ಕರದಾಳ ಗ್ರಾಮದಲ್ಲಿ ನಾಗಾವಿ ಯಲ್ಲಮ್ಮ, ಬೀರಲಿಂಗ, ಮಾಳಿಂಗರಾಯ ದೇವಸ್ಥಾನಗಳ ಉದ್ಘಾಟನೆ, ಹಾಲುಮತ ಸಮಾಜದ ಕೊಡುಗೆ ಅಪಾರ: ಕಂಬಳೇಶ್ವರ ಶ್ರೀ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ರಾಜ್ಯಕ್ಕೆ ಹಾಲುಮತ ಸಮಾಜದ ಕೊಡುಗೆ ಅಪಾರವಾಗಿದೆ ಎಂದು ಕಂಬಳೇಶ್ವರ ಶ್ರೀ ಸೋಮಶೇಖರ ಶಿವಾಚಾರ್ಯರು ಹೇಳಿದರು.
ತಾಲೂಕಿನ ಕರದಾಳ ಗ್ರಾಮದಲ್ಲಿ ಶ್ರೀ ನಾಗಾವಿ ಯಲ್ಲಮ್ಮ ದೇವಸ್ಥಾನ, ಬೀರಲಿಂಗ ಮತ್ತು ಮಾಳಿಂಗರಾಯ ಮೂರ್ತಿ ಪ್ರತಿಷ್ಠಾಪನೆ ಹಾಗೂ ದೆವಸ್ಥಾನಗಳ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು, ದಾಸ ಶ್ರೇಷ್ಠ ಕನಕದಾಸರರು, ಬೀರಲಿಂಗ, ಮಾಳಿಂಗರಾಯ, ಸಜ್ಜಲಗುಡ್ಡದ ಶರಣಮ್ಮ ತಾಯಿ, ಮುಗುಳಖೋಡ ಯಲ್ಲಾಲಿಂಗ ಮಹಾರಾಜ್ ಸೇರಿದಂತೆ ಅನೇಕರು ಹಾಲುಮತ ಮುತ್ತು ರತ್ನಗಳಿದ್ದಂತೆ ಎಂದರು. ಇಲ್ಲಿ ಯಲ್ಲಾಲಿಂಗ ಮಹಾರಾಜ್ ಅವರು 365 ಮಠಗಳು ಸ್ಥಾಪಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ ಎಂದು ಹೇಳಿದರು.
ಮಾಳಿಂಗರಾಯ ಹುಲಿ ಜಯಂತಿ ಮಾಡಿದ ಏಕೈಕ ಮಹಾಪುರುಷರಾಗಿದ್ದಾರೆ. ಹಾಲು ಎಷ್ಟು ಶುದ್ಧ ಮತ್ತು ಪವಿತ್ರವಾಗಿದೆ ಅಷ್ಟೇ ಹಾಲುಮತದವರು ಸ್ವಚ್ಛ ಮನಸ್ಸಿನವರಾಗಿದ್ದಾರೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು.
ಅಳ್ಳೋಳ್ಳಿ ಸಾವಿರ ದೇವರ ಮಠದ ಶ್ರೀ ಸಂಗಮನಾಥ ಮಹಾಸ್ವಾಮಿಗಳು ಮಾತನಾಡಿ, ಕನ್ನಡ ಭಾಷೆ ಮತ್ತು ಸಾಹಿತ್ಯಕ್ಕೆ ದಾಸರ ಕೊಡುಗೆ ಅಪಾರ. ದಾಸ ಸಾಹಿತ್ಯಕ್ಕೆ ಮಹತ್ವ ಬಂದಿದ್ದೇ ಸಂತ ಕನಕದಾಸರಿಂದ ಹೀಗಾಗಿ ಹಾಲುಮತ ಸಮಾಜ ಶ್ರೇಷ್ಠ ಸಮಾಜವಾಗಿದೆ ಎಂದು ಹೇಳಿದರು.
ಗ್ರಾಪಂ ಮಾಜಿ ಅಧ್ಯಕ್ಷ ಅಯ್ಯಣ್ಣಗೌಡ ಕರದಾಳ ಮಾತನಾಡಿ, ಕರದಾಳ ಗ್ರಾಮದಲ್ಲಿ ಎಲ್ಲಾ ಜಾತಿ ಜನಾಂಗದವರು ಸಹೋದರ ಮನೋಭಾವದಿಂದ ಎಲ್ಲರೂ ಒಗ್ಗೂಡಿ ಕಾರ್ಯಕ್ರಮಗಳು ಮಾಡುತ್ತಾರೆ ಹೀಗಾಗಿ ಯಾವುದೇ ಕಾರ್ಯಕ್ರಮಗಳು ಇರಲಿ ಯಶಸ್ವಿಯಾಗುತ್ತವೆ ಎಂದು ಹೇಳಿದರು.
ದಂಡಗುಂಡ ಶ್ರೀ ಸಂಗನಬಸವ ಶಿವಾಚಾರ್ಯರು, ಅಳ್ಳೋಳ್ಳಿ ಗದ್ದುಗೆ ಮಠದ ಶ್ರೀ ನಾಗಪ್ಪಯ್ಯ ಮಹಾಸ್ವಾಮಿಗಳು, ತೊಟ್ನಳ್ಳಿ ಶ್ರೀ ತ್ರಿಮೂರ್ತಿ ಶಿವಾಚಾರ್ಯರು, ಕುಲಗುರು ಸಿದ್ದಯ್ಯ ಒಡೆಯರ್, ಹುಲಿಜೆಂತಿ ಮಠದ ಮಾಳಿಂಗರಾಯ ತಾತಾ, ದನ್ನಶೆಟ್ಟಪ್ಪ ಇಟಗಿ, ಶಶಿಧರ್ ರೆಡ್ಡಿ ದೇಶಮುಖ್, ಶಿವಲಿಂಗಯ್ಯ ಸ್ವಾಮಿ ಮಠಪತಿ, ವೇದಮೂರ್ತಿ ಶಿವಲಿಂಗ, ಚಂದ್ರಕಾಂತ, ಚಂದ್ರಾಮಪ್ಪ ಮಾಪಕ್, ಈರಣ್ಣ ಹೂಗಾರ, ಸಣ್ಣ ಕಾಶಣ್ಣ ಗುತ್ತೇದಾರ, ಗುರಣ್ಣ ಪರೊಡಿ, ಸಿದ್ರಾಮಪ್ಪ ಪೊಲೀಸ್ ಪಾಟೀಲ, ಭೀಮರಾಯ ಹೊಡಪಟ್ಟಿ, ಸಿದ್ದಣ್ಣ ಕೊಟಗೊಂಡಿ, ಬಸವರಾಜ ಪರೊಡಿ, ಬಸವರಾಜ ಪೂಜಾರಿ, ಭೀಮರಾಯ ಕರದಾಳ ಸೇರಿದಂತೆ ಇತರರು ಇದ್ದರು. ಸಿದ್ದಣ್ಣ ಕೊಟ್ರಕಿ ನಿರೂಪಿಸಿದರು. ಕಾರ್ಯಕ್ರಮದ ಮುನ್ನ ಗ್ರಾಮದ ಪ್ರಮುಖ ಬೀದಿಗಳಲ್ಲಿ ಪಲ್ಲಕ್ಕಿ ಮೆರವಣಿಗೆ ನಡೆಯಿತು.