ಕರದಾಳ ಕೆರೆಯ ಮಲೀನಕ್ಕೆ ಕಾರಣವಾದ ಹಣಿಕೇರಾ ಮಹಿಳಾ ಮೀನುಗಾರರ ಸಹಕಾರ ಸಂಘದ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಕರದಾಳ ಗ್ರಾಪಂ ಅಧ್ಯಕ್ಷರು ಆಗ್ರಹ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ತಾಲೂಕಿನ ಕರದಾಳ ಗ್ರಾಮದ ಕೆರೆಯಲ್ಲಿ ಹಕ್ಕಿ ಜ್ವರ ಬಂದು ಸತ್ತಿರುವ ಕೊಳಿಗಳನ್ನು ತಂದು ಮೀನಿಗೆ ಆಹಾರವನ್ನಾಗಿ ನೀಡುತ್ತಿದ್ದಾರೆ ಮತ್ತು ದಿನನಿತ್ಯವಾಗಿ ಚಿಕ್ಕನ್ ಅಂಗಡಿಗಳಿಂದ ತ್ಯಾಜ್ಯವನ್ನು ತಂದು ಕೆರೆಯಲ್ಲಿ ಹಾಕುತ್ತಿದ್ದಾರೆ ಇದರಿಂದ ಸುತ್ತಮುತ್ತಲಿನ ಗ್ರಾಮಗಳಾದ ಅಳ್ಳೋಳ್ಳಿ, ಹಣಿಕೇರಾ, ರಾಮನಾಯಕ ತಾಂಡಾ, ಜೈರಾಮ ತಾಂಡಾ, ಬೋಜನಾಯಕ ತಾಂಡಾ ಹಾಗೂ ಕರದಾಳ ಮತ್ತು ಬೋಮ್ಮನಳ್ಳಿ ಊರಿನ ದನ ಕರುಗಳಿಗೆ ಮತ್ತು ಜನ ಸಾಮಾನ್ಯರಿಗೆ ಕುಡಿಯಲು ಮತ್ತು ಬಳಕೆಗೆ ಬಾರದಂತೆ ಕೆರೆಯ ನೀರನ್ನು ಸಂಪೂರ್ಣವಾಗಿ ಮಲೀನಗೊಳಿಸಿದ್ದ ಮಹಿಳಾ ಮೀನುಗಾರರ ಸಹಕಾರ ಸಂಘ (ನಿ) ಹಣಿಕೇರಾ ಕೇಂದ್ರ ಸ್ಥಾನ ವಾಡಿ ಇವರ ಮೇಲೆ ತನಿಖೆ ಮಾಡಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮುಮ್ತಾಜ್ ಬೇಗಂ ಮೋದಿನಸಾಬ್, ಮಾಜಿ ಅಧ್ಯಕ್ಷ ಮಲ್ಲಣ್ಣ ಕ್ವಾಟಗುಂಡಿ ಸೇರಿದಂತೆ ಹನ್ನೊಂದು ಜನ ಸಹಿ ಮಾಡಿದ ಮನವಿ ಪತ್ರವನ್ನು ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಸಲ್ಲಿಸಿದ್ದಾರೆ.
ಈ ಕೆರೆಯ ನೀರನ್ನು ರೈತರು ತಮ್ಮ ಜಮೀನಿಗೆ ಬಳಸದಂತೆ ತಾಕೀತು ಮಾಡಿದ್ದಾರೆ. ಮೀನುಗಳ ತ್ವರಿತವಾಗಿ ಬೆಳವಣಿಗೆಯಾಗಲು ರಾಸಾಯನಿಕ ಪದಾರ್ಥಗಳನ್ನು ಬಳಕೆ ಮಾಡುತ್ತಿದ್ದಾರೆ. ಈಗ ಬೇಸಿಗೆ ಕಾಲ ಆಗಿರುವುದರಿಂದ ನೀರಿನ ಸಮಸ್ಯೆ ವಿಪರೀತವಾಗಿದೆ ಸುತ್ತ ಮುತ್ತಲಿನ ಗ್ರಾಮಸ್ಥರಿಗೆ ಕರೆಯೇ ಆಧಾರವಾಗಿದೆ ಹೀಗಾಗಿ ಕೆರೆಯ ಸಂರಕ್ಷಣೆ ಮಾಡುವ ನಿಟ್ಟಿನಲ್ಲಿ ಸಂಘದ ವಿರುದ್ಧ ತನಿಖೆ ಕೈಗೊಂಡು ತಕ್ಷಣವೆ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದ್ದಾರೆ.