನ ಐತಿಹಾಸಿಕ ಕನಗನಹಳ್ಳಿಯ ಬುದ್ದ ಮಂದಿರದಲ್ಲಿ ಹಮ್ಮಿಕೊಂಡಿದ್ದ 2569ನೇ ಬುದ್ಧ ಪೌರ್ಣಮಿಯ ನಿಮಿತ್ತ ಭಗವಾನ್ ಬುದ್ಧರ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು,
ಬುದ್ಧ ಜಯಂತಿ ಆಚರಣೆ ಹಾಗೂ ಬೌದ್ಧ ಅಭಿವೃದ್ಧಿ ಪ್ರಾಧಿಕಾರ ರಚನೆ ಮಾಡಲು ಸರ್ಕಾರ ಆದೇಶ ಹೊರಡಿಸಿದೆ ಇದರ ಸಂಪೂರ್ಣ ಶ್ರೇಯಸ್ಸು ಪಂಚಶೀಲ ಪಾದಯಾತ್ರೆಯನ್ನು ಕೈಗೊಂಡ ಬಂತೇಜಿ ಬೋಧಿದತ್ತ ಥೇರೋ ರವರಿಗೆ ಮತ್ತು ಅವರ ಜೊತೆ ಪಾದಯಾತ್ರೆಯಲ್ಲಿ ಭಾಗವಹಿಸಿದ ಬಿಕ್ಕು ಸಂಘಕ್ಕೆ ಸಲ್ಲುತ್ತದೆ ಎಂದು ಹೇಳಿದರು.
ಯಾರೂ ಕೂಡ ಈ ಪಂಚಶೀಲ ಪಾದಯಾತ್ರೆಯ ಹೋರಾಟವನ್ನು ಯಾರೂ ಮುರಿಯಬಾರದು, ಪಾದಯಾತ್ರೆ ಅಂದ್ರೆ ಸಾಮಾನ್ಯ ಮಾತಲ್ಲ ಪಾದಯಾತ್ರೆ ಸರ್ಕಾರದ ಗಮನ ಸೆಳೆದಿತ್ತು ಹೀಗಾಗಿ ಸರ್ಕಾರ ಸ್ಪಂದಿಸಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ವಿಷ್ಣುಕಾಂತ್ ಹುಡುಗಿಕರ್, ಮರಲಿಂಗ್ ಹೊಸಮನಿ, ಬಸವರಾಜ್ ದೊಡ್ಡಮನಿ, ಮಹೇಶ್ ಬನ್ನಟ್ಟಿ, ಬಾಂಧವ್ಯ ಹೊಸಮನಿ, ನರಸಿಂಹ ಕೋಲಾರ, ದೇವೇಂದ್ರಪ್ಪ ಹೊಸಮನಿ, ಸೀಮಾ ಸೇರಿದಂತೆ ಇತರರು ಇದ್ದರು.