ಅಂಬೇಡ್ಕರ್ ಅವರಿಗೆ ಅಗೌರವ ತೋರಿದ ಕೇಂದ್ರ ಸಚಿವ ಅಮೀತ್ ಶಾ ಸಚಿವ ಸ್ಥಾನದಿಂದ ವಜಾಗೊಳಿಸಲು ಎನ್.ಎಸ್.ಯು.ಐ ಒತ್ತಾಯ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ವಿಶ್ವಮಾನವ ಭಾರತ ರತ್ನ, ಸಂವಿಧಾನ ಶಿಲ್ಪಿ ಡಾ. ಬಿ.ಆರ್ ಅಂಬೇಡ್ಕರ್ ಅವರಿಗೆ ಅಗೌರವ ತೋರಿ ಸದನದಲ್ಲಿ ಹಗುರವಾಗಿ ಮಾತನಾಡಿರುವ ಕೇಂದ್ರ ಗೃಹ ಸಚಿವ ಅಮೀತ್ ಶಾ ಅವರನ್ನು ಸಚಿವ ಸಂಪುಟದಿಂದ ವಜಾ ಮಾಡಬೇಕು ಎಂದು ಎನ್.ಎಸ್.ಯು.ಐ ತಾಲೂಕು ಉಪಾಧ್ಯಕ್ಷ ಅರ್ಜುನ್ ಕಟ್ಟಿಮನಿ ಆಗ್ರಹಿಸಿದ್ದಾರೆ.
ಅಂಬೇಡ್ಕರ್ ಬಗ್ಗೆ ಹಗುರವಾಗಿ ಮಾತನಾಡಿದ ಶಾ ಸದನದಲ್ಲಿರುವುದು ಯಾವುದೇ ನೈತಿಕತೆ ಇಲ್ಲ. ಇಡೀ ಮಾನವ ಕುಲಕ್ಕೆ ನ್ಯಾಯ ಕೊಟ್ಟಿರುವ ಮಹಾ ಮಾನವತಾವಾದಿ ಒಂದು ವೇಳೆ ಡಾ. ಭೀಮರಾವ್ ಅಂಬೇಡ್ಕರ್ ಅವರು ಭಾರತ ದೇಶದಲ್ಲಿ ಹುಟ್ಟದಿದ್ದರೆ ನಮ್ಮಂತ ಶ್ರಮ ಜೀವಿಗಳಿಗೆ ದೀನ ದಲಿತರ ಗತಿ ಏನಾಗುತ್ತಿತ್ತು ಇವತ್ತು ಸರ್ವರಿಗೂ ಸಮಪಾಲು ಸರ್ವರಿಗೂ ಸಮಬಾಳು ಕೊಟ್ಟಿರುವ ಸಂವಿಧಾನವನ್ನು ರಚಿಸಿದ ಮಹಾ ನಾಯಕ ಡಾ. ಬಿ.ಆರ್ ಅಂಬೇಡ್ಕರ್ ಅಂಥವರ ಬಗ್ಗೆ ಹಗುರವಾಗಿ ಮಾತನಾಡುವುದು ಇಡಿ ನಮ್ಮ ಭಾರತ ಸಹಿಸುವುದಿಲ್ಲ ಎಂದು ತಿಳಿಸಿದ್ದಾರೆ. ಅಮಿತ್ ಶಾ ಹಠಾವೋ ಭಾರತ್ ಬಚಾವೋ, ಅಮಿತ್ ಶಾ ಹಠಾವೊ ಸಂವಿಧಾನ ಬಚಾವೋ ಆಂದೋಲನ ಮಾಡಬೇಕಾಗುತ್ತದೆ ಎಚ್ಚರಿಕೆ ನೀಡಿದ್ದಾರೆ.